ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ -ಕರ್ಣಾಟಕ ಕಾವ್ಯಕಲಾನಿಧಿ ವಿಜ್ಞಾಪನೆಯಂ ಗೆಯ್ಯು, ಕೆಲದೊಳ್ ನಿಲ್ಲಲು; ರಾಯನು ಎಲೈ ವೃದ್ದ ಕಂಚುಕಿಯೇ, ಕಣ್ವ ಋಷಿಯ ಆಜ್ಞೆಯಂ ತೆಗೆದು ಕೊಂಡು ಬಂದಿರುವರೆಂದು ಹೇಳಿರುವೆಯಾದ ೩೦ ಖುಷಿಶಿಷ್ಯರುಗಳಿಗೆ ವೇದೋಕ್ತಮಾದ ಸತ್ಕಾರಂಗಳಿ೦ ಪೂಜೆಯಂ ಗೆಯ್ಯು ಅವರು ಕರೆದುಕೊಂಡು ನಾನಿರುವ ಬಳಿಗೆ ನೀನೆ ಬರುವಂತೆ ರಾಯನ ಆಜ್ಞೆಯಾಗಿರುವುದೆಂದು ಸೋಮರಾ ತನೆಂಬ ಪುರೋಹಿತನಿಗೆ ಹೇಳುವುದು. ನಾನು ಆ ಋಷಿಗಳ ಸಂದರ್ಶನಕ್ಕೆ ಯೋಗ್ಯ ಮಾದ ಸ್ಥಳಕ್ಕೆ ಪೋಗುವೆನು ” ಎಂದು ಅಪ್ಪಣೆಯನ್ನೀಯಲು; ಆ ವೃದ್ದ ಕಂಚುಕಿಯು- ಅಪ್ಪಣೆಯಾದಂತೆ ನಡೆದುಕೊಳ್ಳುವೆನೆಂದು ನುಡಿದು ಹಿಂದಿರಿಗಿ ಬರುತ್ತಿರಲು; ರಾಯನು-ಹೊಗೆ ಯಾರೆಂದು ಕೇಳಲು; - ಆಕ್ಷಣದಲ್ಲಿ ಬೆಳ್ಳಿಯ ಬೆತ್ತವಂ ಪಿಡಿದು, ಏನು ಅಪ್ಪಣೆಯಾಗುವುದೋ ಆ ಅಪ್ಪಣೆಯನ್ನೀಯಬೇಕೆಂದ ನೇತ್ರಧಾರಿಣಿಯಾದ ಸ್ತ್ರೀಯ ವಾಕ್ಯವಂ ಕೇಳಿ, “ಎಲ್ ಸ್ತ್ರೀಯೇ, ಕಣ್ಣ ಖುಷಿಯ ಶಿಷ್ಯರು ಬಂದಿರುವರಂತೆ. ಅವರ ಸಂದರ್ಶನಕ್ಕೋಸುಗ ಔಪಾಸನಗೃಹಕ್ಕೆ ವೋಗಬೇಕಾಗಿರುವುದು,' ಎಂದು ನುಡಿದ ರಾಯನಿಗೆ ಆ ಸ್ತ್ರೀಯು ಮಾರ್ಗವ ತೋರಿಸುತ್ತಾ ಬರಲು ; ರಾಯನು ಅಗ್ನಿ ಗೃಹವಂ ಪ್ರವೇಶವಂ ಗೆಯ್ಯುತ, ತನ್ನ ಅಧಿಕಾರದ ಆಯಾ ಸದಿಂ ಖಿನ್ನ ನಾಗಿ, ಲೋಕದಲ್ಲಿ ಸಮಸ್ತ ಪ್ರಾಣಿಗಳು ತಾವು ತಾವು ಪ್ರಾರ್ಥಿಸು ತಿದ್ದ ಮಾನಸಾಭೀಷ್ಟ ವರ ಪಡೆದು ಸೌಖ್ಯವಂ ಪೊಂದುತಿಹರು. ದೊರೆಗಳ ಚರಿತ್ರ ವಾದರೋ ಅತ್ಯಂತ ದುಃಖಕರಂಗಳಾಗಿ ಇರುವುವು. ಹೇಗೆಂದರೆ:ದೊರೆಯಾ ದವನಿಗೆ ಮೊದಲು ರಾಜ್ಯವು ಸಂಪಾದಿಸಬೇಕೆಂಬ ಇಚ್ಛೆಯು ಒಲವಾಗಿರುವುದು. ಸಮಸ್ತ ಸನ್ನಾ ಹವಂ ಗೆಯ್ಯು ಶತ್ರುನಿಗ್ರಹವಂ ಏರಚಿಸಿ, ಆ ರಾಜ್ಯವು ಸ್ವಾಧೀನ ವಂ ಗೆಯ್ದ ಬಳಿಕ ಆ ಸಂಪಾದನೇಚ್ಚೆಯು ನಾಶವಂ ಪೊಂದುವುದು. ಆಬಳಿಕ ಶತ್ರುಮಿತ್ರರಂ ಶೋಧಿಸುತ್ತಾ, ಬ್ರಾಹ್ಮಣಾದಿ ವರ್ಣ೦ಗಳಿಗೆ ಸಾಂಕರ್ಯವು ಪುಟ್ಟ ದಂತೆ ಪ್ರಜೆಗಳಿಗೆ ಶತ್ರುಗಳಿ೦ ಕ್ಕೂಭೆಯುಂಟಾಗದಂತೆ ನ್ಯಾಯಧರ್ಮಪರನಾಗಿ, ದ್ರವ್ಯಾರ್ಜನೆಯಂ ಗೆಯ್ಯುತ್ತ, ಸಮಸ್ಯೆ ರಾಜಧರ್ಮದಿಂ ಯುಕ್ತನಾಗಿ, ಆ ರಾಜ್ಯ ವಂ ಸಂರಕ್ಷಣೆಯಂ ಗೆಯುವ ವ್ಯಾಪಾರವು ನಿರಂತರದಲ್ಲಿಯೂ ವ್ಯಾಕುಲವಂ ಪುಟ್ಟಿಸುವುದಲ್ಲದೆ ಸಂತೋಷವಂ ಸಂಪಾದಿಸಲಾಯದು. ಹಾಗಾದರೆ ರಾಜ್ಯವಂ ಸಂಪಾದಿಸದ ದೊರೆಗಳಿಗೆ ಸುಖವಿಲ್ಲವೆ ?.. ಎಂದರೆ, ಪುರುಷನು ಸಲಿಗೆಸಂಗ ತ