ಪುಟ:ಶತಕ ಸಂಪುಟ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮

ಶತಕ ಸಂಪುಟ


ಕಡಿದಾಡಲ್ ರಣರಂಗದೊಳ್‌ ನೃಪರೊಳಂ ತಾನಗ್ಗದಿಂ ಕಾದೊಡಂ
ಮೃಡನಂ ಮೆಚ್ಚಿಸಿ ಕೇಳ್ದೊಡಂ ತೊಳಲಿ ತಾಂ ದೇಶಾಟನಂಗೈದೊಡಂ
ಕಡಲೇಳಂ ಮಗುಚಿಟ್ಟೊಡಂ ಕಲಿಯೆ ನಾನಾ ವಿದ್ಯಪದ್ಯಂಗಳಂ
ಪಡೆದಷ್ಟಲ್ಲದೆ ಬರ್ಪುದೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೩೬ ‖

ಮದನಂ ದೇಹವ ನೀಗಿದಂ ನೃಪವರಂ ಚಾಂಡಾಲಗಾಳಾದ ಪೋ
ದುದು ಬೊಮ್ಮಂಗೆ ಶಿರಸ್ಸು ಭಾರ್ಗವನು ಕಣ್ಗಾಣಂ ನಳಂ ವಾಜಿಪಂ
ಸುಧೆಯಂ ಕೊಟ್ಟ ಸುರೇಂದ್ರ ಸೋಲ್ತ ಸತಿಯಂ ಪೋಗಾಡಿದಂ ರಾಘವಂ
ವಿಧಿಯಂ ಮೀರುವನಾವನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೩೭ ‖

ಹುಲುಬೇಡಂ ಮುರವೈರಿಯಂ ಕುರುಬನಾ ಶೂದ್ರೀಕನಂ ರಾಮನಂ
ಬೆಲೆವೆಣ್ಣಿಂದ ಶಿಖಂಡಿ ಭೀಷ್ಮನುಮನಾ ದ್ರೋಣಾರ್ಯನಂ ವಸ್ತ್ರವಂ
ತೊಳೆವಾತಂ ಹತಮಾಡರೇ ಪಣೆಯೊಳಂ ಪೂರ್ವಾರ್ಜಿತಂ ಹಾಗಿರಲ್
ಕೊಲನೇ ಕ್ಷುದ್ರ ಸಮರ್ಥನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೩೮ ‖

ಮಧುರೇಂದ್ರಂ ಕಡುದುಷ್ಟನಾಗಲು ಬಳಿಕ್ಕೀಡೇರಿತೇ ದ್ವಾರಕಾ
ಸದನಾಂಭೋಧಿಯ ಕೂಡದೇ ಕುರುಬಲಾಂಭೋರಾಶಿಯೊಳ್ ಸೈಂಧವಂ
ಹುದುಗಲ್ ಬಾಳ್ದನೆ ಭೂಮಿಯಂ ಬಗಿದು ಪೊಕ್ಕೇಂ ದುಂದುಭಿ ರಾಕ್ಷಸಂ
ವಿಧಿ ಕಾಡಲ್ ಸುಖಮಾಂಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೩೯

ಸುಕುಲೋದ್ದಾರಕನಾಗಿ ಭಾಗ್ಯಯುತನಾಗಾಯುಷ್ಯಮುಳ್ಳಾತನಾ-
ಗಕಳಂಕಾಸ್ಪದಳಾಗಿ ಬಾಳ್ವ ಸತಿಯಿರ್ದಾನಂದಮಂ ಮಾಳ್ಪ ಬಾ-
ಲಕನಿರ್ದೀಶಭಕ್ತನಾಗಿ ತನುವೊಳ್ದಾರ್ಢ್ಯಂ ಸಮಂತೊಪ್ಪುವಾ
ಸುಖ ಪೂರ್ವಾರ್ಜಿತ ಪುಣ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೪೦ ‖

ಕಪಟಂ ಚಂದ್ರಮಗೆಯ್ದದೇ ಹರಿಯ ನಾಮಂ ಜಾರನೆಂದೆನ್ನರೇ
ತಪನಂ ಕೊಂತಿಯ ಸೋಂಕನೇ ಬುಧ ಮಹಾಪುಣ್ಯಾತ್ಮನೇ ವಾಯುಪಾ-