ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಲವಿಕಾಗ್ನಿಮಿತ್ರ ಕಥೆ, ಮುದ್ರಾಮಂಜೂಷ, ರಾಮೇದಂತ ಕಥೆ ಕೃಷ್ಟೋದಂತ ಕಥೆ, ರಾಜವಂಶರತ್ನಪ್ರಭೆ ಉಪನಿಷತ್ತಾತ್ಸರ್ಯ, ಅಧ್ಯಾ ರಾಮಾಯಣವೇಕೆ ಇವೇ ಮೊದಲಾದ ಅನೇಕ ಗ್ರಂಥಗಳನ್ನು ರಚಿಸಿ ಲೋಕೋಪಕಾರಮಾಡಿರುವುದಕ್ಕಾಗಿ ಕನ್ನಡನಾಡಿನ ಪ್ರಜೆಗಳು ಎಷ್ಟು ಕೃತಜ್ಞ ರಾಗಿರಬೇಕೋ! ಈ ಗ್ರಂಥಗಳನ್ನು ಮುದ್ರಿಸಿ ಪ್ರಚುರಮಾಡಲು ಅನುಮೋದಿಸಿ ಅಪ್ಪಣೆಯನ್ನು ದಯಪಾಲಿಸಿದ ಈಗಿನ ನಮ್ಮ ಮಹಾರಾಜರವರ ಉದಾರಾಶಯ ವನ್ನು ಎಷ್ಟು ವರ್ಣಿಸಿದರೂ ತೀರದು. 30-7-14 ಮಂ. ಆ. ರಾ. ಬೆಂಗಳೂರು, - ++++