ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆ ಕರ್ಣಾಟಕ ಕಾವ್ಯ ಕಲಾನಿಧಿ ವಿಷಯದಲ್ಲಿಯ ಎನಗಿರ್ದ ವಿವಾಹಚಿಂತೆಯು ಪೋದುದು. ಇನ್ನು ಮೇಲೆ ನಿನ್ನ ಪತಿಯ ಪಟ್ಟಣದ ಮಾರ್ಗವಂ ಅನುಸರಿಸಿ ನಡೆ ” ಎಂದು ನುಡಿಯಲು; ಶಕುಂತಲೆಯು ಅತಿದುಃಖದಿಂ ಯುಕ್ತಳಾಗಿ ಸಖಿಯರ ಕುರಿತು • ಎಲ್ಲ ಪ್ರಾಣಪ್ರಿಯರಾದ ಸಖಿಯರುಗಳಿರಾ ! ಈ ವನಜ್ಯೋತ್ಸೆ ಯೆಂಬ ಲತೆಯಂ ಇದುವರೆಗೂ ನಾನು ಅತಿ ಪ್ರೇಮದಿಂ ಸಾಕಿದೆನು. ಇನ್ನು ಮೇಲೆ ನಿಮ್ಮಿಬ್ಬರ ಕೆಯ್ಯಲ್ಲಿ ಎತ್ತಿ ಕೊಡುವೆನು. ಬಾಡಿಪೋಗದಂತೆ ಆರಯ್ಕೆಗೆಯ್ಯುವುದು ಎಂದು ನುಡಿಯಲು ; ಸಖಿಯರುಗಳು- ಎಲೆ ಶಕುಂತಳೆಯೇ, ಇವನಜ್ಯೋತ್ಸೆಯೆಂಬ ಲತೆಯ ನ್ನು ಮಾತ್ರ ನಿಮ್ಮ ಹಸ್ತಕ್ಕೆ ಕೊಟ್ಟೆನೆಂದು ನುಡಿಯುತ್ತಿರುವೆ. ನಮ್ಮಿಬ್ಬರಂ ಯಾರ ಹಸ್ತಕ್ಕೆ ಒಪ್ಪಿಸಿ ಪೋಗುವೆ, ಹೇಳು ' ಎಂದು ನುಡಿದು, ಅಧಿಕವ್ಯಸನದಿಂ ಕಣ್ಣೀರು ಬಿಡುತಿರಲು ; ಕಣ್ವಮುನಿಯು ರೋದನವಂ ಗೆಯ್ಯುತ್ತಿರುವ ಆ-ಅನಸೂಯಾಪ್ರಿಯಂವದೆ ಯರೀರ್ವರಂ ಕುಡಿ ತು_* ಎಲ್ ಸಖಿಯರುಗಳಿರಾ! ನೀವಿಬ್ಬರೂ ದುಃಖವಂ ಪಡುತ್ತಿರುವ ಶಕುಂತಲೆಯಂ ಸಮಾಧಾನವಂ ಗೆಯ್ಯಬೇಕಲ್ಲದೆ ನೀವೇ ರೋದನವಂ ಗೆಯುವುದು ಯುಕ್ತವಲ್ಲ' ಎಂದು ನುಡಿದು, ಆ ಲತೆಯ ಸಮಿಾಪದಿಂ ಎಲ್ಲ ರಂ ಹಿಂದಿರುಗಿಸಿ, ಕರೆದುಕೊಂಡು ಬರುತ್ತಿರಲು ; ಶಕುಂತಲೆಯು_* ಎಲೈ ತಂದೆಯೇ, ಎನ್ನ ಪರ್ಣಶಾಲೆಯ ಸುತ್ತಲೂ ನಿತ್ಯದಲ್ಲೂ ಸಂಚರಿಸುತ್ತ ಸಂಪೂರ್ಣ ಗರ್ಭಿಣಿಯಾಗಿರುವ ಈ ಹೆಣ್ಣು ಹುಲ್ಲೆಯು ಯಾವಾಗ ಮ” ಯನ್ನೀಯುತ್ತಿರುವುದೋ ಆಗ ಪ್ರೀತಿಕರವಾದ ಈ ಮೃಗವು ಮಯಂ ಪೆತ್ತ ವಾರ್ತೆಯಂ ಪೇಳಿ ಬರುವಂತೆ ಎನ್ನ ಬಳಿಗೆ ಒಬ್ಬ ಶಿಷ್ಯನಂ ಕಳು ಹಿಸಿಕೊಡಬೇಕು ” ಎಂದು ನುಡಿಯಲು ; ಕಣ್ಯಮುನಿಯು-1 ಎಲೆ ಪತ್ರಿಯೇ, ನೀನು ಹೇಳಿದ ವಾಕ್ಯವಂ ಮತಿ ಯದೆ ಈ ವೃತ್ತಾಂತವಂ ಪೇಳಿ ಕಳುಹಿಸುವೆನು ಎನಲು ; ಶಕುಂತಲೆಯು ತನ್ನ ಒತ್ತಿನಲ್ಲಿ ಸುತ್ತಿ ಬರುವ ಹುಲ್ಲೆಯ ಮಿಯಂ ನೋಡಿ ನಿಂದು... ಎಲೆ ಸಖಿಯರುಗಳಿರಾ ಈಮಕ ಹುಲ್ಲೆಯು ಯಾತಕ್ಕೊ ಸುಗವೋ ಬಾರಿಬಾರಿಗೂ ಎನ್ನ ಪಾದಮೂಲದ ಸೀರೆಯ ನೆ'ಯಲ್ಲಿ ಸುತ್ತಿ ನಿಲ್ಲುತ್ತಲಿರುವುದು ” ಎನಲು;