ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ವ ತಾರಿ ಕೆ. ಈ ಗ್ರಂಥವನ್ನು ರಾಜಾಧಿರಾಜ ಮಹಿಶೂರ ಮಹಾರಾಜ ಮುಮ್ಮಡಿ ಶ್ರೀಕೃಷ್ಣರಾಜಕbರವರು ಕವಿಸಾರ್ವಭೌಮನೆನಿಸಿದ ಕಾಳಿದಾಸನಿಂದ ನವರಸಭರಿ ತವಾಗಿ, ಸರಸಜನಾನಂದಕರವಾಗಿ, ದುಷ್ಯಂತಶಕುಂತಲಾ ಕಥಾಸಂದರ್ಭಗರ್ಭಿತ ವಾಗಿ ರಚಿತವಾದ ಸಂಸ್ಕೃತದ ನಾಟಕಗಳಲ್ಲೆಲ್ಲಾ ಅತ್ಯುತ್ತಮವೆಂದು ಪ್ರಸಿದ್ದ ವಾದ ಶಾಕುಂತಲನಾಟಕದ ಕಥಾಸ್ವಾರಸ್ಯವೇ ಮೊದಲಾದ ಮಹಿಮೆಗಳನ್ನು ತಾವು ಅನುಭವಿಸಿ ತೃಪ್ತಿ ಹೊಂದದೆ, ಸಂಸ್ಕೃತದ ಪರಿಚಯವಿಲ್ಲದೆ ಇರುವ ತಮ್ಮ ಪ್ರಜೆಗಳಿಗೂ ಆ ತಮ್ಮ ಅನುಭವಪರೀವಾಹವನ್ನು ಕೊಡಬೇಕೆಂಬ ಉದ್ದೇಶದಿಂದ, ಕರ್ಣಾಟಕ ಭಾಷೆಯಲ್ಲಿ ವಚನಕಾವ್ಯವಾಗಿ ರಚಿಸಿದರು. ಈ ಗ್ರಂಥವನ್ನು ನಾಟಕ ರೂಪದಲ್ಲಿ ಬರೆದರೆ ಜನರು ಅರಿಯಲಾರರೆಂದು ಯೋಚಿಸಿ ಮಹಾಸ್ವಾಮಿಯವರು ಕಥೆಯನ್ನು ಹೊಸಗನ್ನಡದಲ್ಲಿ ಗದ್ಯರೂಪವಾಗಿ ಬರೆದು, ಇದಕ್ಕೆ ಕೃಷ್ಣರಾಜ ವಾಣೀವಿಲಾಸರಾ ಕರವೆಂದು ಹೆಸರಕೊಟ್ಟರು. ಇದರ ಶೈಲಿಯು ಬಹಳ ರಮ ಣೀಯವಾಗಿರುವುದರಿಂದಲೂ ಅಲ್ಲಲ್ಲಿ ಸ್ವ ಕಪೋಲಕಲ್ಪಿತಗಳಾದ ವರ್ಣನೆಗಳನ್ನು ಸೇರಿಸಿ ಕಥೆಯ ರಮಣೀಯತೆಯನ್ನು ಹೆಚ್ಚಿಸಿರುವುದರಿಂದ ಒ, ಈ ಗ್ರಂಥಕ್ಕೆ * ಕೃಷ್ಣ ರಾಜವಾಣೀವಿಲಾಸರತ್ನಾಕರ -ಶ್ರೀಕೃಷ್ಣರಾಜಪ್ರಭುಗಳವರ ವಾಣಿಯ ಎಲಾಸಗಳಿಗೆ ರತ್ನಾ ಕರ ಸಮುದ್ರ ಎಂದರೆ, ಇದರಲ್ಲಿ ಮಹಾರಾಜರವರ ವಾಗ್ಲೆ ರಣಿಯನ್ನು ನೋಡಬಹುದಾಗಿwವುದರಿಂದಲೂ, ಆ ನಾಮವು ಈ ಗ್ರಂಥಕ್ಕೆ ಉಚಿ ತವಾಗಿಯೂ ಅನ್ವರ್ಥವಾಗಿಯೂ ಇದೆ. ಈ ಗ್ರಂಥದ ಕಥೆಯನ್ನು ನಾಲ್ಕು ಕಲ್ಲೋಲಂಗಳಾಗಿ ಪ್ರತಿಕಲ್ಲೋಲದ ಇಯ ನಾಲ್ಕು ನಾಲ್ಕು ತರಂಗಗಳನ್ನಾಗಿ ಉಚಿತವತು ವಿಭಾಗಮಾಡಿದ್ದಾರೆ. ಕನ್ನಡದಲ್ಲಿ ಗದ್ಯ ಗ್ರಂಥಗಳು ವಿರಳವಾಗಿರುವುದನ್ನು ಯೋಚಿಸಿ, ಶ್ರೀಕೃಷ್ಣ ರಾಜ ಸಾರ್ವಭೌಮರು ತಮ್ಮ ರಾಜ್ಯಭಾರ ನಿರ್ವಾಹದಲ್ಲಿಯೂ ಕೂಡ ಅವಕಾಶ ಕಲ್ಪಿಸಿಕೊಂಡು ಆ ಕೊರತೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ಸೌಗಂಧಿ ಕಾ ಪರಿಣಯ, ಸಹಸ್ರಾರು ಕಥೆ, ವತ್ಸರಾಜಕಥೆ, ದಶಕುಮಾರಕಥಾ ಕಲಾನಿಧಿ, ಶಾಕುಂತಲನಾಟ ಕನವಿನ ಕಥೆ; ವಿಕ್ರಮೋರ್ವಶೀಕಥೆ,