ಎಣಿಸುತ್ತೆಲ್ಲರ ಬಾಳ್ಗೆ ನೀರನೆರೆದಾರುಂ ಕಾಣದೇ ಭಕ್ಷಿಪಾ
ಗಣಕಂ ಹೆಗ್ಗಣಕಂ ಸಮಂ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೭೩ ‖
ಬಹುಳೋಪಾಯದೊಳಾರ್ಜಿಸುತ್ತೆ ಧನಮಂ ತನ್ನಾಳ್ದನಂ ದೈವವೆಂ-
ದಹಿತರ್ ತನ್ನವರನ್ಯರೆನ್ನದಣುಮಾತ್ರಂ ಪೋಗದೋಲ್ ತ್ರಾಸಿನಂ-
ತಿಹನೊಕ್ಕ೫ಲ್ಗತಿ ಪ್ರೀತಿಪಾತ್ರನಿ೫ಳೆಮೆಚ್ಚಲ್ ಶಾನಭಾಗಾಖ್ಯನೀ
ಮಹಿವಾರಣಾಸಿ ತಪ್ಪದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೭೪ ‖
ಕಳವಂ ಕೊಂಡವನೈದೆ ಹೆಜ್ಜೆವಿಡಿದಾ ಮರ್ಮಂಗಳಂ ನೋಡದೇ
ಪೊಳಲೊಳ್ ಪೊಕ್ಕರ ಪೋದರಂ ನುಡಿವಮಾತಂ ಕೇಳದೇ ಕಾಣದೇ
ಪಳಿವನ್ಯಾಯವ ನೋಡದನ್ಯರೊಳೆ ದೂರಿಟ್ಟೆಲ್ಲರಂ ಬಾಧಿಪಾ
ತಳವಾರಂ ಬೆಳವಾರನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೭೫ ‖
ಪರರಾಯರ್ಕಳ ಸೇನೆಯಂ ಗೆಲಿದು ಮತ್ತೇಭಂಗಳಂ ಸೀಳ್ದು ತ-
ನ್ನರಿಯೆಂದೆಂಬರನೊಕ್ಕಲಿಕ್ಕುವ ಭಟರ್ಗಂಗಂಜಿ ಕೀಳ್ನಾಯ್ಗಳ್ಗಂ
ನಿರುತಂ ಸಕ್ಕರೆ ಪಾಲನಿತ್ತು ಪೊರೆವರ್ ಮಾನಂಗಳೆಲ್ಲಿರ್ಪುವೈ
ಪರಪೋಷ್ಯಕ್ಕೊಳಗಾಗಿರಲ್ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೭೬ ‖
ಹರ ತಾಂ ಕುಂಟಣಿಯಾಗೆ ನಂಬಿ ಜರಿದಂ ಚಂದ್ರಾವತೀದೇವಿಗಂ
ಕರಕಷ್ಟಂಗಳ ಮಾಡಿದಂ ದ್ವಿಜ ವಿರಾಟಂ ಧರ್ಮಭೂಪಾಲನಂ
ಶಿರಮಂ ಚಿಟ್ಟೆಯೊಳಿಟ್ಟನ೧ಗ್ನಿಜೆಗೆ೧ ಬಂದಾಪತ್ತನೆಂತೆಂಬೆನಾಂ
ಪರಸೇವಾ ಕರಕಷ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೭೭ ‖
ತ್ರಿಜಗಾಧೀಶ್ವರನೊಳ್ ಮನೋಜಕಲಹಕ್ಕಾಂತಗ್ನಿಗೀಡಾದ ವಾ-
ರಿಜನಾಭಂಗಿದಿರಾಂತು ಬಾಣ ಭುಜಸಾಹಸ್ರಂಗಳಂ ನೀಗಿದಂ
ಪುಟ:ಶತಕ ಸಂಪುಟ.pdf/೯೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೫