ಪುಟ:ಶತಕ ಸಂಪುಟ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦

ಶತಕ ಸಂಪುಟ


ಪಿಂದೇನೇನಾಗಿ ಬಂದೆಂ ಮನುಜಜನನಮುಂ ತಾನಿದೆಂತಾಯ್ತು ಸಂಸಾ
ರಂ ದೋಷಂ ಕಾಮಲೋಭಾದಿಗಳೆನಗಮಿವೆಲ್ಲಿಂದೆ ಬಂದತ್ತು ಮತ್ತಂ
ಮುಂದೇನಾದಪ್ಪೆನೆಂದಾನರೆಯದೆ ಭಯದಿಂ ಶಂಕಿಸುತ್ತಿರ್ದಪೆಂ [ನಿಃ]
ಸಂದೇಹಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೧೦೧ ‖


 * *

ಪಂಪಾಶತಕ


-ಶ್ರೀಮದ್‌ರಾಜಕಳಾವತಂಸ ಧರೆ-ಚಂದ್ರಾರ್ಕಾಗ್ನಿ-ಜೀವಾನಿಲ
ವ್ಯೋಮಾಂಬುಪ್ರಕರಂಗಳಿಂ ಸಕಲಮಂ ರಕ್ಷಿಪ್ಪ ಸರ್ವೇಶ ಸು-
ತ್ರಾಮಾದಿತ್ರಿದಶವ್ರಜಾರ್ಚಿತಪದಾಂಭೋಜಾತ ಸದ್ಭಕ್ತಿಯಂ
ಪ್ರೇಮಂ ಕೈಮಿಗೆ ಮಾಡು ನೀನೆನಗೆ ಪಂಪಾ[ಶ್ರೀ] ಪುರಾಧೀಶ್ವರಾ ‖ ೧ ‖

ಪುಳಕದ ಹಾದಿಗೆಂದು ಪಥವಪ್ಪುದು ಕಣ್ಗಳ ಕೋಡಿಗೆಂದು ನೀ-
ರ್ಗಳ ಕಡೆಗಾಣ್ಬುದೆನ್ನ ಚರಣಂಗಳ ಲೀಲೆಗದೆಂದು ಕೀಲ್ಗಳ-
ಚ್ಚಳಿವುದು ಕೈಯ ಕಂಪದ ಕದಂ ತೆರೆದಪ್ಪುದು ತಪ್ಪದೀ ಮನೋ-
ಗಳಿತತರಾಬ್ಧಿಗೆಂದು ಮಿಗೆ ಮೇರೆಯಗಲ್ವುದು ಹಂಪೆಯಾಳ್ದನೇ ‖ ೨ ‖

ಪುಳಕದ ತೊಟ್ಟಿಲೊಳ್ ಬೆಮರ ಮಜ್ಜನದಿಂದೆಸಲೆಣ್ಣೆ(?)ಯಿಟ್ಟು ಕ–
ಣ್ಗಳ ಮೊಲೆವಾಲನೂಡಿ ತೊದಳಿಂದವೆ ಬಣ್ಣಿಸಿ ಹಾಡಿ ಕಂಪದಿಂ-
ದಳವಡೆ ತೂಗಿಯಚ್ಚಸುಖನಿದ್ರೆಯನಂದಮನುಂಟುಮಾಡಿ ನಿ-
ಶ್ಚಳನಿಜಭಕ್ತಿಯಿತ್ತು ಸಲೆ ರಕ್ಷಿಪುದೆಂದೆಲೆ ಹಂಪೆಯಾಳ್ದನೇ
‖ ೩ ‖
ಹರಹರ ಎನ್ನ ಕೈಯ ಹಸಿವೋಡಲಣಂ ತನುವಿಂದೆ ಪೂಜೆಯಂ
ವಿರಚಿಪೆನೆಂದೊ ಕಣ್ಗಳ ಬರ೦ ತಿಳಿಯಲ್ ಪೊಸನೋಟದಿಂದೆ ಕೆಂ-
ಕರಿಸುವೆನೆಂದೊ ಮೈಮರೆದು ಕಣ್ಗೆಡಲಪ್ಪಿ ಮನೋನುರಾಗದಿಂ