ಗಲು ಮೃಷ್ಟಾನ್ನವು ಸರ್ಪಕಾಯ್ವ ಧನಮಂ ಲುಬ್ದಾರ್ಜಿತೈಶ್ವರ್ಯಮುಂ
ಹೊಲೆಪಾಡಿಂದಲಿ ಕೂಡಲಿಕ್ಕೆ ಪೆರರ್ಗಂ ತಾನಾಗದೇ ಪೋಗುವೋಲ್
ಗಳಿಸೇನುಣ್ಣದೆ ಪೋಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೦ ‖
ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ
ಮರಗಳ್ ಪುಟ್ಟವೆ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ
ನಿರುತಂ ೨ಸತ್ಕವಿಗೊರ್ವಗರ್ವಿ ಪುಸಿಯುತ್ತುಂ೨ ಲೋಭಿಯಾಗಲ್ ನಿಜಂ
ಧರೆಯೋಳ್ ದಾತರು ಪುಟ್ಟರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೧ ‖
ಗಿಡುವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್
ಕಡುಕಾರ್ಪಣ್ಯದಿ ಕೇಳ್ವವೇ ೩ಶಿಖಿಜಲೋರ್ವೀ ಮಾರುತಾ೩ಕಾಶಮಂ
ಮೃಡ ನೀನಲ್ಲದದಾವ ಸಾಕುವ ಜಗಕ್ಕಂ ಪ್ರೇರಕಂ ನೀನೆಲೈ
ಕೊಡುವರ್ ಕೊಂಬರು ಮರ್ತ್ಯರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೨ ‖
ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ-
ಡಿರನತ್ಯುಗ್ರದಿ ಶಿಕ್ಷಿಸಲ್ ಪ್ರಜೆಗಳಂ ಭೂಪಾಲಕಂ ಬಾಧಿಸಲ್
ತರುವೇ ಪಣ್ಗಳ ಮೆಲೆ ಮಾತೆ ವಿಷಮಂ ಪೆತ್ತರ್ಭಕಂಗೂಡಿಸಲ್
ಹರ ಕೊಲ್ಲಲ್ ನರ ಕಾಯ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೩೩ ‖
ಮರಗಳ್ ಪುಟ್ಟಿದತಾಣಮೊಂದೆ ಖಗಕಂ ರಾಜ್ಯಂಗಳೇಂ ಪಾಳೆ ಭೂ-
ವರರೊಳ್ ತ್ಯಾಗಿಗಳಿಲ್ಲವೇ ಕವಿಗೆ ವಿದ್ಯಾಮಾತೆಯೇಂ ಬಂಜೆಯೇ
ಧರೆಯೆಲ್ಲಂ ಪಗೆಯಪ್ಪುದೇ ಕರುಣಿಗಳ್ ತಾವಿಲ್ಲವೇ ಲೋಕದೊಳ್
ನರರಂ ಪುಟ್ಟಿಸಿ ಕೊಲ್ವನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೪ ‖
ಮೃಡ ತಾಂ ಭಿಕ್ಷವ ಬೇಡನೇ ದ್ರುಪಜೆ ತಾಂ ತೊತ್ತಾಗಳೆ ಪಾಂಡವರ್
ಪಿಡಿದೋಡಂ ತಿರಿದುಣ್ಣರೇ ಖಳನ ಕೈಯೊಳ್ ಸಿಕ್ಕಳೇ ಸೀತೆ ತಾಂ
ಸುಡುಗಾಡಕ್ಕಿಗೆ ಬಂಟನಾಗನೆ ಹರಿಶ್ಚಂ೧ದ್ರಂ ನರರ್೧ ಪೂರ್ವದೊಳ್
ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೫ ‖
ಪುಟ:ಶತಕ ಸಂಪುಟ.pdf/೮೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೪೭