ಪುಟ:ಶತಕ ಸಂಪುಟ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೨

ಶತಕ ಸಂಪುಟ


ಪೆರತೊಂದಂ ನುಡಿಯಂ ಪ್ರಪಂಚರಹಿತಂ ಕಾರ್ಪಣ್ಯಮಂ ಮಾಡನೆ-
ಳ್ದೆರಗಂ ಕಾಮದ ಬಟ್ಟೆಯತ್ತಲೆಳಸಂ ತರ್ಕಕ್ಕೆ ಮಾತ್ಸರ್ಯವೆಂ-
ದರೆಯಂ ಲೋಕದ ಮಾನವರ್ಗೆ ಮಣಿಯಂ ಸದ್ಭಕ್ತಸತ್ಸಂಗಮಂ
ತೊರೆಯಂ ಸತ್ಯಮನಲ್ಲದಾಡನಚಲಂ ಭಕ್ತಂ ವಿರೂಪಾಕ್ಷನಾ‖ ೫೭ ‖

ನಿರಪೇಕ್ಷಂ ಕರುಣಾಕರಂ ಸುಖಮಯಂ ಶಾಂತಂ ಮಹೋತ್ಸಾಹಿ ಭ-
ಕ್ತಿರತಂ ಮಂಗಳಮೂರ್ತಿ ಲಿಂಗಸುಭಗಂ ಸಂತೋಷಿ ಸತ್ಯಂ ಮಹೇ-
ಶ್ವರನುರ್ವೀಜನವಂದ್ಯನುನ್ನತನನೇಕಾಶ್ಚರ್ಯಯುಕ್ತಂ ಮಹೇ-
ಶ್ವರನಾತಂಗರಿದುಂಟೆ ಹಂಪೆಯ ವಿರೂಪಾಕ್ಷ ಪ್ರಸಾದಾನ್ವಿತಂ
‖ ೫೮ ‖

ಶಿವಭಕ್ತರ್ ಮುಟ್ಟಿದಂಭಃಕಣಮೆ ಸಕಲತೀರ್ಥಂಗಳೆಂದೆಂಬುದಂ ಕಂ-
ಡೆವಲಾ ಕಣ್ಣಪ್ಪನೊಳ್ ಮಾಡಿದುದೆ ಜಗಕೆ ಸನ್ಮಾರ್ಗವೆಂದೆಂಬುದಂ ಕಂ-
ಡೆವಲಾ ಜೊಮ್ಮಣ್ಣನೊಳ್ ಮೆಟ್ಟಿದ ಧರೆ ಪರಮ ಕ್ಷೇತ್ರವೆಂದೆಂಬುದಂ ಕ೦-
ಡೆವಲಾ ಭೋಗಣ್ಣನೊಳ್ ಹೋ ಶರಣಂ ಪರದೈವಂವಿರೂಪಾಕ್ಷಲಿಂಗಾ ‖ ೫೯

ನತರಾಗಲ್ ಕಾದಪರ್ ನಿಂದೊಡೆ ಸರಭಸದಿಂ ಕೊಂದಪರ್ ಭೀತಿಯೊಳ್
ಸಂ-
ಯುತರಾಗಲ್ ಬಿಟ್ಟಪರ್ ತಾಂ ಮರೆವುಗಲಸುವಿತ್ತಾಗ ಸೈತೊಡಲತ್ಯು-
ನ್ನತೆಯಿಂ ನಾಕೋರ್ವಿಯಿಂ ಜೀವಮನುರೆ ಕುಡುವರ್ ಮಾನದೊಳ್


ಶೌರ್ಯದೊಳ್ ವಾ-
ರತೆಯೊಳ್ ಭಕ್ತರ್ಗೆ ಪೋ ಮಾಣ್ ಸರಿದೊರೆ ಸಮನಾಮಂ


ವಿರೂಪಾಕ್ಷಲಿಂಗಾ

‖ ೬೦ ‖