ಬುದೆ ಮಾತಕ್ಕಟ ತನ್ನ ಜೀವಮೆ ವಿರೂಪಾಕ್ಷಾ ವಿರೂಪಾಕ್ಷನಾ೧
ಮದಿನಾಗಳ್ ಪುದಿದಂತಿರಿರ್ಪುದುಮಿದೇನೀತಂಗೆನುತ್ತೆಲ್ಲರುಂ
ಪದೆದೆನ್ನಂ ನುಡಿವಂದದಿಂ ನೆನೆವನಿನ್ನೆಂದೋ ವಿರೂಪಾಕ್ಷನೇ೨‖ ೧೦ ‖
ಕ್ರಮದಿಂ ಪೂಜಿಪ ಪೂಜೆ ಮೆಲ್ಲನೆ ಸಡಿಲ್ದಾನಂದಮಳ್ಕಾಡುತಿ-
ರ್ಕೆಮ ಸೋತ್ಸಾಹದೆ ಕಣ್ಗಳೊಳ್ ಸುಖರಸಂ ಹಸ್ತಂಗಳೊಳ್ ಕಂಪನಂ
ಕ್ರಮದೊಳ್ ನರ್ತನಮಂಗದೊಳ್ ಪುಳಕಮಾ ಜಿಹ್ವಾಗ್ರದೊಳ್ ಕಂಪನಂ
ಭ್ರಮದಿಂ ಪುಟ್ಟಲದೆಂದು ಪೂಜಿಸುವೆನಾಂ ನಿನ್ನ ವಿರೂಪಾಕ್ಷನೇ" ‖ ೧೧ ‖
ಸತಿಪುತ್ರರ್ ಮಿತ್ರರಾಪ್ತರ್ ತನುಧನಮನವೆಂಬಿಂತಿವಂ ನಿತ್ಯಮೆಂದು-
ನ್ನತರ ವ್ಯಾಸಂಗದಿಂ ಮೆಯ್ಯರಿಯದೆ ಮರುಳಾಗಿರ್ದೆನೆನ್ನಂ ದುರಾಶಾ-
ವೃತನಂ ದುರ್ಮೋಹಿಯಂ ದುಸ್ತರತರವಿಷಯವ್ಯಾಪ್ತನಂ ದುರ್ವಿವೇಕೋ-
ದಿತನಂ ದುರ್ಬೋಧನಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷಲಿಂಗಾ ‖ ೧೨
‖
ಅನುಪಮದಾನಿಯಪ್ರತಿಮದಾನಿ ನಿರಂತರದಾನಿ ಸಂದ ಪೆಂ-
ಪಿನ ಘನದಾನಿ ಕೌತುಕದ ದಾನಿ ಮಹೋನ್ನತದಾನಿಯೆಂದು ನಿ-
ನ್ನನೆ ಪೊಗಳುತ್ತುಮಿಂತಿದೆ ಸಮಸ್ತ ಜಗಜ್ಜನವೀ ಸುಕೀರ್ತಿಗೆ-
ನ್ನನೆ ನಡೆ ನೋಡದಿರ್ಪಿರವದರ್ಕನುಕೂಲಮೆ ಹಂಪೆಯಾಳ್ದನೇ ‖ ೧೩ ‖
ನಾನಾಜನ್ಮಂಗಳೊಳ್ ಬಾರದ ಪರಿಭವಮಂ ಬಂದ ತನ್ನಂದಮಂ ತಾ-
ನೇನೆಂದೊದೆಳ್ಳನಿತ್ತಂ ನೆನೆಯದು ತನಗೆಂತಿಚ್ಚೆಯಂತಿರ್ದು ನಿನ್ನೀ
ಧ್ಯಾನಾರಂಭಕ್ಕಣಂ ಸಲ್ಲದು ಸುಡು ಚಿಃ ಮನ್ಮನೋವೃತ್ತಿ ನಿನ್ನಂ
ತಾನಾರೆಂ ನೀನೆ ಸಂತಂ ನಿಲಿಸಿದನೊಲವಿಂದಂ ವಿರೂಪಾಕ್ಷಲಿಂಗಾ"‖ ೧೪ ‖
ಪಸಿವಿಂದಂ ಬೇಂಟೆಗಂ ನಟ್ಟಡವಿಗೆ ನಡೆತಂದೇರಿ ಬಿಲ್ವಾಗ್ರಮಂ ವ್ಯಾ-
ಪಿಸದತ್ತಿತ್ತಂ ಮೃಗಧ್ಯಾನದೊಳಿರೆ ಶಿವರಾತ್ರಿವ್ರತಂಗೆಯ್ದನೆಂದಂ-
ದೊಸೆದಾ ಬೇಡಂಗೆ ಸಾರೂಪ್ಯದ ಘನಪದಮಂ ಕೊಟ್ಟೊಡಂ ದಾನಿಯೆಂದ-
ಪುಟ:ಶತಕ ಸಂಪುಟ.pdf/೬೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಶತಕ ಸಂಪುಟ