ಮೃಡನೆದ್ದಾಡನೆ ನಮ್ಮ ಗುಂಡಯನ ಮುಂದಾ ದಾಸಿಮಯ್ಯಂ ಕುಡಲ್
ಉಡನೇ ಸೀರೆಯನುಣ್ಣನೇ ಸಿರಿಯನಾಳ್ವಂ ಪೇಳೆ ಕೈಲಾಸಮಂ
ಕುಡನೇ ಸೂರೆಯ ಚೇರಮಾಂಕಗೆ ವಿರೂಪಾಕ್ಷಂ ಲಲಾಟೇಕ್ಷಣಂ ‖ ೬೬ ‖
ಕೊಡಗೂಸೊರ್ವಳದೊಂದು ಬಟ್ಟಲೊಳೆ ಪಾಲಂ ತಂದು ಮುಂದಿಟ್ಟು ನೀಂ
ಕುಡಿಯೆಮ್ಮವ್ವೆ ದಿಟಂ ಕರಂ ಬಡಿವ೧ಳೆಂದತ್ತತ್ತು೧ ಕಾರ್ಪಣ್ಯದಿಂ
ನುಡಿಯಲ್ಕಾ ನುಡಿಗಂಜಿ ತಾನರರೆ ಕಾರುಣ್ಯಾಕರಂ ಜೂಳಿಯಿಂ
ಕುಡಿದಂ ಪಾಲನದೇಂ ಕೃಪಾಳುವೊ ವಿರೂಪಾಕ್ಷಂ ಲಲಾಟೇಕ್ಷಣಂ ‖ ೬೭ ‖
ಮುದಮಂ ಧಾತ್ರಿಗೆ ಮಾಳ್ಪುದಾವುದು ಗುಣಾಧೀಶಾಭಿಧೇಯಕ್ಕದಾ-
ವುದು ವಾಚಾಸ್ಪದಮೆಂಬುದಾವುದು ಶಿವಾಚಾರಂ ಶಿವಾಚಾರಮ-
ಲ್ಲದೆ ಬೇರೆದು ತಾನೆಯೂರ್ಜಿತ ಗಡಂ ನಂಬೀಗ ಮುಂ ಸಾರ್ದು ನೀಂ
ಪದಪಿಂ ಮಾನವ ಮಾಡು ಲೇಸಿದು ಶಿವಾಚಾರಂ ವಿರೂಪಾಕ್ಷನಾ ‖ ೬೮ ‖
ಅನುಪಮಮಾರ್ಗವೆಮ್ಮ ಶಶಿಮೌಳಿಯ ಸಚ್ಚರಿತಂ ಧರಿತ್ರಿಗೊ-
ರ್ವನೆ ಗಣನಾಥನೆಂಬ ಶಿವಭಕ್ತನ ನೇಮವನೊಲ್ದು ನೋಡಿ ಮ-
ಚ್ಚನೆ ಸುಖದೋರಿ ಲೋಕವರಿಯಲ್ ಪೆಗಲೇರಿಸಿಕೊಂಡುಪೋದನಾ-
ತನನನಿಮಿತ್ತಬಂಧುವನದೇನೆನುತಿರ್ದಪೆ ಹಂಪೆಯಾಳ್ದನಂ
‖ ೬೯ ‖
ಸ್ಮರನಿಂ ಬೆಂದುರಿವಂಗೆ ರೋಗತತಿಯಿಂದಂ ನೊಂದಳಲ್ವಂಗೆ ನಿ-
ಷ್ಠುರಮುಗ್ರಂ ಕಲುಷಂಗಳಿಂ ಬಳಲ್ವವಂಗತ್ಯುಗ್ರತಾಪಂಗಳಿಂ
ಕೊರಗುತ್ತಳ್ಕುವವಂಗೆ ಶತೃಭಯದಿಂ ಬೇಳಾಗಿ ಬೀಳ್ವಂಗೆ ಸಾ-
ದರದಿಂ ಕಾಯಲಿದೊಂದೆ ಸಾಲ್ವುದು ದಿಟಂ ನಾಮಂ ವಿರೂಪಾಕ್ಷನಾ‖ ೭೦ ‖
ಮನಮೊಸೆದರ್ಚಿಸರ್ಚಿಸು ಪೊಗಳ್ ಪೊಗಳಾಳ್ದನನಾಳ್ದನಂ ಕರಂ
ನೆನೆ ನೆನೆ ನೋಡು ನೋಡು ಮರಿಗೊಳ್ ಮರಿಗೊಳ್ ನೆರಿನಂಬು ನಂಬು
ಕೆ-
ಪುಟ:ಶತಕ ಸಂಪುಟ.pdf/೭೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಶತಕ ಸಂಪುಟ