ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಕರ್ಣಾಟಕ ಕಾವ್ಯಕಲಾನಿಧಿ ವಾಕದ ಹೆಣ್ಣು ಪಕ್ಷಿಯು ದಕ್ಷಿಣದಿಕ್ಕಿನಲ್ಲಿರುವ ಕೊಳದಲ್ಲಿ ಬೆಳೆದಿರುವ ತಾವರೆ ಯೆಲೆಯಿಂ ಮರೆಯಾದ ತನ್ನ ಪತಿಯಂ ಕಾಣದೆ ದುಃಖಾತುರವಾಗಿ ಹೇರಳ ಮಾದ ಧ್ವನಿಯನ್ನುಂಟುಮಾಡುತಿರುವುದು. ಆದ್ದw೦ ಪಕ್ಷಿಯಾದರೂ ಇದು ತನ್ನ ಪತಿಯ ಅಗಲಿಕೆಯಿಂ ದುಃಖಸಡುತ್ತಿರುವುದು. ನಾನು ಮಹಾರಾಜನಿಂ ಬಿಟ್ಟಿರು ವುದ೦ದುಂಟಾದ ದುಃಖವಂ ಸಹಿಸಲಾನು ” ಎಂದು ನುಡಿಯಲು; ಅನಸೂಯೆಯು ಎಲೆ ಶಕುಂತಳೆಯೋ, ಹಾಗೆ ನೀನು ತಿಳಿಯಬೇಡ. ಈ ಚಕ್ರವಾಕ ಹೆಣ್ಣು ಪಕ್ಷಿಯು ತನ್ನ ಪತಿಯಿಲ್ಲದೆ ಇದ್ದರೂ ರಾತ್ರಿಯಂ ಹೆಚ್ಚಾ ದ ವ್ಯಸನದಿಂ ಕಳೆಯುತ್ತಿರುವುದು. ನಿನಗೆ ಮಹಾರಾಜನಾದ ದುಷ್ಯಂತರಾಯನಂ ಮರಳಿ ಕಾಣುವೆನೆಂಬ ಆಶೆಯು ಬಹುಕಾಲದಿಂ ಪ್ರಾಸ್ತಮಾದ ಅಧಿಕ ದುಃಖವಂ ಪೋಗಲಾಡಿಸುವುದು” ಎಂದು ನುಡಿಯುತ್ತಿರಲು ; ಕಣ್ಯಮುನಿಯು ಆ ದುಷ್ಯಂತರಾಯಂಗೆ ಹೇಳಿ ಕಳುಹಿಸತಕ್ಕ ವಾಕ್ಯವಂ ತನ್ನ ಮನದೊಳು ಆಲೋಚನೆಯಂ ಗೆಯ್ದು ಶಾರ್ಙ್ಗವನಂ ಕರೆದು- ಎಲೆ ಶಿಷ್ಟನೇ, ಶಕುಂತಲೆಯನ್ನೊಡಗೊಂಡು ಪ್ರತಿಷ್ಠಾನಪುರಕ್ಕೆ ಪೋಗಿ, ದೊರೆಯಾದ ದುಷ್ಯಂತರಾಯನ ಮುಂಭಾಗದಲ್ಲಿ ಈ ಶಕುಂತಲೆಯಂ ಮುಂದಿಟ್ಟುಕೊಂಡು ಈ ಕೆಲವು ವಾಕ್ಯಗಳಂ ಪೇಳಬೇಕು ” ಎನ್ನಲು ; ಶಿಷ್ಯನು- ಎಲೈ ಸ್ವಾಮಿಯೇ, ನೀವು ಏನು ವಾಕ್ಯವನ್ನ ಪ್ಪಣೆಯನ್ನಿ ಯುತ್ತಿರುವಿರೋ, ಅದನ್ನು ಹೆಚ್ಚು ಕಡಮೆ ಇಲ್ಲದಂತೆ ಆ ದುಷ್ಯಂತರಾಯಂಗೆ ಪೇಳುವೆನು” ಎಂದು ಬಿನ್ನೆ ಸಲು; ಕಣ್ಯ ಮುನಿಯು... ಎಲೈ ಶಿಷ್ಯನೇ, ರಾಯನಂ ಕುಚಿತ ಈ ವಾಕ್ಯ ವಂ ಪೇಳುವುದು: ಅದೇನೆಂದರೆ-ಕಣ್ವಮುನಿಯಾಗಿರುವನು ತಪಸ್ಸೇ ದ್ರವ್ಯವಾಗಿ ರುವನೆಂತಲೂ, ಗೂಢವಾಗಿ ನೀನು ಮಾಡಿವೋದೀ ಕಾರ್ಯಮಂ ಜ್ಞಾನದೃಷ್ಟಿಯಿಂ ತಿಳಿದಿರುವನೆಂತಲೂ ತನ್ನ ವಾಕ್ಯವಂ ನಡೆಸದಿರಲು ಶಾಪಾಗ್ನಿಯಿಂ ಸಮಸ್ತ ಸಂಪ ಇಂ ದಹಿಸುವನೆಂತಲೂ, ಚೆನ್ನಾಗಿ ಯೋಚನೆಯಂ ಗೆಯ್ಯುವುದು. ಮತ್ತು ನಿನ್ನ ಕುಲ ವಂ ಬಹುಕಾಲದಿಂ ಉನ್ನತವಾಗಿ ಬೆಳೆದು ಕಳಂಕರಹಿತವಾಗಿರುವುದನ್ನಾಗಿಯ ತಮ್ಮಂಥ ಋಷಿಗಳ ವಾಕ್ಯವಂ ಪರಿಪಾಲನೆಯಂ ಗೆಯ್ದುದ”೦ ಪ್ರಸಿದ್ಧವಾಗಿ ವೃಪ್ಪಿಯಂ ಪೊಂದಿರುವುದನ್ನಾಗಿಯೂ ಚೆನ್ನಾಗಿ ಯೋಚನೆಯಂ ಗೆಯ್ದು ಮತ್ತು ತಂದೆಯಾದ ತನಗೂ ತಿಳಿಸದೆ ಏನು ಬಂದರೂ ಬರಲೆಂದು ನಿನ್ನಲ್ಲಿ ಅತಿ ವಿಶ್ವಾಸ ಪೂರ್ವಕವಾಗಿ ನಡೆಸಿರುವ ಶಕುಂತಲೆಯ ಅನುರಾಗಾತಿಶಯವು ಚೆನ್ನಾಗಿ ಆಲೆ