ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೮೭ ನವಿಲುಗಳು ತಾವು ಮಾಡುತಿರ್ದ ನಾಟ್ಯಗಳಂ ಬಿಟ್ಟು ನಿನ್ನ ಎದುರು ನೋಡುತ್ತಿ ರುವುವು. ವನದೇವತೆಗಳು ಶುಭ್ರವಾಗಿ ಬೀಳುತ್ತಿರುವ ಎಲೆಗಳೆಂಬ ವ್ಯಾಜದಿಂ ಕಣ್ಣೀರುಗಳಂ ಬಿಡುತ್ತಿರುವುವು. ಆದ್ದರಿ೦ ಸಮಸ್ತ ಗಿಡುಬಳ್ಳಿಗಳಿಗೂ ನಿನ್ನ ಬಿಟ್ಟಿ ರಲಾದ ದುಃಖವಿರುವುದು ” ಎಂದು ಹೇಳಲು; ಆಶಕುಂತಲೆಯು ದುಃಖದಿಂ ರyದಂತೆ ಅತಿ ಕೆಂಪಾದ ನೇತ್ರಗಳುಳ್ಳವಳಾಗಿ ಕಣ್ವಮುನಿಯಂ ಕುರಿತು “ಎಲೈ ತಂದೆಯೇ, ಎನ್ನ ಸಹೋದರಿಯಂತೆ ಸಾಕಿದ ಈ ವನಜ್ಯೋತ್ಸಯೆಂಬ ಇರುವಂತಿಗೆಯ ಲತೆಯು ಸಮಾಜವಂ ಕು ತು ಪೋಗಿ ಅದಕ್ಕೆ ನಾನು ಪೋಗುವ ವೃತ್ತಾಂತವಂ ಪೇಳಿ ಬರುವೆನು” ಎನಲು; ಕಣ್ಯ ಮುನಿಯು- ಎಲೆ ಪುತ್ರಿಯೆ, ನಿನಗಾಬಳ್ಳಿಯಲ್ಲಿ ಸಹೋದರಿಯಂತೆ ಸ್ನೇಹವಿರುವುದಂ ಬಲ್ಲೆನು. ದಕ್ಷಿಣದಿಕ್ಕಿನಲ್ಲಿರುವ ಆ ಲತೆಯಂ ಕುತು ಪೋಗು” ಎಂದು ನುಡಿಯಲು ; ಮಂದಗಮನದಿಂ ವನಜ್ಯೋತೃ ಯೆಂಬ ಲತೆಯ ಸಮೀಪವಂ ಸೇರಿ, * ಎಲೆ ವನಜ್ಯೋತ್ಸಯೇ, ನಾನು ನನ್ನ ಪತಿಗೃಹವಂ ಕು ತು ಪೋಗುವೆನು. ನೀನು ಸೀಮಾವಿನ ಮರದಿಂ ಕೂಡಿ ಸಂತೋಷದಿಂದಿರುವೆ. ದಿಕ್ಕು ದಿಕ್ಕಿಗೆ ಪೋಗಿರುವ ನಿನ್ನ ಕವಲುಗಳೆಂಬ ತೋಳುಗಳಿ೦ ಎನ್ನ ನಾಲಿಂಗನವಂ ಗೆಯ್ಯು ವುದು; ಇದು ಮೊದಲು ಇನ್ನು ಮೇಲೆ ನಾನು ದೂರಮಾಗಿ ಪೋಗುವಳಾ ದೃ೦ ಎನ್ನಂತೆ ಅನ್ನಾ ದಿಗಳಂ ಬಿಟ್ಟು ಬಲವನ್ನೆ ತಲೆದು ಸಂರಕ್ಷಿಸುವರು ಯಾ ರು?' ಎಂದು ದುಃಖದಿಂ ಗದ್ದಗೂಡಿದ ವಚನವಂ ಪೇಳುತ್ತಾ, ಮುತ್ತಿನಂತೆ ಕಣ್ಣೀರುಗಳಂ ಬಿಡುತ್ತಿರಲು; , ಆ ಕಣ್ಣಮುನೀಶ್ವರನು ಆ ಶಕುಂತಲೆಯಂ ವನಜ್ಯೋತ್ಸಯೆಂಬ ಲತೆಯಂ ಸಹ ನೋಡಿ- ಎಲೆ ಪುತ್ರಿಯಾದ ಶಕುಂತಲೆಯೇ, ಮೇನಕಿಯು ವಿಶ್ವಾಮಿತ್ರನಿಂದ ನಿನ್ನಂ ಪೆತ್ತು ಹಿಮವತ್ಪರ್ವತದ ತಪ್ಪಲಲ್ಲಿ ಬಿಟ್ಟು ಹೋಗಲಾಗಿ ಸಂರಕ್ಷಿಸುವುದಕ್ಕೋ ಸುಗ ನಿನ್ನ೦ ತೆಗೆದುಕೊಂಡುಬರುವಾಗಲೆ ನಿನಗೆ ಅನುರೂಪನಾದ ಕುಲಶೀಲಹರಿ ಶುದ್ಧನಾದ ಪರುಷನಿಗೆ ಕೊಟ್ಟು ಸಂತೋಷವಂ ನೋಡಬೇಕೆಂಬ ಸಂಕಲ್ಪವಂ ಗೆಯನು ಈಶ್ವರಕಟಾಕ್ಷದಿಂದಲೂ ಪೂರ್ವಾರ್ಜಿತವಾದ ಪುಣ್ಯಗಳಿಂದಲೂ ಸರಿ ಯಾದ ದುಷ್ಯಂತರಾಯನಂ ಪತಿಯಂ ಮಾಡಿಕೊಂಡಿರುವೆ? ಈ ವನಜೋಯು ಯೋಗ್ಯವಾದ ಸೀಮಾವಿನ ಮರದಿಂದೊಡಗೂಡಿರುವುದು. ಆದ್ದ೦ ನಿಮ್ಮಿಬ್ಬರ