ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ -ಕರ್ಣಾಟಕ ಕಾವ್ಯಕಲಾನಿಧಿ ಋಷಿಗಳು-'ಎಲೈ ಮಹಾರಾಜನೇ, ನಿನ್ನ ಮನದಲ್ಲಿರ್ದ ಸರ್ವಾಭೀಷ್ಟವಂ ಪಡೆದು ಸುಖಿಯಾಗು!” ಎಂದು ಮರಳಿ ಆಶೀರ್ವಾದವಂ ಗೆಯ್ಯಲು; ರಾಯನು-“ಎಲೈ ಪೂಜ್ಯರಾದ ಋಷಿಗಳಿರ, ನಿಮ್ಮ ತಪಸ್ಸುಗಳು ನಿರ್ವಿಘ್ನವಾಗಿ ನಡೆಯುವುವೆ ? ತಪೋವನವು ದುಷ್ಟರಾದ ರಾಕ್ಷಸಮೊದಲಾದ ವರ ಬಾಧೆಯಿಂ ವಿರಹಿತವಾಗಿರುವುದೆ? ಎಂದು ಕುಶಲಪ್ರಶ್ನೆ ಯಂ ಗೆಯ್ಯಲು; ಋಷಿಗಳು-'ಎಲೈ ಮಹಾರಾಯನೇ, ಸೂರ್ಯನು ಚೆನ್ನಾಗಿ ಪ್ರಕಾಶ ಮಾನನಾಗಿರುವಲ್ಲಿ ಅಂಧಕಾರಪ್ರಚಾರವು ಹೇಗಿಲ್ಲದಿರುವುದೋ ಅದೇ ರೀತಿಯಿಂ ನೀನು ಧರ್ಮಾತ್ಮನಾಗಿ ನಿಗ್ರಹಾನುಗ್ರಹಂಗಳಲ್ಲಿ ಸಮರ್ಥನಾಗಿ ಸತ್ಯದಿಂ ರಾಜ್ಯ ಪರಿಪಾಲನೆಯಂ ಗೆಯ್ಯ ತಿರುವಲ್ಲಿ ನಮ್ಮ ತಪಸ್ಸುಗಳಿಗೂ ತಪೋವನಕ ದುಷ್ಟರ ಬಾಧೆಯು ಪುಟ್ಟಲಾದು ಎಂದು ವಿಜ್ಞಾಪನೆಯಂ ಗೆಯ್ಯಲು; ರಾಯನು-'ಎಲೈ ಪೂಜ್ಯರಾದ ಋಷಿಗಳಿರಾ, ಷಡ್ಗುಣೈಶ್ವರ್ಯ ಸಂಪನ್ನನಾದ ಕಣ್ವಮುನೀಶ್ವರನು ಜಗತ್ತಿಗೆ ಅನುಗ್ರಹವನ್ನು ಂಟುಮಾಡುವು ದಕ್ಕೋಸುಗ ಕುಶಲದಲ್ಲಿರುವನೆ ? ಎನ್ನಲು; ಋಷಿಗಳು-'ಎಲೈ ಮಹಾರಾಯನೇ, ಅಷ್ಟಮಹಾಸಿದ್ದಿಯಂ ಪಡೆದಿ ರುವ ಮಹಾಮಹಿಮರಾದ ನಮ್ಮ ಗುರುಗಳ ಯೋಗಕ್ಷೇಮಕ್ಕೆ ಕಡಮೆಯೇನು ? ಆದರೂ ಕೆಲವು ವಾಕ್ಯವಂ ನಿಮಗೆ ವಿಜ್ಞಾಪನೆಯಂ ಗೆದ್ದು ಬರುವಂತೆ ಅಪ್ಪಣೆ ಯನ್ನಿತ್ತು ಇರುವರು' ಎನ್ನಲು; (( ಅದಂ ಕೇಳುವೆನು ಹೇಳಬಹುದು' ಎನ್ನಲು; ಶಾರ್ಬ್ದರವನು ರಾಯನಂ ಕುಲ ತು_“ಎಲೈ ಮಹಾರಾಯನೇ, ನೀನು ನಮ್ಮ ತಪೋವನಕ್ಕೆ ಬಂದು ಇದ್ದಾಗ್ಯ ಅನುರಾಗದಿಂ ಯುಕ್ತನಾಗಿ ನಮ್ಮ ಪ್ರತಿ ಯಾದ ಶಕುಂತಲೆಗೆ ಅನೇಕವಾದ ಭಾಷಯನ್ನಿತ್ತು, ಗಾಂಧರ್ವ ವಿವಾಹವಂ ವಿರ ಚಿಸಿ ಬಂದ ವೃತ್ತಾಂತವಂ ತಿಳಿದಾಗ್ಯೂ ಯುಮಾದ ಕಾರ್ಯವಂ ನಡೆಸಿದ ನೆಂದು ಸಮ್ಮತವಾಗಿ ಪ್ರೀತಿಯುಕ್ತನಾದೆನೆಂತಲೂ, ಮತ್ತು ಲೋಕದಲ್ಲಿ ಶ್ರೇಷ್ಠ ರಲ್ಲಿ ಅಗ್ರಗಣ್ಯನಾಗಿ ರಾಜೋತ್ತಮನಾದ ನೀನು ಸತ್ಯಾcಗಳೇ ಮರ್ತಿಭವಿಸಿ ದಂತಿರುವ ಈ ಶಕುಂತಲೆಯೊಡನೆ ಕೂಡಿದುದಂ ಬ್ರಹ್ಮನು ಲೋಕದಲ್ಲಿ ಉತ್ತ ಮಪುರುಷರೊಡನೆ ದುಷ್ಟ ಸ್ತ್ರೀಯರಂ, ರೂಪವತಿಯರಾದ ಸ್ತ್ರೀಯರೊಡನೆ ಕುರೂಪಿ ಗಳಾಗಿ ದುರಾಚಾರಿಗಳಾದ ವುರುಷರಂ ಕೂಡಿ ಸುವನೆಂಬ ಜನಾಪವಾದವಂ ಪೋಗ ಉಾಡಿಸಿಕೊಂಡಿರುವನು. ಈಗ ನಿನ್ನಿಂದ ಗರ್ಭವಂ ಪಡೆದಿರುವ ಈ ಶಕುಂತಲೆಯ