ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

---ಶಾಕುಂತಲನಾಟಕ ನವೀನಟೀಕೆ ୮୮ 0 ಎಲಾಸದಿಂದಿರ್ದು ಈಗ ವೃದ್ದಾಪ್ಯದ ದೆಸೆಯಿಂ ಈ ಅವಸ್ಥೆಯಂ ಪೊಂದಿದೆನೆಂದು ನಿಟ್ಟುಸಿರಂ ಬಿಡು ಅನಂತರದಲ್ಲಿ ದಂಡವಂ ಪಿಡಿದು ಸಂಚರಿಸುವುದು ಗೊತ್ತಾದ ವರಿಗೆ ಕುಲಧರ್ಮವೆಂದು ಯಾವ ದಂಡಮಂ ಪಿಡಿದು ಸಂಚರಿಸುತಿರ್ದೆನೋ ಅನೇಕ ಕಾಲವು ಕಳೆದು ಪೋಗಲಾಗಿ ಅದೇ ದಂಡವೇ ಮುಪ್ಪಿನಿಂ ತಪ್ಪು ಹೆಜ್ಜೆಯನ್ನಿಟ್ಟು ಸಂಚರಿಸುವ ಎನಗೆ ಊರುಗೋಲಾದುದು ಎಂದು ನುಡಿಯುತ್ತಾ ಬಂದು, ಮುಂದೆಡೆ ಯಲ್ಲಿ ಸ್ವಲ್ಪ ದೂರದಲ್ಲಿರುವ ದುಷ್ಯಂತಮಹಾರಾಯನಂ ಕಂಡು, ಈಗ ಕಾಮ್ಯಾರ್ಥ ವಾಗಿ ಬಂದು ಇರುವ ಜನಗಳ ವೃತ್ತಾಂತವಂ ಪೇಳದೆ ಇರಕೂಡದು, ರಾಯನಾ ದರೋ ಈಗತಾನೇ ಸಿಂಹಾಸನದಿಂದೆದ್ದು ಅಂತಃಪುರದಲ್ಲಿ ವಿಜನನಾಗಿ ವಿಹಾರವಂ ಗೆಯ್ಯುತ್ತಿರುವನು. ಕಖುಷಿಶಿಷ್ಯರುಗಳು ಬಂದು ಇರುವ ವಾರ್ತೆಯಂ ಪೇಳುವು ದಕ್ಕೆ ಹೇಗೆ ಸಮರ್ಥನಾಗಲಿ? ಆದರೂ ಸೂರನು ಹೇಗೆ ಒಂದಾವೃತ್ತಿ ರಥಕ್ಕೆ ಕಟ್ಟಿದ ಕುದುರೆಯಂ ಬಿಚ್ಚುವುದಕ್ಕೆ ಕಾಲವಿಲ್ಲದೆ ಸದಾ ಸಂಚಾರವಂ ಗೆಯ್ಯು ತಿರುವನೋ, ವಾಯುವು ಹೇಗೆ ಎಡೆಬಿಡದೆ ರಾತ್ರಿ ಹಗಲಿನಲ್ಲಿ ಸಂಚಾರವಂ ಗೆಯ್ಯು ತಿರುವನೋ, ಆದಿಶೇಷನು ಯವ ಮೇರೆಯಲ್ಲಿ ಭೂಭಾರವಂ ನಿರಂತರದಲ್ಲಿಯೂ ಶಿರದಲ್ಲಿ ವಹಿಸಿಕೊಂಡಿರುವನೋ, ಆ ರೀತಿಯಿಂದ ದೊರೆಯಾದವನು ಸಮಸ್ತ ಜನರು ಮಾಡಿದ ಪುಣ್ಯದ ಆಲಿಭಾಗಗಳಲ್ಲಿ ಒಂದುಭಾಗ ಧರ್ಮಸಂಪಾದನೆಗೆ ಸುಗ ಜನರುಗಳಂ ಆಯಾಯ ಕಾರ್ಯಗಳಲ್ಲಿ ನೇಮಕವಂ ಮಾಡುವ ಅಧಿಕಾರ ದಲ್ಲಿ ಎಡೆಬಿಡದೆ ಇರುವನಾದ್ದರಿಂದ ಕಣ್ವಶಿಷ್ಠಗಮನವಂ ಇಚ್ಛಾಪನೆಯಂ ಗೆಯ್ಯುವೆನು” ಎಂದು ನಿಶ್ಚಿಸಿ ಮುಂಬರಿದು, ಸ್ವಲ್ಪ ದೂರ ಬಂದು ಅನೇಕವಾದ ಆನೆಗಳ ಹಿಂಡುಗಳಲ್ಲಿಮನ ಬಂದಂತೆ ಸಂಚಾರವಂ ಗೆಯ್ಯು ಮಧ್ಯಾಹ್ನ ಕಾಲದಲ್ಲಿ ಶೀತಳವಾದ ಸ್ಥಾನದಲ್ಲಿ ಸ್ಪಷ್ಟ ಚಿತ್ರವಾಗಿರುವ ಮದ್ದಾನೆಯಂತೆ, ನಮ್ಮ ರಾಯನು ಸಮಸ್ತ ಪ್ರಜೆಗಳಂ ತನ್ನ ಮಕ್ಕಳುಗಳಂತೆ ಯುಕ್ತವಾದ ಕಾವ್ಯಗಳಲ್ಲಿ ನೇಮಿಸಿ, ಶಾಂತಚಿತ್ತನಾಗಿ ಏಕಾಂತವಾದ ಅಂತಃಪುರದಲ್ಲಿ ಸುಖಿತನಾಗಿರುವನೆಂದು ತಿಳಿದು ಬಂದು ರಾಯನ ಪಾದಂಗಳಿಗೆ ವಂದನೆಯಂ ಗೆಯ್ಯು- ಎಲೈ ಮಹಾರಾಯನೇ, ಹಿಮವತ್ಪರ್ವತದ ತಪ್ಪಲಲ್ಲಿರುವ ಅರಣ್ಯವಾಸಿಯಾದ ರ್ಕಮುನಿಯ ಶಿಷ್ಯರುಗಳು ಒಬ್ಬ ಸುಂದರವದನಾರವಿಂದಮುಳ್ಳ ಶಾಲೆಯಿಂದಲೂ, ವೃದ್ದಳಾದ ಒಬ್ಬ ಸ್ತ್ರೀಯಿಂದ ಯುಕ್ತರಾಗಿ, ನಮ್ಮ ಋಷಿಯು ಕೆಲವು ವಾಕ್ಯಗಳು ರಾಯಂಗೆ ಬಿನ್ನಯಿಸುವಂತೆ ಅಪ್ಪಣೆಯನ್ನಿತ್ತು ಕಳುಹಿಸಿರುವನೆಂದು ಬಂದು, ನಮ್ಮ ಅರಮ ನೆಯ ಬಾಗಿಲಲ್ಲಿ ಇರುವರು; ತಮ್ಮ ಚಿತ್ರಕ್ಕೆ ಬಂದಂತೆ ಮಾಡಬಹುದು ” ಎಂದು