ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೬
ಶತಕ ಸಂಪುಟ


ದ್ವಿಜರಾಜಂಗೆಣೆವಂದು ಚಕ್ರಹತಿಯಿಂ ಸ್ವರ್ಭಾನು ತುಂಡಾಗನೇ
ಗಜದೊಳ್ ಸುಂಡಗೆ ಯುದ್ಧವೇ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೭೮


ಮದನಂಗಂಜುವ ಯೋಗಿಯೇ ಮನೆಯ ಪೆಣ್ಣಿಂಗಂಜುವಂ ಗಂಡಸೇ
ಮದಕಂಜೋಡುವುದಾನೆಯೇ ಸುರತದೊಳ್ ಸೋತಂಜುವಳ್ ಸೂಳೆಯೇ
ಬುಧನೇ ತರ್ಕದೊಳಂಜುವಂ ಬೆದರುಗಾಯಕ್ಕಂಜೆ ದಿವ್ಯಾಶ್ವವೇ
ಕದನಕ್ಕಂಜುವ ವೀರನೇ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೭೯ ‖

ಇರೆಯಲ್ಬಲ್ಲೊಡೆ ವೀರನಾಗು ಧರೆಯೊಳ್ ನಾನಾಚಮತ್ಕಾರಮಂ
ಅರಿಯಲ್ಬಲ್ಲೊಡೆ ಮಂತ್ರಿಯಾಗು ವಿಭುವಾಗಾರೆಂದೊಡಂ ಕೋಪಮಂ
ತೊರೆಯಲ್ಬಲ್ಲೊಡೆ ಯೋಗಿಯಾಗು ರಿಪುಷಡ್ವರ್ಗಂಗಳಂ ಬಾಧಿಸಲ್
ತೆರಬಲ್ಲರ್‌ ಹೊಣೆಯಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೮೦ ‖

ವರಬಿಂಬಾಧರೆಯಾಗಿ ಚಂದ್ರಮುಖಿಯಾಗಂಭೋಜ ಶೋಭಾಕ್ಷಿಯಾ-
ಗೆರವಂ ಮಾಡದಳಾಗಿ ಚಿತ್ತವರಿದೆಲ್ಲಾ ಬಂಧಮಂ ತೋರ್ಪ ಸೌಂ-
ದರಿಯಾಗುತ್ತಮಜಾತಿಯಾಗಿ ಸೊಗಸಿಂದಂ ಕೂಡುವಳ್ಸರತಾ
ಸುರತಕ್ಕಿಂದತಿ ಸೌಖ್ಯಮೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೮೧ ‖
ಕ್ಷಿತಿಯಂ ಶೋಧಿಸಲಕ್ಕು ವೀಚಿಗಳ ಲೆಕ್ಕಂ ಮಾಡಲಕ್ಕಾಗಸೋ-
ನ್ನತಿಯಂ ಕಾಣಲಿಬಕ್ಕು ಸಾಗರಗಳೇಳಂ ದಾಂಟಲಕ್ಕು ನಭೋ-
ಗತಿಯಂ ಸಾಧಿಸಲಕ್ಕು ಬೆಟ್ಟಗಳ ಚೂರ್ಣಂ ಮಾಡಲಕ್ಕೀಕ್ಷಿಸಲ್
ಸತಿಯಾ ಚಿತ್ತವಭೇದ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೮೨


ಹಣಮುಳ್ಳಂ ಹೆಣನಾದೊಡಂ ಮಮತೆಯಿಂ ತಾನಾವಗಂ ಬಿಟ್ಟಿರಳ್
ಕ್ಷಣಮಾತ್ರಂ ಬಲುಬೂಟಕಂ ಗಳಪಿ ಹರ್ಷೋತ್ಸಾಹದಿಂ ಹಾಲ ಮುಂ-
ದಣ ಬೆಕ್ಕಾಡುವೊಲಾಡಿಕೊಂಡು ಧನಮುಂ ಪೋಗಲ್ಕೆ ಮಾತಾಡಳೈ