ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f -ಕರ್ಣಾಟಕ ಕಾವ್ಯಕಲಾನಿಧಿ ಯೋಗಕ್ಷೇಮವಂ ನೇಳುತ್ತಿರುವಷ್ಟಲ್ಲೇ ಸೂರ್ಯನು ನೊಗದುದ್ಧವಾದ ಆಕಾಶ ವನ್ನೇಹಿ ದನು. ಇನ್ನು ಸಾವಕಾಶವ ಮಾಡದೆ ಜಾಗ್ರತೆಯಾಗಿ ನಡೆ ಎ೦ದು ನುಡಿಯಲು; ಶಕುಂತಳೆದು ತಪೋವನಕ್ಕೆ ಅಭಿಮುಖಳಾಗಿ ನಿಂತು, ಎಲೆ ತಂದೆ ಯಾದ ಮುನಿಯೇ, ಮರಳಿ ಈ ಆಶ್ರಮವನ್ನು ಯಾವಾಗ ಕಾಣುವೆನು ಹೇಳು? ಎಂದು ಗದ್ದದ ಸ್ವರದಿಂ ಯುಕ್ತಳಾಗಿ ನುಡಿಯಲು; ಮುನಿಯು... ಎಲ್‌ ಪುತ್ರಿಯೇ, ಕೇಳು. ಚತುಸ್ಸಮುದ್ರಮುದ್ರಿತವಾದ ಈ ಭೂಮಿಯೇಶಗೆ ಪತ್ನಿ ಯಾಗಿ ಬಹಳವಾಗಿ ಸಮಸ್ಯಸೌಖ್ಯಗಳನ್ನನುಭವಿಸಿ, ಶೂರಾ ಗ್ರೇಸರನಾದ ಮಹಾರಥನಾದ ದುಷ್ಯಂತರಾಯ ನಿ೦ ಪುಟ್ಟಿದ ನಿನ್ನ ಪುತ್ರ ನಲ್ಲಿ ಸಮ ಸ್ವರಾಜ್ಯ ಭಾರವನ್ನೆ ಪ್ಪಿಸಿದ, ಪತಿಯನ್ನೊ ಡಗೊಂಡು ಕಾಂತಿಗುಣಪ್ರಧಾನವಾದ ಈ ಆಶ್ರಮದಲ್ಲಿ ಮರಳಿ ವಾಸವಂ ಗೆಯುತ್ತಿರುವೆ ಪೋಗು” ಎಂದು ಅಪ್ಪಣೆಯ ಯು ; ಗೌತಮಿಯು ಎಲೆ ಪ್ರಿಯೇ, ನೀನು ಹೋಗುವುದಕ್ಕೆ ಹೊತ್ತು ಬಹ ಳವಾಗಿ ಪೋಗುತ್ತಿರುವುದು. ತಂದೆಯಾದ ಮುನೀಶ್ವರನಂ ಪರ್ಣಶಾಲೆಗೆ ಪೋಗು ವಂತೆ ನುಡಿದು ಪ್ರಯಾಣೋನ್ಮುಖಳಾಗುವುದು ” ಎಂದು ನುಡಿದು, ಎಲೈ ಕಣ್ವ ಮಹಾಮುನಿಯೇ, ಈ ನಿನ್ನ ಪ್ರಯು ಮರಳಿ ಏನೋ ಒಂದು ವಾಕ್ಯವಂ ಪೇಳುವಂತೆ ಕಾಲ ಕಳೆಯುತ್ತ ಇರುವಳು. ಹಿಂದಿರುಗಿ ಆಶ್ರಮಕ್ಕೆ ಪೋಗ ಬಹುದು? ” ಎಂದು ನುಡಿಯಲು; ಕಣ್ವಮುನಿಯು ಎಲ್‌ ಪುತ್ರಿಯೇ, ಈಗ ಎನಗೆ ತಪೋನುಷ್ಠಾನವಂ ಮಾಲ್ಪ ಕಾಲವು ಮೀಪೋಗುತ್ತಿರುವುದು ” ಎನಲು; ಶಕುಂತಳೆಯು, ಮೊದಲೆ ಎನ್ನ ತಂದೆಯಾದ ಕಣ್ವಮುನಿಃತಿಯ ಶರೀರವು ತಪವಂ ಗೆಯ್ಯುವುದಕ್” ಕೃಶವಾಗಿರುವುದು, ಈಗ ಎನ್ನ ವಿಯೋಗದಿಂದ ಅತಿ ದುಃಖಕ್ಕೆ ಪಾತ್ರವಾದುದು ” ಎಂದು ನುಡಿಯಲು; ಆ ಕಣ್ವಮುನಿಯು ನಿಟ್ಟುಸಿರು ಬಿಟ್ಟು - ಎಲ್‌ ಮಗಳೇ, ಕೇಳು. ಸರ್ಣ ಶಾಲೆಯ ಬಾಗಿಲಲ್ಲಿ ತೃಣಧಾನ್ಯಗಳಿಂ ಎರಟಿಸುತಿರ್ದ ವನದೇವತೆಗಳ ಪೂಜೆಯಂ ನೋಡುತಿರ್ದ ಎನಗೆ ತಾಪವು ಹೇಗೆ ಪರಿಹಾರವಾಗುವುದು? ಆದರೆ ಈಗ ಬಹು ಹೊತ್ತಾದುದು, ಹೊರಡು, ನಿನ್ನ ಮಾರ್ಗಗಳು ಮಂಗಳಕರಗಳಾಗಲಿ ! :) ಎಂದು ನುಡಿದು, ಅವಳ ಗಲ್ಲವಂ ಮುದ್ದಿಸಿ ಅನಸೂಯೆ ಪ್ರಿಯಂವದೆಯರಿಂದೊ