ಪುಟ:ಶತಕ ಸಂಪುಟ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೦

ಶತಕ ಸಂಪುಟ


ಅದಿರದೆ ನಿಲ್ವನಂತಕ ಮನೋಜ ಚತುರ್ಮುಖನಬ್ಜನೇತ್ರನೆಂ-
ದೊದವಿದತರ್ಕ್ಯರೆಂಬವರ್ಗೆ ಸುಟ್ಟಿಸಬಾರದು ರೂಹುದೋರಬಾ-
ರದು ತಲೆಯೆತ್ತಬಾರದೆಮೆಯಿಕ್ಕಲೆಬಾರದಿಳಾತಳಾಗ್ರದೊಳ್
‖ ೪೭ ‖

ಉರಿ ನಡೆವಂತೆ ಭಾನು ನಡೆವಂತೆ ಸಿಡಿಲ್ ನಡೆವಂತೆ ನಿನ್ನ ಭ-
ಕ್ತರ ನಡೆ ದೂಷಕಾವಳಿಗೆ ಹಂಪೆಯ ದೇವ ಸುಸಾತ್ತ್ವಿಕರ್ಗೆ ಸ-
ಚ್ಚರಿತ ಶಿವಾರ್ಚಕರ್ಗೆ ಸುಖ ಪೂರಿತಶಾಂತಿಭೂಷಣರ್ಗೆ ಕೇಳ್
ಸಿರಿ ನಡೆವಂತೆಯಿಂದು ನಡೆವಂತೆ ಸುಖಂ ಸುಳಿವಂತೆ ಧಾತ್ರಿಯೊಳ್ ‖ ೪೮ ‖

ಘನಚೋದ್ಯಂ ನಿನ್ನ ಭಕ್ತಾಳಿಯ ನಡೆವಳಿ ಬೇರೊಂದು ಸಂಸೃಷ್ಟಿ ಬೇರೊಂ-
ದು ನಿಜಂ ಬೇರೊಂದು ದೇಹಾಕೃತಿ ಹರಹರ ಬೇರೊಂದು ಸಂಪತ್ತಿ


ಬೇರೊಂ-
ದನು ಬೇರೊಂದಿಚ್ಛೆ ಬೇರೊಂದಘಟಿತಂ ಬೇರದೊಂದಾಜ್ಞೆ ಬೇರೊಂ-

ದಿನಿದಾಹಾ ಕೌತುಕಂ ಬಣ್ಣಿಸಲರಿದಂದೋ ಹೋ ವಿರೂಪಾಕ್ಷಲಿಂಗಾ‖ ೪೯ ‖

ಜಾಣರದುಂಟದುಂಟಹಹ ದುರ್ವಿಷಯಂಗಳನೊಂದಿ ಬಾಳ್ವವರ್
ಜಾಣರದುಂಟದುಂಟಕಟ ಕರ್ಮದ ಕೈಯೊಳೆ ಸತ್ತು ಹೋದವರ್
ಜಾಣರದುಂಟದುಂಟಮಮಕಾಲನ ಬಾಧೆಗೆ ಬಿಳ್ದು ನೋವವರ್
ಜಾಣರೆ ಜಾಣರಿಂದಿಹಪರಕ್ಕೆಲೆ ಭಕ್ತರೆ ಹಂಪೆಯಾಳ್ದನಾ
‖ ೫೦ ‖

ಇಲ್ಲಿ ಜಗಕ್ಕೆ ಪೂಜಿತರುಮಲ್ಲಿ ಪರಕ್ಕೆ ವಿಶೇಷ ಪೂಜ್ಯರಿಂ-
ತಿಲ್ಲಿಯುಮಲ್ಲಿಯುಂ ಮೆರೆವರೆಲ್ಲಿಯುಮೆಮ್ಮ ಶಿವಾರ್ಚಕರ್ಗೆ ಮಾಣ್
ಎಲ್ಲಿಯ ವಿಷ್ಣುವೆಲ್ಲಿಯಜನೆಲ್ಲಿಯ ವಾಸವನೆಲ್ಲಿಯಗ್ನಿಯಿಂ-
ತೆಲ್ಲಿಯ ಮಾತು ಮೂಜಗದೊಳಾರ್ ಸರಿ ಪೇಳೆಲೆ ಹಂಪೆಯಾಳ್ದನೇ ‖ ೫೧ ‖