ಪುಟ:ಶತಕ ಸಂಪುಟ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯


ಶರಣಂ ಶಾಂತಂ ಸುಮರ್ತ್ಯಂ ಶರಣನಮಮ ತಾನೇವಿರೂಪಾಕ್ಷಲಿಂಗಂ ‖ ೪೩


ಅದು ಕಣ್ಣಪ್ಪನ ಪೂಜೆಯೋಜೆ ಬಗೆಯಲ್ ವೇದೋಕ್ತಮೇ ಬೇಂಟೆಯಾ-
ಡಿದ ಜೊಮ್ಮಣ್ಣನ ಭಕ್ತಿಭಾವವರಿಯಲ್ ವೇದೋಕ್ತಮೇ ತಂದೆಯೆ-
ನ್ನದೆ ಚಂಡೇಶ್ವರಪಿಳ್ಳೆಯಾಡಿದುದು ತಾಂ ವೇದೋಕ್ತಮೇ ಆತನೊ-
ಲ್ದುದೆ ವೇದಾಗಮನೀತಿ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ ‖ ೪೪ ‖
ಉಣಿಸುಂ ಸ್ತ್ರೀಸಂಗಮುಂ ನಿದ್ರೆಯುಮಿವು ಮಲಮೂತ್ರಂಗಳುಂ


ಕುಂದುಗುಂ ಸದ್
ಗುಣಮುಂ ಶಾಂತತ್ವಮುಂ ಕಾಂತಿಯುಮುರುತರಮಾರೋಗ್ಯಮುಂ


ಪೆರ್ಚುಗುಂ ಸಂ-
ದಣಿಸಿರ್ದಾಕ್ರೋಧಮುಂ ಲೋಭಮುಮತಿಭಯಮುಂ ಮೋಹಮುಂ


ಗರ್ವಮುಂ ತ-
ಲ್ಲಣಮುಂ ತೀರ್ಗುಂ ದಿಟಂ ನಿಮ್ಮಯೆ ನಿಜಶರಣಂಗಂವಿರೂಪಾಕ್ಷಲಿಂಗಾ ‖ ೪೫


ಪರಿಕಿಪರುಂಟೆ ಹಂಪೆಯಧಿನಾಥನ ಭಕ್ತರ ಸದ್ಗುಣಂಗಳಂ
ಹರಹರ ಪೇಳ್ವೊಡೆನ್ನಳವೆ ಕೇಳ್ವೊಡದಾರಳವೈ ಪುರಾತನರ್
ಪರಿದುದೆ ಗಂಗೆ ನಿಂದೊಡದು ತೀರ್ಥಮೊಡರ್ಚಿತೆ ಕಾರ್ಯಮೆಂದುದೇ
ಹರವರಿಯಿರ್ದುದೇ ಸಭೆ ನಿರೀಕ್ಷಣೆಗೆಯ್ದುದೆ ಲೋಕಪಾವನಂ‖ ೪೬ ‖

ಇದು ದಿಟವೆಮ್ಮ ಹಂಪೆಯಧಿನಾಥನ ಭಕ್ತರ ಮುಂದದಾವನೋ