ತೆರಬೇಡೊತ್ತೆಗೆ ಬಡ್ಡಿಯಂ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೪ ‖
ಅನುಮಾನಂಬಡೆ ರಾಮ೧ನಗ್ನಿಯೊಳೆ ಪೊಕ್ಕಾ ಸೀತೆ ತಾನೈತರಲ್೧
ವನದೊಳ್ ನೇರಲವಣ್ಣನಗ್ನಿಜೆ ಮಹಾವಿಖ್ಯಾತಿಯಿಂ ಪತ್ತಿಸಲ್
ದನುಜಾರಾತಿ ಸ್ಯಮಂತರತ್ನವ ನೃಪಂಗೀಯಲ್ ಘನಂ ಪೋದುದೇ
ಜನರಂ ಮೆಚ್ಚಿಸಲಾಗದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೯೫ ‖
ಮದನಂಗೀಶ್ವರ ಶತ್ರು ಬಂಧುನಿಚಯಕ್ಕಂ ಜಾರೆಯೇ ಶತ್ರು ಪೇ-
ಳದ ವಿದ್ಯ೦ಗಳ ತಂದೆ ಶತ್ರು ಕುವರರ್ಗ೦ ಶತ್ರು ಸನ್ಮಾನ್ಯರಾ
ಸದನಕ್ಕಂ ಬಲುಸಾಲ ರೂಪವತಿ ತಾನೇ ಶತ್ರು ಗಂಡಂಗೆ ಮೇಣ್
ಮುದಿಯಂಗೆವ್ವನೆ ಶತ್ರುವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೬ ‖
ಪೃಥುರೋಮೇಶ ತಿಮಿಂಗಿಲಂ ತಿಮಿಯ ನೂಂಕಲ್ ಸಿಂಧು ತಾನುಕ್ಕದೇ
ಶಿಥಿಲತ್ವಂಬಡೆದಿರ್ಪ ವಂಶ ಮೊರೆಯಲ್ ಕಿಚ್ಚೇಳದೇ ಮಂದರಂ
ಮಥಿಸಲ್ ಕ್ಷೀರಸಮುದ್ರದೊಳ್ ಬಹುವಿಷಂ ತಾಂ ಪುಟ್ಟದೇ ಮರ್ತ್ಯರೊಳ್
ಮಥನಂ ವೆಗ್ಗಳವಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೯೭ ‖
ಹರಿಯೊಳ್ ನಾರದ ಮಂದೆವಾಳದಿ ಮಹಾಶಾಪಂಗಳಂ ತಾಳನೇ
ಸುರವೆಣ್ಣಿಂದಲಿ ಪುಷ್ಪದತ್ತವನದೊಳ್ ತಾಂ ಕ್ರೋಡರೂಪಾಗನೇ
ವಿರಸಂ ಬರ್ಪುದು ಬೇಡೆನಲ್ ದ್ರುಪಜೆಯಿಂ ಭೀಮಾರಿ ತಾ ನೋಯನೇ
ಸರಸಂ ವೆಗ್ಗಳ ಹೊಲ್ಲದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೯೮ ‖
ಅರೆಯಂ ಸೀಳುವೊಡಾನೆ ಮೆಟ್ಟಲಹುದೇ ಚಾಣಂಗಳಿಂದಲ್ಲದೇ
ಕಿರಿದಾಗಿರ್ದೊಡದೇನುಪಾಯಪರನೊರ್ವ೦ ಕೋಟಿಗೀಡಕ್ಕು ಹೆ-
ಮ್ಮರನಿರ್ದೇನದರಿಂದಲೆತ್ತಬಹುದೇ ಬಲ್ಭಾರಮಂ ಸನ್ನೆ ಸಾ-
ವಿರ ಕಾಲಾಳಿನ ಸತ್ವವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೯೯ ‖
ಪುಟ:ಶತಕ ಸಂಪುಟ.pdf/೯೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೯