ಹಸ್ತಪ್ರತಿ ಭಾಂಡಾರದ ತಾಳೆಗರಿ ಪ್ರತಿ ಸಂಖ್ಯೆ ೮೫೨ (ರಕ್ಷಾಶತಕ) ಮತ್ತು ೮೨೧(ಪಂಪಾಶತಕ)ನ್ನು ಆಕರವಾಗಿ ಬಳಸಿಕೊಳ್ಳಲಾಗಿದೆ. ಹಸ್ತಪ್ರತಿಗೆ 'ಅ' ಎಂದು,ಮುದ್ರಿತ ಪ್ರತಿಗೆ 'ಆ' ಎಂದು ಸಂಕೇತ ಕೊಡಲಾಗಿದೆ. ಎರಡೂ ಪ್ರತಿಗಳಲ್ಲಿಶುದ್ಧಪಾಠವನ್ನು ಸ್ವೀಕರಿಸಿ, ಭಿನ್ನ ಪಾಠವನ್ನು ಅಡಿಯಲ್ಲಿ ಕೊಡಲಾಗಿದೆ.ಸೋಮೇಶ್ವರಶತಕ ಮತ್ತು ನಿಜಲಿಂಗಶತಕಗಳ ಪರಿಷ್ಕರಣಕ್ಕೆ ಡಾ. ಎಂ.ಎಸ್. ಸುಂಕಾಪುರ ಅವರು ಸಂಪಾದಿಸಿ, ಧಾರವಾಡದ ಶೋಭಾಗ್ರಂಥಮಾಲೆಯಿಂದ೧೯೬೯ರಲ್ಲಿ ಪ್ರಕಟಿಸಿದ 'ನಿಜಲಿಂಗಶತಕ ಮತ್ತು ಸೋಮೇಶ್ವರಶತಕ' ಎಂಬಮುದ್ರಿತ ಪ್ರತಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನಪೀಠದಕಾಗದ ಪ್ರತಿ - ೭೪೦ ( ಸೋಮೇಶ್ವರಶತಕ ) ಹಾಗೂ ಕಾಗದಪ್ರತಿ -೯೦೫ (ನಿಜಲಿಂಗಶತಕ)ಗಳನ್ನು ಬಳಸಿಕೊಳ್ಳಲಾಗಿದೆ. ಮೇಲಿನಂತೆ ಇಲ್ಲಿಯೂ ಹಸ್ತಪ್ರತಿಗೆ'ಅ' ಎಂದು, ಮುದ್ರಿತಪ್ರತಿಗೆ 'ಆ' ಎಂದು ಸಂಕೇತ ಕೊಡಲಾಗಿದೆ. ಎರಡೂಪ್ರತಿಗಳಲ್ಲಿ ಶುದ್ಧಪಾಠವನ್ನು ಸ್ವೀಕರಿಸಿ, ಭಿನ್ನಪಾಠವನ್ನು ಅಡಿಯಲ್ಲಿ ಕೊಡಲಾಗಿದೆ.ಅನುಬಂಧದಲ್ಲಿ ಸೇರಿಸಿದ 'ನಿಜಲಿಂಗಶತಕದ ಕಠಿಣ ಪದಗಳ ಭಾವಾನುವಾದ'ಮತ್ತು 'ಕೆಲವು ಸಂದರ್ಭ ಕಥೆಗಳು' ಭಾಗಗಳನ್ನು ಡಾ. ಎಂ. ಎಸ್. ಸುಂಕಾಪುರಅವರ ಕೃತಿಯಿಂದ ತೆಗೆದುಕೊಳ್ಳಲಾಗಿದೆ.
ಕೃತಜ್ಞತೆಗಳು
'ಕನ್ನಡದ ಮೇರು ಕೃತಿಗಳ ಮರುಮುದ್ರಣ - ಪ್ರಕಟಣಯೋಜನೆ'ಯಅಡಿಯಲ್ಲಿ ಈ ಶತಕ ಸಂಪುಟವನ್ನು ಸಿದ್ಧಪಡಿಸಿಕೊಡಲು ನನಗೆ ಅವಕಾಶನೀಡಿದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನಿರ್ದೇಶಕರಾದ ಶ್ರೀ ಮನು ಬಳಿಗಾರ ಅವರಿಗೆ, ಜಂಟಿ ನಿರ್ದೇಶಕರಾದಶ್ರೀ ಎಚ್. ಶಂಕರಪ್ಪನವರಿಗೆ, ಪ್ರಕಟಣಶಾಖೆಯ ಸಹಾಯಕ ನಿರ್ದೇಶಕರಾದಶ್ರೀಮತಿ ವೈ.ಎಸ್. ವಿಜಯಲಕ್ಷ್ಮಿ ಅವರಿಗೆ ಈ ಯೋಜನೆಯ ಆಯ್ಕೆ ಸಮಿತಿಅಧ್ಯಕ್ಷರಾದ ಡಾ. ಎಲ್. ಎಸ್. ಶೇಷಗಿರಿ ರಾವ್ ಅವರಿಗೆ ಅನಂತ ವಂದನೆಗಳು.ಹಸ್ತಪ್ರತಿಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಕನ್ನಡ ಅಧ್ಯಯನಪೀಠದಅಧ್ಯಕ್ಷರಾದ ಡಾ. ಕೆ.ಆರ್.ದುರ್ಗಾದಾಸ ಅವರಿಗೆ, ಪರಿಷ್ಕರಣ ಕಾರ್ಯದಲ್ಲಿ ವಿಶೇಷವಾಗಿನೆರವಾದ ಸಹಾಯಕ ಸಂಶೋಧಕ ಡಾ. ಈರಣ್ಣ ಹುರಳಿ ಅವರಿಗೆ, ತ್ವರಿತವಾಗಿ-ಅಷ್ಟೇ ಅಚ್ಚುಕಟ್ಟಾಗಿ ಅಕ್ಷರ ಸಂಯೋಜನೆ ಮಾಡಿಕೊಟ್ಟ ಡಾ. ಸರಸ್ವತಿದೇವಿಭಗವತಿ ಮತ್ತು ಡಾ. ಹನುಮಂತ ಮೇಲಿನಮನಿ ಅವರಿಗೆ, ಈ ಸಂಪುಟವನ್ನುಆದರದಿಂದ ಬರಮಾಡಿಕೊಳ್ಳುತ್ತಿರುವ ಕನ್ನಡ ಸಾರಸ್ವತಲೋಕಕ್ಕೆ ಅನಂತ ಕೃತಜ್ಞತೆಗಳು.
xxxix