ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ 164 ಮನಸ್ಸಿನಿಂ ಯುಕ್ತನಾಗಿರ್ದರೂ ಈ ರಾಯಸಿರುವ ಸ್ಥಾನವು ಅಗ್ನಿಯಿಂ ಪ್ರಜ್ವಲಿ ಸುತ್ತಿರುವ ಗೃಹವು ಹೇಗೆ ಪ್ರವೇಶಿಸುವುದಕ್ಕೆ ಅಸಾಧ್ಯವಾಗಿರುವುದೋ ಅದಂತೆ ಎನಗೆ ಸಮಾಜಕ್ಕೆ ಪೋಗುವುದಕ್ಕೆ ಭಯವುಂಟಾಗಿರುವುದು ಎಂದು ನುಡಿಯಲು; ಆ ಶಾರದ್ವತನು-( ಎಲೈ ಮಿತ್ರನೇ, ನೀನು ಪೇಳುವ ವಾಕ್ಯವು ಯುಕ್ತವಾಗಿ ರುವುದು. ಸತ್ವದಾ ಅರಣ್ಯದಲ್ಲಿ ವಾಸವಂ ಗೆಯ್ಯುತಿರ್ದು ಈಗ ಪುರವಂ ಪೊಕ್ಕಿದ್ದ ತಂದೀಪರಿಯಾಗಿ ಭಯಕ್ಕೆ ಕಾರಣವಾದುದು. ಈಗ ನಾನು ನೂತನವಾಗಿ ಈ ಪಟ್ಟಣವಂ ಪ್ರವೇಶವಂ ಗೆಯ್ಯುದಿ೦ದ ನದಿ ಮೊದಲಾದ ನಿರ್ಮಲಜಲದಲ್ಲಿ ಸ್ನಾನವಂ ಗೆಯ್ಯುತ್ತಿರುವ ಪುರುಷನು ಅಭ್ಯಂಗಸ್ನಾನಂ ಗೆಯ್ದಿರುವವನಂ ಪರಿ ಶುದ್ದನಲ್ಲವೆಂದು ತಿಳಿಯುವಂತೆ, ಸದ್ಯಾಪಾರದಲ್ಲಿರುವ ಮನುಜನು ದುರ್ಮಾರ್ಗ ನಿರತನಾದ ಪುರುಷನಂ ದುಷ್ಟನನ್ನಾಗಿ ತಿಳಿಯುವಂತೆ, ಜಾಗರೂಕನಾಗಿರುವ ಮನುಜನು ಮಲಗಿರುವವನಂ ಕಂಡು ಮಂದಬುದ್ಧಿಯನ್ನಾಗಿ ತಿಳಿಯುವಂತೆ, ಮನ ಬಂದಂತೆ ತಿರುಗುವ ಪುರುಷನು ನಿರ್ಬಂಧಕ್ಕೆ ಸಿಕ್ಕಿದವನಂ ನೋಡಿ ಕೈಲಾಗದವ ನನ್ನಾಗಿ ತಿಳಿಯುವಂತ, ಸಮಸ್ತ ಸಂಸಾರಸುಖವಂ ಬಿಟ್ಟು ಇರುವ ನಾನು ಈ ಸರದಲ್ಲಿರುವ ಸಮಸ್ತ ಜನರಂ ಸಪುತ್ರರು ಮೊದಲಾದ ವಿಷಯ ಸುಖಾಸಕ್ತ ರನ್ನಾಗಿ ತಿಳಿಯುವೆನು ” ಎಂದು ಹೇಳುತ್ತಿರಲು ; ಶಕುಂತಲೆಯು ತನಗೆ ಅವಶಕುನವಾದುದು ತಿಳಿದು ಒತ್ತಿನಲ್ಲಿ ಬರುವ ಗೌತಮಿಯಂ ಕುತು, " ಎಲ್‌ ತಾಯೇ, ಏನು ಕಾರಣದಿಂದಲೋ ಎನ್ನ ಬಲ ಗಣ್ಣು ಹಾರುತ್ತಿರುವುದು? ” ಎಂದು ನುಡಿಯಲು ; ಆ ಗೌತಮಿಯು ಎಲೆ ಪ್ರಕ್ರಿಯೆ, ನಿನಗೆ ಆಶುಭಂಗಳೆಲ್ಲಾ ಪರಿಹಾರ ವಾಗುವಂತೆ ನಿನ್ನ ಪತಿಯಾದ ದುಷ್ಯಂತರಾಯನ ಕುಲದೇವತೆಯು ನಿನಗೆ ಸರಸಂ ಪದವನ್ನೀಯಲಿ! ” ಎಂದು ಆಶೀರ್ವಾದವಂ ಗೆಯ್ಯಲು ; ಸೋಮರಾತನೆಂಬ ಪುರೋಹಿತನು ಶಾಬ್ ೯ರವಋಷಿಗೆ ರಾಯನಂ ತೋ 'ಸಿ- ಎಲೈ ಋಷಿಶ್ರೇಷ್ಠನೇ, ಸಮಸ್ತವಾದ ಬ್ರಾಹ್ಮಣ ಕ್ಷತ್ರಿಯ ಮೊದಲಾದ ವರ್ಣಾಶ್ರಮ ಧರ್ಮಂಗಳಂ ವ್ಯತ್ಯಾಸವಿಲ್ಲದಂತೆ ಪರಿಪಾಲಿಸುತ್ತಿರುವ ರಾಜಾಧಿ ರಾಜನಾದ ನಮ್ಮ ದುಷ್ಯಂತರಾಜನು ಮೊದಲೇ ಸಿಂಹಾಸನದಿಂದೆದ್ದು ನೀವು ಬರು ವುದನ್ನೇ ಎದರುನೋಡುತ್ತಾ ಇರುವನು. ಈ ದಿವ್ಯವಾದ ಆಕಾರವಂ ನೋಡು ” ಎಂದು ಹೇಳಲು ; ಶಾ೯ರವನು-ಎಲೈ ಬ್ರಾಹ್ಮಣಶ್ರೇಷ್ಠನೇ, ನೀನು ಈ ರಾಜನ ಪುರೋ