ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಶಾಕುಂತಲನಾಟಕ ನಪೀನಟೀಕೆ ೫ ಡಗೊಂಡು, ಕೆಲವು ದೂರ ಬಂದು ನಿಂತು, ಹಿಂದಿರುಗಿ ನೋಡುತ್ತಿರಲು; - ಶಕುಂತಳೆಯು ಗೌತಮಿಯಿಂದಲೂ ಋಷಿಶಿಷ್ಯರುಗಳಿಂದಲೂ ಒಡಗೊಂಡು ಅತ್ಯಂತಚಿಂತಾಕ್ರಾಂತಳಾಗಿ ಪ್ರತಿಷ್ಠಾನ ಪುರದ ಮಾರ್ಗವನ್ನನುಸರಿಸಿ ತೆರಳುತ್ತಿ ಆಗಲು; ಇತ್ಯಲಾ ಅನಸೂಯೆ ಪ್ರಿಯಂವದೆಯರೀರ್ವರು ಆಶಕುಂತಲೆಯು ಪೋಗು ವ ಮಾರ್ಗವಂ ನೋ ಡುತ್ತಾ ನಿಂದು ಅನಸೂಯೆಯು ಪ್ರಿಯಂವದೆಯಂ ಕುತು - ಎಲೆ ಪ್ರಿಯಂವದೆಯೇ, ಪೋಗುತ್ತಿರುವ ಶಕುಂತಲೆಯಂ ನೋಡಿಯಾದರೂ ದುಃಖಸರಿಹಾರವಂ ಮಾಡಿಕೊಳ್ಳುವೆವೆಂದರೆ- ಈ ಪಾಪಿಯಾದ ಗಿಡಂಗಳ ಹೊದಲು ಗಳು ಮರೆಯಾದುವು, ಇನ್ನಾವಾಗ ನಮ್ಮ ಶಕುಂತಳೆಯಂ ಕಾಣುವೆವೋ ! ” ಎಂದು ಅನ್ನೋನ್ಯವಾಗಿ ಸಲ್ಲಾಪವಂ ಗೆಯ್ಯುತ್ತಿರಲು;

  • ಕಣ್ಮಮುನಿಯು ಆ ಶಕುಂಕಳೆಯಂ ನೋಡಿ, ಕಾಣದೆ ನಿಟ್ಟುಸಿರು ಬಿಡುತ್ಯ ( ಎಲ್‌ ಸಖಿಯರುಗಳಿರಾ,ನಿಮ್ಮೊಡನೆ ಸಂಚಾರವಂ ಗೆಯ್ಯುತ್ತಿರ್ದು ಆನೇಕ ವಿನೋ ದಕ್ಕೆ ಕಾರಣಳಾದ ಶಕುಂತಳೆಯು ಪೋದಳೆಂಬ ದುಃಖವಂ ಕಡೆಗೊತ್ತಿ ಎನ್ನೊಡನೆ ಆಶ್ರಮಕ್ಕೆ ಬನ್ನಿರಿ” ಎಂದು ಹೇಳಲು;

ಆ ವಾಕ್ಯಕ್ಕೆ ಸಖಿ ಯರೀರ್ವರು- ಎಲೈ ಸ್ವಾಮಿಯೇ, ನಿಮ್ಮ ಶಕುಂ ತಳೆಯು ಇಲ್ಲದಿರುವುದಿಂದೀ ತಪೋವನವೆಲ್ಲ ಶೂನ್ಯವಾಗಿ ಕಾಣುತ್ತಿರುವುದು. ನಾವು ಹೇಗೆ ಈ ಆಶ್ರಮ ಪ್ರವೇಶವಂ ಮಾಳ್ವು ಎನ್ನಲು: ಕಮುನಿಯು... ಎಲ್ ಬಾಲೆಯರುಗಳಿರಾ, ನಿಮಗಾಶಕುಂತಳೆಯಲ್ಲಿ ರುವ ಅನುರಾಗದಿಂದೀ ತಪೋವನವು ಶೂನ್ಯವಾಗಿ ಕಾಣುವುದು. ಆದರೂ ಈ ಶಕುಂತಳೆಯನ್ನು ಅವಳ ಪತಿಗೃಹಕ್ಕೆ ಕಳುಹಿಸಿ ಎನ್ನ ಮನಸ್ಸು ಸಮಾಧಾನವಾ ಗಿರುವುದು. ಏಕೆಂದರೆ:-ಯಾವ ಹೊತ್ತಿರ್ದರೂ ಹೆಣ್ಣು ಮಕ್ಕಳು ಪರದ್ರವ್ಯವಾಗಿರು ವರು. ಆದ್ದಹಿ೦ದೀಗ ಆ ಶಕುಂತಳೆ ಯನ್ನು ಪತಿಗೃಹಕ್ಕೆ ಕಳುಹಿಸಿದ ಎನಗೆ ದುಃಖ ನಿದ್ದರೂ ಇಲ್ಲದಂತೆ ಈಹೊತ್ತಿರ್ದ ಭಾರ ಳುಹಿದರೆ ಹೇಗೆ ಅ೦ತಃಕರಣಂಗಳು ಸಂತುಷ್ಟಿಯಂ ವೊಂದು ತಿರುವುವೋ ಆರೀತಿಯಿಂದಧಿಕಸಂತೋಷವು ಪ್ರಾಪ್ತಮಾ ದುದು” ಎಂದು ನುಡಿಯುತಿರ್ದನು; ಎಂಬಲ್ಲಿಗೆ ಕೃಷ್ಣರಾಜವಾಣೀವಿಲಾಸ ರತ್ನಾಕರವೆಂಬ ಶಾಕುಂತಲನಾಟಕ ನವೀನಟಿಕಿನಲಿ ಶಕುಂತಳೆಯು ಕಣ್ಣಮುನಿಯಿಂ ಸಮಸ್ತ ಬುದ್ದಿ ಮಾರ್ಗವಂ ತಿಳಿದು ಗೌತಮಿದುಷಿಶಿಷ್ಯರುಗಳಿ, ದೊಡಗೂಡಿ ಪ್ರತಿಷ್ಠಾನ ನಗರಾಭಿಮುಖಳಾಗಿ ಬರುತಿರ್ದಳೆಂಬಲ್ಲಿಗೆ ತೃತೀಯಕಿ ಅದಲಿ ದ್ವೀತಿಯ ತರಂಗಂ ಸಂ ಪೂರ್ಣ೦. ಇ