ಪುರದುರ್ಗಂಗಳ ಬಲ್ಮೆ ಮಾಡದೆ ಪ್ರಜಾಕ್ಷೋಭಂಗಳಂ ನೋಡದೆ-
ಲ್ಲರು ವಿಶ್ವಾಸಿಗಳೆಂದು ನಂಬಿ ಬಹುದಂ ಪೋದಪ್ಪುದಂ ಕಾಣದಾ-
ತುರದಿಂದುಂಡತಿ ನಿದ್ರೆಗೈದು ಮದನಂಗಾಳಾಗಿಹಂ ಲೋಕದೊಳ್
ದೊರೆಯೇ ಸೊಕ್ಕಿದ ಕೋಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೬೮
‖
ಧುರಧೀರರ್ಗರೆಗಂಜಿ ಹೇಡಿಗತಿ ಪಂಕ್ತಿಭೋಜನಂ ಕೀರ್ತಿಯಂ
ಧರೆಯೊಳ್ ಬಿತ್ತುವ ಗಡ್ಡದುಡ್ಡು ಜರೆವರ್ಗಿಷ್ಟಾರ್ಥದಾನಂಗಳುಂ
ಅರೆಮೈವೆಣ್ಗರೆ ಭೋಗಮೆಲ್ಲ ಸೋಗಮುಂ ವೇಶ್ಯಾಜನಕ್ಕೀಕ್ಷಿಸಲ್
ದೊರೆಗಳ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೯ ‖
ಅತಿಗಂಭೀರನುದಾರಧೀರನು ಮಹಾಸಂಪನ್ನ ಸದ್ವರ್ತನೂ-
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ
ವ್ರತಿ ಸದ್ಧರ್ಮವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ
ಪತಿಕಾರ್ಯ೦ ಪ್ರತಿಮಂತ್ರಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೭೦ ‖
ಒಡೆಯಂಗುತ್ಸವಮಾಗೆ ಸರ್ವಜನಮಾನಂದಂಬಡಲ್ ರಾಜ್ಯದೊಳ್
ಕೊಡದೊಳ್ ತುಂಬಿರೆ ಜೇನು ನಿಚ್ಚ ಫಲಪೈರಿಂಗುರ್ವಿಯಿಂಬಾಗಿರಲ್
ಗಡಿದುರ್ಗಂಗಳು ಭದ್ರಮಾಗೆ ಧನಧಾನ್ಯಂ ತೀವೆ ಭಂಡಾರದೊಳ್
ನಡೆವಂ ಮಂತ್ರಿವರೇಣ್ಯನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೭೧ ‖
ಇಳೆ೧ಯಾಂಕಂ ತನಗಲ್ತೆ೧ವೆಗ್ಗಳನೆನುತ್ತಂ ಪಾರುಪತ್ಯಂಗಳಂ
ಖಳ೨ಗೀಯಲ್ ಸುಲಿ೨ತಿಂದು ರಾಜ್ಯವನಿತಂ ನೀವೇಕೆ ತಾವೇತಕೆಂ-
ದುಳಿದರ್ಗೀಯದೆ ೩ಜೀತಮಂ ಕಪಿಯ ಮುಷ್ಟೀ೩ ಮಾಡಿ ಕೂಗುತ್ತಿಹಂ
ದಳವಾಯೇ ತಳವಾಯೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೭೨ ‖
ಅಣುಮಾತ್ರಂ ನದರಿಲ್ಲದಾಣ್ಮನೆಡೆಯೊಳ್ ಲಂಚಕ್ಕೊಡಂಬಟ್ಟು ೪ಮಾ-
ರ್ಪಣಮಂ ಕೊಂಡತಿವಿತ್ತಮಂ೪ ಕೆಡಿಸಿ ಚಾಡೀ ಕೇಳಿ ದ್ರೋಹಂಗಳಂ
ಪುಟ:ಶತಕ ಸಂಪುಟ.pdf/೯೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಶತಕ ಸಂಪುಟ