ಕೆಳೆಯೇ ಸರ್ವರೊಳುತ್ತಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೧೪ ‖
ಸರಿಯೇ ಸೂರ್ಯಗೆ ಕೋಟಿಮಿಂಚುಬುಳುಗಳ್ ನಕ್ಷತ್ರವೆಷ್ಟಾದೊಡಂ
ದೊರೆಯೇ ಚಂದ್ರಗೆ ಜೀವರತ್ನಕೆಣೆಯೇ ಮಿಕ್ಕಾದ ಪಾಷಾಣಗಳ್
ಉರಗೇಂದ್ರಂಗೆ ಸಮಾನಮೊಳ್ಳೆಯೆ ಸುಪರ್ಣಂಗೀಡೆ ಕಾಕಾಳಿ ಸ-
ಕ್ಕರೆಗುಪ್ಪಂ ಸರಿಮಾಳ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೫ ‖
ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ-
ಜನಕಂ ಸತ್ಫಲಚಂದನಾದಿಯನುಲೇಪಂಗಳ್ಗೆ ಸಮ್ಮೋಹ ಸಂ-
ವನಿತಾ ಸಂಗಕೆ ರಾಜಭೋಗಕೆ ಸುವಿದ್ಯ೦ಗಳ್ಗದಾರಾದೊಡಂ
ಮನದೊಳ್ ಕಾಮಿಸಿ ನೋಡರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೧೬
‖
ಗತಿಯಿಂ ಗಾಡಿಯ ಸೊಂಪಿನಿಂ ಗಮಕದಾ ಗಾಂಭೀರ್ಯದಿಂ ನೋಟದಾ
ಯತದಿಂ ಸನ್ಮೃದುವಾಕ್ಯದಿಂ ಸರಸದಿಂ ಸಂಗೀತ ಸಾಹಿತ್ಯದಿಂ
ಪ್ರತಿಪಾಡಿಲ್ಲದ ರೂಪಿನಿಂ ಪ್ರವುಢಿಯಿಂದೆಯ್ತರ್ಪ ಪಾದಾಕ್ಷಿಗಂ
ಯತಿ ತಾನಾದರು ಸೋಲನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೭
‖
ಕೊಲುವಾ ಕೂಟವು ನಷ್ಟಮಪ್ಪ ಕೆಲಸಂ ಕೈಲಾಗದಾರಂಬಮುಂ
ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ ನೀಚಾಶ್ರಯಂ
ಹಲವಾಲೋಚನೆ ಜೂಜುಲಾಭ ಮನೆಮಾರಾಟಂ ರಸಾದ್ಯೌಷಧಂ
ಫಲವ ಭ್ರಾಂತಿಯ ತೋರ್ಪುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೧೮
‖
ಸತಿಯಾಲಾಪಕೆ ಸೋಲ್ವ ಜೂಜಿಗೆ ಖಳರ್ ಕೊಂಡಾಡುತಿರ್ಪಲ್ಲಿಗಂ
ಅತಿಪಾಪಂ ಬಹ ಕಾರ್ಯಕಲ್ಪವಿಷಯಕ್ಕಂ ದಾಸಿಯಾ ಗೋಷ್ಠಿಗಂ
ಪ್ರತಿ ತಾನಿಲ್ಲದ ಮದ್ದು ಮಂತ್ರಮಣಿಗಂ ಸಂದೇಹಗೊಂಡಲ್ಲಿಗಂ
ಮತಿವಂತರ್ ಮರುಳಪ್ಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೯
ಪುಟ:ಶತಕ ಸಂಪುಟ.pdf/೮೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಶತಕ ಸಂಪುಟ