‖
ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗಿಯಂ ೧ಪೆಂಡಿರಂ೧
ಬಡಿದುಂ ಬೈವನ ನಂಟರುಣ್ಣಲುಡಲುಂಟಾಗಿರ್ದೊಡಂ ತಾಳದಾ
ಕಡುಪಾಪಿಷ್ಠನ ಜಾಣ್ಮೆಯಿಲ್ಲದನನಿಷ್ಟಂ ಮಾಳ್ಪನಂ ೨ನೋಡಿಯುಂ
ನುಡಿಸಲ್ ಸಜ್ಜನರೊಲ್ವರೇ೨ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೨೦ ‖
ಅವಿನೀತಂ ಮಗನೇ ಅಶೌಚಿ ಮುನಿಯೇ ಬೈವಾಕೆ ತಾಂ ಪತ್ನಿಯೇ
ಸವಿಗೆಟ್ಟನ್ನವದೂಟವೇ ಕುಜನರೊಳ್ ಕೂಡಿರ್ಪವಂ ಮಾನ್ಯನೇ
ಬವರಕ್ಕಾಗದ ಬಂಟನೇ ಎಡರಿಗಂ ತಾನಾಗದಂ ನಂಟನೇ
ಶಿವನಂ ಬಿಟ್ಟವ ಶಿಷ್ಟನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೨೧ ‖
ಪೊರೆದುಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್
ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಹೋರಾಡವೇ ತಿತ್ತಿಗಳ್
ಮೊರೆಯುತ್ತೇನುಸಿರಿಕ್ಕವೇ ಗ್ರಹಂ ಗೃಹ ಚೆಲ್ವಾಂತಿರಲ್ ಸೇರದೇ-
೧ನಿರಲೇಕಜ್ಞರನೇಕದಿಂ೧ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೨೨ ‖
ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೈವಲ್ಲಿ ಬಲ್
ಪುಲಿಗಳ್ ಸಿಂಗಂಗಳಿಕ್ಕೆಯಲ್ಲಿ ಪರಸ್ತ್ರೀಯಿರ್ದಲ್ಲಿ ಕುಗ್ರಾಮದೊಳ್
ಗೆಲವಂ ತೋರದೆ ದುಃಖಮಪ್ಪಯೆಡೆಯೊಳ್ ಭೂತಂಗಳಾವಾಸದೊಳ್
ಸಲೆ ಬಲ್ಲರ್ ನಿಲಲಾಗದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೨೩ ‖
ತವೆ ಸಾಪತ್ನಿಯರಾಟ ಸಾಲ ಮಧುಪಾನಂ ಬೇಟದಾ ಜಾರಿಣೀ
ನಿವಹಂ ಮಾಡುವಾ ಮಾಟಮಂತುಟಮಿತಂ ಮೃಷ್ಟಾನ್ನಮೆಂದೂಟ ದ್ಯೂ
ತವನಾಡುತ್ತಿಹ ಪೋಟ ಸೂಳೆಯರೊಳೊಲ್ದಿರ್ಪಾಟಮಿಂತೆಲ್ಲಮುಂ
ಸವಿಯಾಗಂತ್ಯದಿ ಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೨೪ ‖
ಪುಟ:ಶತಕ ಸಂಪುಟ.pdf/೮೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೪೫