ಪುಟ:ಶತಕ ಸಂಪುಟ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮

ಶತಕ ಸಂಪುಟ


ತ್ತಣ ಹರಿಯೆತ್ತಣಬ್ಜಭವನೆತ್ತಣ ವಾಸವನೆತ್ತಣಗ್ನಿಯೆ-
ತ್ತಣ ಯಮನೆತ್ತಣ ತ್ರಿದಶಸಂಕುಳವೆತ್ತಣಭಾಸ್ಕರೇಂದುಗಳ್
‖ ೩೮ ‖
ಬೆಳಗಿಂತೆಲ್ಲಿಯದಲ್ಲಿ ಪೋಗದೆ ಅಹಾ ಅಃ ಅಕ್ಕಟಾ ಬೇವುವ-
ಗ್ಗಳದಿಂದಂ ತ್ರಿಪುರಂಗಳಳ್ಕಮೆಯದಾವಂ ಸುಟ್ಟನಮ್ಮಮ್ಮ ಭೂ-
ತಳದೊಳ್ ನೀನರಿವಾಂತನಲ್ತುಸಿರದಿರ್ ಮತ್ತಾರ್‌ ದಿಟಂ ಪೇಳೆನಲ್
ತಿಳಿಯಲ್‌ ಹೋ ಮದನಾರಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ‖ ೩೯ ‖

ಮದನಂ ಗರ್ಜಿಸಿ ಬಿಲ್ಲುಮಂ ಸರಲುಮಂ ಕೈಕೊಂಡು ಬಂದಾರ್ದು ಸಂ-
ಮದದಿಂದೆಚ್ಚೊಡೆ ಸಚ್ಚರಿತ್ರವಿಭು ನಿಷ್ಕಾಮಿ ಸ್ವತಂತ್ರಂ ಸಕೋ-
ಪದೆ ಭುರ್ ಭುಗಿಲೆಂಬಿನಂ ನೆಗಳ್ದ ನೇತ್ರಜ್ವಾಲೆಯಿಂ ತೊಟ್ಟನೋ-
ವದೆ ಸುಟ್ಟಂ ಮದನಾರಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ ‖ ೪೦ ‖

ಮುಳಿದು ಭುಗಿಲ್ ಭುಗಿಲ್ ಭುಗಿಲೆನಲ್ ಸುಡನೇ ತ್ರಿಪುರಂಗಳಂ ಪೊಡ-
ರ್ಪಳಿಯೆ ಘರಿಲ್ ಘರಿಲ್ ಘರಿಲೆನಲ್ ಸುಡನೇ ಕುಸುಮಾಸ್ತ್ರನಂ ಕರಂ
ಕಳಿಯೆ ಛಿಳಿಲ್ ಛಿಳಿಲ್ ಛಿಳಿಲೆನಲ್ ಸುಡನೇ ಯಮನಂ ಮನುಷ್ಯ ನೀಂ
ತಿಳಿವೊಡನೀತಿಯಂ ಬಿಸುಟು ನಂಬಿ ಶರಣ್ಬುಗು ಹಂಪೆಯಾಳ್ದನಂ ‖ ೪೧


ಭಕ್ತರ ಬಂಧು ಭಕ್ತರ ಮಹಾನಿಧಿ ಭಕ್ತರ ಭಾವಸಂಪದಂ
ಭಕ್ತರ ಮಾತೆ ಭಕ್ತರ ಪಿತಂ ನಿಜಭಕ್ತರ ಪುಣ್ಯದೆಳ್ತರಂ
ಭಕ್ತರ ಮೂರ್ತಿ ಭಕ್ತರ ಸುಧಾಂಬುಧಿ ಭಕ್ತರ ಜೀವದುನ್ನತಂ
ಭಕ್ತರ ಪೆಂಪು ಭಕ್ತಜನಕಂ ನೆರೆ ಹಂಪೆಯದೇವನೊಚ್ಚತಂ
‖ ೪೨ ‖

ಶರಣಂ ಸಂಸಾರಿಯೇ ಮಾಣ್ ಪುಸಿ ಪುಸಿ ಶರಣಂ ಕಾಮಿಯೇ ಪೇಳಲೆಂತುಂ
ಶರಣಂ ತಾಂ ಕ್ರೋಧಿಯೇ ಸಲ್ಲದು ತೆಗೆ ಶರಣಂ ಮರ್ತ್ಯನೇ ಅಲ್ಲವೈ ಕೇಳ್
ಶರಣಂ ನಿರ್ಮಾಯನೆಂತುಂ ಶರಣನತುಳನಿಷ್ಕಾಮಿಯೆಲ್ಲಂದದಿಂದಂ