ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ ೧೦೧ ತನ್ನ ಕೆಯ್ಯಲ್ಲಿ ಹಿಡಿದಿರುವ ಛತ್ರಿಯು ನೆರಳನ್ನು ಂಟುಮಾಡುವುದು, ಸುಖವಂ, ಹಸ್ತದಿಂ ಪಿಡಿದಿರುವುದಿ೦ ದುಃಖವಂ ಹೇಗೆ ಹುಟ್ಟಿಸುತ್ತಿರುವುದೋ, ಅದಂತೆ ರಾಜ್ಯವು ಅತ್ಯಂತ ಸುಖವನ್ನು ಂಟುಮಾಡದೆ ಅತಿ ದುಃಖವೆಂ ವುಟ್ಟಿಸದೆ ಸುಖ ದುಃಖಾತ್ಮಕವಾಗಿರುವುದು ” ಎಂದು ನುಡಿಯುತ್ತಾ ಒರಲು; ಅಷ್ಟಕಲ್ಲೇ, ಕಾಲಸೂಚಕರಾದ ಭಟರುಗಳು ಬಂದು ರಾಯನ ಮುಂಭಾ ಗದಲ್ಲಿ ನಿಂದು ಕರವೆ, “ ಎಲೈ ರಾಯನೇ ! ನಿನ್ನ ಸೌಖ್ಯದಲ್ಲಿ ಸ್ವಲ್ಪವಾದರೂ ಅಭಿಲಾಷೆಯಿಲ್ಲದೆ ಇರುವವನಾಗಿ ಸಮಸ್ತಮಾದ ಪ್ರಸಂವಂ ಸಂರಕ್ಷಣೆಯಂ ಗೆಯ್ಯುವುದಕ್ಕೋಸುಗ ದುಃಖವಂ ಪೋಂದುತಲಿರುವೆ. ಆದರೂ ವೃಕ್ಷಂಗಳು ಹೇಗೆ ಕೊಂಬೆಗಳ ಕೊನೆಗಳಿಂ ಬೇಸಗೆಯ ಬಿಸಲಿನಿಂದುಂಟಾದ ಕರವಾದ ಉಷ್ಣವಂ ಸಹಿಸುತ್ತ ತಮ್ಮ ಶರೀರದ ಜನಗಳ ಸಂತಾಪವಂ ತಮ್ಮ ನೆರಳಿನಿಂದ ಪರಿ ಹರಿಸುವಂತೆ, ನಿನ್ನ ಉತ್ಪತ್ತಿಯು ಸಮಸ್ಯರು ಸಲಹುವುದಕ್ಕೋಸುಗಮಲ್ಲ ದೆ ನೀನು ಸುಖವಂ ವೊಂದುವುದಕ್ಕಲ್ಲ ! ” ಎಂದು ಪೊಗಳಲು, ಇನ್ನೋರ್ವನು ಅದೇ ರೀ ತಿಖಿ:೦ ಕರವನ್ನೆತ್ತಿ - ಎಲೈ ಸ್ವಾಮಿಯೇ. ನೀನು ದಂಡೋಪಾಯನಿರತನಾಗಿ, ಪರಸ್ತ್ರೀ ಪರದ್ರವ್ಯಾಪಹಾರ, ಸುರಾಪಾನ್ನ ಸ್ವರ್ಣಸ್ತೆಯ ಮೊದಲಾದ ದುರ್ಮಾ ರ್ಗದಲ್ಲಿ ನಿರತರಾದ ಜನರುಗಳಂ ನಿಗ್ರಹಿಸುತ್ತಿರುವೆ. ಮತ್ತು ಋಣಗ್ರಹಣ, ಭೂವಿ ಷಯಕ, ಮೊದಲಾದ ವ್ಯವಹಾರಂಗಳಂ ನ್ಯಾಯಮಾರ್ಗವಿದ್ದಂತೆ ಶಮನವಂ ಗೆಯು ಪ್ರಜೆಗಳಂ ಸಲಹುತ್ತಿರುವೆ, ಮತ್ತು ಅತ್ಯಂತವಾದ ಐಶ್ವರಮುಂಟಾಗು ಲಾಗಿ ಕಾಠ್ಯಕ್ಕೆ ಬಾರದ ಬಂಧುಗಳು ಅನೇಕವಾಗಿ ಉಂಟಾಗುತ್ತಿರುವರು. ಆದರೂ ನಿಗ್ರಹಾನುಗ್ರಹ ಸಾಮರ್ಥ್ಯದಿಂ ಪ್ರಜೆಗಳ ಸಂರಕ್ಷಿಸುವ ಕೃತ್ಯವು ನಿನ್ನೆ ಲ್ಲಿಯೇ ಸುಸಮಾಪ್ತಮಾಗಿ ತೋಡುವುದು ” ಎಂದು ಎರಡನೆಯವನು ಸ್ತೋತ್ರ ವಂ ಗೈಯ್ಯುತ್ತಿರಲು; ರಾಯನು “ ಸಮಸ್ತ ಜನಸಂರಕ್ಷಣೆಗೋಸುಗ ಸುಖವಿಲ್ಲದೆ ದುಃಖಸರಿನಾ ಗುವೆ' ಎಂದು ಭಟರುಗಳು ಸ್ತುತಿಗೆಯ ವಾಕ್ಯವಂ ಕೇಳಿ, ತನಗೆ ಸೌಖ್ಯವಿಲ್ಲದಿ ರ್ದ ರೂ ಬಹುಜನರ ಸಲಹುವೆನೆಂದು ಅಂತರಂಗದ ಸಂತೋಷದಿಂ ಯುಕ್ತನಾಗಿ ಬರುತ್ತಿರಲು; ದ್ವಾರಪಾಲನೆಯಂ ಗೆಯುವ ಸ್ತ್ರೀಯು ಎಲೈ ಮಹಾರಾಜನೇ, ನೂತನವಾದ ಸಾರಣೆಯಿಂದ ಕಾಂತಿಯುಕ್ತವಾಗಿ, ಸಂಪ್ರಾಪ್ತಮಾದ ಹೋಮಕ್ಕೆ ಸಾಧನಮದ ಗೋವಿನಿಂದೊಡಗೊಂಡಿರುವ ಔಪಾಸನೆಯ ಗೃಹದ ಹೊAVAR