ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧


ಕಲಿಯಾತಂ ಕಾಂತನಾತಂ ಸುಮನಚರಿತನಾತಂ ಕಲಾಕಲ್ಪನಾತಂ
ಕಲೆಯಾತಂ ಭೋಗಿಯಾತಂ ಚತುರವಿನುತನಾತಂ ಚಿದಾನಂದನಾತಂ
ಛಲಿಯಾತಂ ಸತ್ಯನಾತಂ ಬುಧಜನಹಿತನಾತಂ ಜಗತ್ ಪೂಜ್ಯನಾತಂ
ಸಲೆ ನಿಮ್ಮಂ ನಂಬಿ ನಿಚ್ಚಂ ಮರೆಯದೆ ನೆನವಾತಂ ವಿರೂಪಾಕ್ಷಲಿಂಗಂ‖ ೫೨


ನೋಡಿತೆ ಮಂಗಳಂ ನೆನಪೆ ಮಂಗಳಮಿರ್ದೆಡೆ ಮಂಗಳಂ ಕರಂ
ಪಾಡಿತೆ ಮಂಗಳಂ ಶರಣರೆಂದುದೆ ಮಂಗಳಮೊಲ್ದವರ್ ಮನಂ
ಗೂಡಿತೆಮಂಗಳಂ ನಡೆಯೆ ಮಂಗಳಂ ಮಾಡಿತೆ ಮಂಗಳಾತ್ಮಕಂ
ಮಾಡಿತೆ ಮಂಗಳಂ ಪರಮಮಂಗಳವೈ ಎಲೆ ಹಂಪೆಯಾಳ್ದನೇ ‖ ೫೩ ‖

ಕಲಿಯಾವಂ ಶಿವಭಕ್ತನಚ್ಚಸುಖಿಯಾವಂ ಭಕ್ತನಾವರ್ತದಿಂ
ಛಲಿಯಾವಂ ಶಿವಭಕ್ತನುತ್ತಮನದಾವಂ ಭಕ್ತನೆಲ್ಲಂದದಿಂ
ಬಲಿಯಾವಂ ಶಿವಭಕ್ತನೂರ್ಜಿತನದಾವಂ ಭಕ್ತನೀಶಂಗೆ ಬೇ-
ಳ್ಪೊಲನಾವಂ ಶಿವಭಕ್ತನಾತನೆಲೆ ಸದ್ಭಕ್ತಂ ವಿರೂಪಾಕ್ಷನಾ
‖ ೫೪ ‖

ಕೊಂದಂ ಭಕ್ತಿಪುರಸ್ಸರಂ ಮಗನನಾ ಶ್ರೀಯಾಳಗೇನಾಯ್ತು ಮೇಣ್
ಕೊಂದಂ ಭಕ್ತಿಪುರಸ್ಸರಂ ಜನಕನಂ ಚಂಡೇಶಗೇನಾಯ್ತು ಪೋ
ಕೊಂದಂ ಭಕ್ತಿಪುರಸ್ಸರಂ ಜನನಿಯಂ ರಾಮಂಗದೇನಾಯ್ತು ಕೇಳ್
ಕುಂದೇ ತಾನದು ಭಕ್ತಿಯುಳ್ಳೊಡೆ ಸದಾಚಾರಂ ವಿರೂಪಾಕ್ಷನಾ‖ ೫೫ ‖

ಮದಮಂ ಮಾಣ್ದು ದುರಾಶೆಯಂ ಪರೆದು ಕಾಮಾಸಕ್ತಿಯಂ ಬಿಟ್ಟು ಸ-
ಮ್ಮುದದಿಂ ಲಿಂಗಮನೊಲ್ದು ನೋಡಿ ನಲಿವಾ ಸದ್ಭಕ್ತನಂತಾತನಿ-
ರ್ದುದೆ ತಾರಾಚಲಮಾತನಿರ್ದುದೆ ಹಿಮಾದ್ರೀಂದ್ರಂ ಬಳಿಕ್ಕಾತನಿ-
ರ್ದುದೆ ವಾರಾಣಸಿಯಾತನಿರ್ದುದೆ ವಿರೂಪಾಕ್ಷಂಗೆ ಪಂಪಾಪುರಂ ‖ ೫೬ ‖