ಚಪಳರ್ ಚೋರರು ಚಾಟುಗರ್ ಚರೆಯರಲ್ಪರ್ ಚೇಟಿಯರ್ ವೇಶಿಯರ್
ಕಪಟೋಪಾಯರು ಕುಂಟಸಾಕ್ಷಿಕುಜನರ್ ಕೊಂಡಾಡುವರ್ ಕೊಂಡೆಯರ್
ಅಪನಿಂದಾನ್ವಿತರಾತ್ಮಬೋಧ ಕುಹಕರ್ ಸಾಮೀಪ್ಯಮಾತ್ರೇಷ್ಟರುಂ
ನೃಪರೊಳ್ ಮಾನ್ಯರೆನಿಪ್ಪರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೩ ‖
ಧುರದೊಳ್ ತನ್ನಯ ವೀರರೊಳ್ ಪ್ರಜೆಗಳೊಳ್ ದಾಯಾದ್ಯರೊಳ್ ಭೃತ್ಯರೊಳ್
ಪುರದೊಳ್ ಬಂಧುಗಳೊಳ್ ಸುಭೋಜನಗಳೊಳ್ ವೈದ್ಯಂಗಳೊಳ್
ಸಂಗದೊಳ್
ಅರಿಯೊಳ್ ಜೋತಿಷಮಂತ್ರವಾದದೆಡೆಯೊಳ್ ವಿದ್ವಾಂಸರೊಳ್ ತತ್‌ಕ್ಷಣಂ
ಅರಸಂಗೆಚ್ಚರು ಬೇಕೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೬೪ ‖
ಶಿವಸುಜ್ಞಾನವೆ ಯೋಗಿಗಳ್ಗೆ ನಯನಂ ಚಂಡಾಂಶು ಶುಭ್ರಾಂಶುಗಳ್
ಭವನೇತ್ರಂ ವಿಷ್ಣುವಿಂಗಂಬುಜದಳನಯನಂ ರಾತ್ರಿಗಾ ವಹ್ನಿಃ
ರವಿ ಲೋಕತ್ರಯಕೆಲ್ಲ ಲೋಚನ ಬುಧವ್ರಾತಕ್ಕೆ ಶಾಸ್ತ್ರಾಂಬಕಂ
ಕಿವಿಯೇ ರಾಜರ ಕಣ್ಣೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೫ ‖
ಬರೆ ದಾರಿದ್ರ್ಯದಿ ದ್ರೋಣನಂ ದ್ರುಪದ ಪೂರ್ವಸ್ನೇಹದಿಂ ಕಂಡನೇ
ಕುರುಭೂಪಾಲನು ಪಾಂಡುಪುತ್ರರು ಮಹಾಧರ್ಮಾತ್ಮರೆಂದಿತ್ತನೇ
ಹರಿಯಂ ತಂಗಿಯ ಬಾಲನೆಂದು ೧ಬಗೆದೇಂ ಕಂಸಾಸುರಂ೧ ಕಂಡನೇ
ದೊರೆಗಳ್ಗೆತ್ತಣ ನಂಟರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೬೬ ‖
ಚಿಗುರೆಂದುಂ ಮೆಲೆ ಬೇವು ಸ್ವಾದವಹುದೇ ಚೇಳ್ ಚಿಕ್ಕದೆಂದಳ್ಕರಿಂ
ತೆಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ
ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಿಂದೋವರೇ
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೭ ‖
ಪುಟ:ಶತಕ ಸಂಪುಟ.pdf/೯೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೩