ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩


ರ್ಚಿಸಿ ನಿನ್ನಂ ನಂಬಿದೆಂ ರಕ್ಷಿಪುದೆಲೆ ಕೃಪೆಯಿಂದಂ ವಿರೂಪಾಕ್ಷನೆನ್ನಂ ‖ ೧೫ ‖
ಮೋಹಕ್ಕೋರೊರ್ಮೆ ಮಾತ್ಸರ್ಯದ ನುಡಿನೆಲೆಗೋರೊರ್ಮೆ ಸಂದಿರ್ದ


ಕಾ ಮೋ-
ತ್ಸಾಹಕ್ಕೋರೊರ್ಮೆ ಕೊರ್ವಿರ್ದೊದವಿದ ಮದಕೋರೊರ್ಮೆ ಪೆರ್ಚಿರ್ದ

ಲೋಭ

ವ್ಯೂಹಕ್ಕೋರೊರ್ಮೆ ಕೋಪೋನ್ನತಿಯ ಮಮತೆಗೋರೊರ್ಮೆ


ಮೆಯ್ವೆರ್ಚಿನಿಂ ದೇ-
ಹೋಹಂ ಎಂದೆಂಬುದಂ ಮಾಣಿಸು ಮನಕೆಯಿದೊಂದಂ ವಿರೂಪಾಕ್ಷ


ಲಿಂಗಾ ‖ ೧೬ ‖

ಮದನವಿರೋಧಿ ಬಾರ ದುರಿತಾಂತಕ ಬಾರ ಪುರಾರಿ ಬಾರ ಶಾ-
ರದಶಶಿಮೌಳಿ ಬಾರ ಫಣಿಕುಂಡಲ ಬಾರ ಮಹೇಶ ಬಾರ ಪು-
ಣ್ಯದ ನೆಲೆವೆರ್ಚೆ ಬಾರ ಸತತಂ ಪೊರೆವಾಳ್ದನೆ ಬಾರ ಮೇರೆದ-
ಪ್ಪಿದ ಕರುಣಾಬ್ಧಿ ಬಾರ ಹರ ಬಾರೆಲೆ ಬಾರೆಲೆ ಹಂಪೆಯಾಳ್ದನೇ ‖ ೧೭ ‖

ಕರಣಂಗಳ್ ಕಳೆಯೇರಿ ಲೋಚನಯುಗಂ ನೀರೇರಿ ಮೆಯ್ಯೆಲ್ಲವಂ-
ಕುರವೇರಲ್ ನುಡಿ ಕಂಪವೇರಿ ಚರಣಂಗಳ್ ಲೀಲೆಯೇರಲ್ ಮೊಗಂ
ಸಿರಿಯೇರಲ್ ತಲೆಗೇರಿದುತ್ಸವದೆ ನಿಮ್ಮಂ ಪೂಜಿಸುತ್ತಾನುಮಾ-
ದರದಿಂದೀಕ್ಷಿಸುತಾಡುತಿರ್ಪುದೆನಗಿನ್ನೆಂದೋ ವಿರೂಪಾಕ್ಷನೇ