ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಕಲ್ಲೋಲದ ತೃತೀಯತರಂಗಂ ಅನಂತರದಲ್ಲಿ ಶಕುಂತಳೆಯು ಅತ್ಯಂತಚಿಂತಾಕ್ರಾಂತಳಾಗಿ ಅಡಿಗಡಿಗೆ ತಾನಿ ರ್ದ ತಪೋವನವಂ ನೋಡುತ್ತಾ, ಕಮಲಗಳಿಗಿಂತ ನೂರ್ಮಡಿಯಾಗಿ ಮೃದು ವಾದ ಪಾದಗಳಿಂದ ಯಾವಾಗಲೂ ಬಹಳವಾಗಿ ನಡೆದವಳಲ್ಲವಾದ್ದ ಹಿ೦ಹತ್ತೆಂಟು ಹೆಜ್ಜೆಗೆ ಒಂದುಸ್ಥಾನದಲ್ಲಿ ನಿಂತು ನಿಟ್ಟುಸಿರು ಬಿಡುತ್ತಾ, ಇನ್ನೆಷ್ಟು ದೂರದಲ್ಲಿ ಪ್ರತಿ ಮಾನನಗರವಿರುವದೋ ಎಂದು ತನ್ನ ಸಂಗಡ ಬರುವ ಗೌತಮಿಯಂ ಮುನಿಶಿಷ್ಯರಂ ಕೇಳುತ್ತಾ ಬಿಸಿಗಾಳಿಗೆ ಚಲಿಸುತ್ತಿರುವ ಎಳತೆಯಂತೆ ಬಳುಕುತ್ತಿರುವ ಶರೀರವು ಇವಳಾಗಿ, ಅಲ್ಲಲ್ಲಿ ಲತೆಗಳ ಗುಂಪಿನಿಂ ತಂಪು ದೋಚುತ್ತಿರುವ ಹೊಳೆ ಕೊಳ ಕಾ ಲುವೆಗಳು ಮೊದಲಾದ ಸ್ಥಾನಂಗಳಲ್ಲಿ ಕುಳಿತು ಮಾರ್ಗಾಯಾಸವಂ ಕಳೆಯುತ್ತಾ, ಬರುವಲ್ಲಿ ನಿರ್ಮಲವಾದ ಜಲದಿಂದಲೂ ಹಂಸಕಾರಂಡ ಚಕ್ರವಾಕ ಮೊದಲಾದ ಪಕ್ಷಿಗಳಿಂದಲೂ ಕಮಲವನದಿಂ ಜಾಳುತ್ತಿರುವ ಮಕರಂದಧಾರೆಗಳಂ ಪಾನಂಗೆ ಯ್ಯುತ್ತ ಮದವೇ ಝಂಕಾರವಂಗೆಯುತ್ತಿರುವ ಶೃಂಗಸಂಘದಿಂದಲೂ ಸಂಗತವಾಗಿರುವ ಚಕ್ರತೀರ್ಥವೆಂಬ ಸರೋವರವಂ ಕಂಡು; ಎಲ್‌ ಗೌತ ಮಿಯೇ ಹಂಸಗಳ ಹಿಂಡುಗಳಿಂದಲೂ, ಮಕರಂದ ಪಾನವಂ ಗೆಯುವುದ ಕೋಸುಗ ಮೊತ್ತವಾಗಿ ಒತ್ತಿನಲ್ಲಿ ಮುತ್ತುತ್ತಿರುವ ತುಂಬಿಗಳ ಹಿಂಡು ಗಳಿಂದಲೂ, ಶೈತ್ಯ ಸೌರಭ್ಯ ಮಾಂದ್ಯದಿಂದೊಡಗೂಡಿ ಸುಳಿಯುತ್ತಿರುವ ತಂಗಾಳಿ ಯಿಂದಲೂ ಈಸರನ್ನು ನೋಡುವರ ಕಂಗಳಿಗೆ ಮಂಗಳವನ್ನುಂಟುಮಾಡುತ್ತಿರುವು ದಾದ್ದ ಏಂದೀ <ಳದಂಚಿನಲ್ಲಿ ಒಂದು ಮುಹೂರ್ತವಿದ್ದು ಜಲಪಾನವಂ ಗೆಯು ಮಾರ್ಗಾಯಾ ಇಮಂ ಬಿ ಗೈದು ಮುಂಬರಿದು ಪೋಗುವೆನು ” ಎಂದು ನುಡಿದು, ಆಸರೋವರದ ತೀರದಲ್ಲಿ ಎಲ್ಲರಿಂದೊಡಗೊಂಡು ಕುಳಿತು, ತಪೋವನದಿಂ ತಂದಿರ್ದ ಮಧುರವಾದ ಫಲಂಗಳಂ ಭಕ್ಷಿಸಿ, ಜಲಪಾನವಂ ಗೆಯ್ಯು, ಒಂದುಗಳಿಗೆ ಅಲ್ಲಿದ್ದು ಆಬಳಿಕ ಎಲ್ಲರಿಂ ಕೂಡಿ ತೆರಳುತ್ತಾ ಪ್ರತಿಷ್ಠಾನನಗರದ ಮಾರ್ಗವಂ ತೋಕ ಸುತ್ತಾ ಪೋಗುವ ಶಾ೯ರವನ ಬೆಂಬಿಡಿದು ಬರುತ್ತಿರಲು; ಇತ್ತಲು ಪ್ರತಿಷ್ಠಾನಪಟ್ಟಣದಲ್ಲಿ ದುಷ್ಯಂತರಾಜನು ಸಮಸ್ತ ರಾಜ್ಯ ವಿಚಾ ರಣೆಯುಂ ಗೆಯ್ಯು, ಸಕಲ ಸಾಮಂತರಾದ ದೊರೆಗಳು ತಂದ ಕಪ್ಪಗಳನ್ನೊಪ್ಪಿಸಿ