ಪುಟ:ಶತಕ ಸಂಪುಟ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೮

ಶತಕ ಸಂಪುಟ


ಪೋಗೆನೆ ಪೋಪ ಬಾರೆಲವೊ ಬಾರೆನೆ ಜೀಯ ಹಸಾದವೆಂದು ಬೆ-
ಳ್ಳಾಗುತೆ ಬರ್ಪ ಮಾಣೆಲವೊ ಸುಮ್ಮನಿರೆಂದೊಡೆ ಸುಮ್ಮನಿರ್ಪ ಮ-
ತ್ತಾಗಳೆ ಝಂಕಿಸಲ್ ನಡುಗಿ ಬೀಳುವ ಸೇವೆಯ ಕಷ್ಟವೃತ್ತಿಯಂ
ನೀಗಿದೆನಿಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೇ‖ ೮೮ ‖

ಎಲೆಲೆಲೆ ಮೆಟ್ಟಿ ಕೀಳ್ತನರಿಯಾ ಕಮಲೋದ್ಭವನೂರ್ಧ್ವವಕ್ತ್ರಮಂ
ತಲೆಕೆಳಗಾಗಲೆತ್ತಿರಿದನಂದರಿಯಾ ನಲವಿಂ ಮುಕುಂದನ-
ಗ್ಗಲಿಸುವ ದೇಹಮಂ ತೊವಲನುರ್ಚಿದನೆಂದರಿಯಾ ಗಜಾಸುರಾ
ಕಲಿತಶರೀರಮಂ ಬಿಡು ಪೊಡರ್ವವನಾವನೊ ಹಂಪೆಯಾಳ್ದನೊಳ್‖೮೯ ‖

ಮನುಜರ್ ಗಾವಿಲರೇನನೆಂಬೆನಳಿಪಂಗಾರ್ತಂಗೆ ದಂಭಂಗೆ ದು-
ರ್ಜನಶೀಲಂಗೆ ಶಿವೋಪಜೀವನವೃಥಾಲಾಪಂಗೆ ಚಿಃ ಕಾಕಭಾ-
ಜನಮಂ ಮಾಡುವರಲ್ಲದಚ್ಚ ಶಿವಭಕ್ತರ್ಗೀಶಯುಕ್ತರ್ಗೆ ಲಾಂ-
ಛನಧಾರರ್ಗೊಲಿದೀವರಾರೊಳರೆ ಪೇಳ್ ಪಂಪಾವಿರೂಪಾಕ್ಷನೇ‖ ೯೦ ‖

ಶಿವ ಶಿವ ಪುಣ್ಯಬಂಧುವೆ ಪುರಾತನಬಂಧುವೆ ಸರ್ವಜೀವಬಂ-
ಧುವೆ ಪರಮಾರ್ಥಬಂಧುವೆ ಸುಖಪ್ರದಬಂಧುವೆ ಬಾರನಾಥಬಂ-
ಧುವೆಯನಿಮಿತ್ತ ಬಂಧುವೆ ಮನೋಹರಬಂಧುವೆ ಅತ್ಯಪೂರ್ವ ಬಂ-
ಧುವೆ ಸಕಲೈಕ ಚೇತನಸುಬಂಧುವೆ ಬಂಧುವೆ ಹಂಪೆಯಾಳ್ದನೇ‖ ೯೧ ‖

ಎರಡುಂಟೆಂದೆನುತಿರ್ಪ ಪಾತಕರ ಮಾತಂ ಮೀರುವೆಂ ಮೀರುವೆಂ
ಹರನೊರ್ವಂ ಗುರುವೆಂಬುದುಂ ಧರಣಿಗಂ ತಾಂ ಸಾರುವೆಂ ಸಾರುವೆಂ
ಪರವಾದಿಪ್ರಕರಕ್ಕೆ ತಕ್ಕೊಡೆ ವಿರೂಪಾಕ್ಷಪ್ರಸಾದತ್ವದಿಂ
ವರದೃಷ್ಟಾಂತಮನೀಗಳೀಗಳೊಲವಿಂದಂ ತೋರುವೆಂ ತೋರುವೆಂ ‖ ೯೨


ಜಗದೊಳಗೆಲ್ಲ ನೋಡುವೊಡಸತ್ಯಮೆ ತೀವಿ ತುಳುಂಕುತಿರ್ಪುದಂ