ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೦೯ ಸಮರ್ಥವಾಗಲಾದೆ ಇರುವಂತೆ ಇವಳ ಲಾವಣ್ಯವಂ ನೋಡಿ ಬಿಡುವುದಕ್ಕೂ ವಿವಾಹದ ಸ್ಮರಣೆಯಿಲ್ಲದಿರುವುದ°೦ ಪರಿಗ್ರಹಿಸುವುದಕ್ಕೂ ಸಮರ್ಥನಾಗಲಾ ತನು-ಎಂದು ತನ್ನೊಳು ತಾನು ಆಲೋಚನೆಯಂ ಗೆಯ್ದು ಮೌನದಿಂ ಕುಳಿ ತಿರಲು ; ಆ ದ್ವಾರಪಾಲಕಿಯು ಶಕುಂತಲೆಯಂ ನೋಡಿ-ನತನವಾಗಿ ಸುಖಕ್ಕೆ ಯೋಗ್ಯವಾದ ಈ ಶಕುಂತಲೆಯ ರೂಪವಂ ನೋಡಿ ಯಾವ ಪ್ರರುಷನಾದರೂ ಇದು ಯುಕ್ತ ಇದು ಅಯುಕ್ತವೆಂದು ವಿಚಾರಣೆಯಂ ಗೆಯ್ಯಲಾಹನು, ನಮ್ಮ . ರಾಯನು ಧರ್ಮಾಪೇಕ್ಷಿಯಾದುದಿ೦ದ ಈ ಪ್ರಕಾರವಾಗಿ ಆಲೋಚನೆಯಂ ಗೆಯ್ಯುತ್ತಿರುವನು! ” ಎಂದು ನುಡಿಯಲು ; ಶಾ೯ರವನು_“ಎಲೈ ರಾಯನೇ, ಪ್ರತ್ಯುತ್ತರವಯ್ಯದೆ ಏನು ಕಾರ ಣದಿಂ ಮೋನದಿಂ ಕುಳಿತಿರುವೆ? ಎನ್ನಲು ; ರಾಯನು- ಅಯ್ಯಾ ಖುಷಿಗಳಿರಾ, ಎಷ್ಟು ಪ್ರಕಾರವಾಗಿ ಆಲೋಚನೆ ಯಂ ಗೆಯ್ದರೂ ಈ ಶಕುಂತಳೆ ೩೦ ವಿವಾಹಿತಳನ್ನಾಗಿ ಮಾಡಿಕೊಂಡ ಸ್ಮರಣೆಯು ಪುಟ್ಟದೆ ಇರುವುದಾದ೬೦ ಚನ್ನಾಗಿ ವ್ಯಕ್ತವಾಗಿ ಗರ್ಭ ಚಿಹ್ನೆ ಯುಳ್ಳ ಈ ಶಕುಂ ತಲೆಗೆ ನಾನು ಪತಿಯಾದೆನೆಂದು ಹೇಗೆ ಒಡಂಬಡಲಿ, ಪೇಳಿರಿ?” ಎನ್ನಲು ; ಆ ಶಕುಂತಲೆಯು ಅತ್ಯಂತ ಸಂತಾಪದಿಂ ಯುಕ್ತಳಾಗಿ-- ಎಲೈ ಋಷಿ ಗಳಿರಾ, ಈ ರಾಯಂಗೆ ಎನ್ನ ವಿವಾಹದಲ್ಲೇ ಸಂದೇಹವುಂಟಾಗಿ ಇರುವಲ್ಲಿ ಪಟ್ಟ ಸ್ತ್ರೀಯಾಗಿ ಸಮಸ್ತಸೌಖ್ಯವ: ವೊಂದು ವೆನೆಂದು ಬಹುದೂರ ವ್ಯಾಪಿಸಿ ಇರುವ ಎನ್ನ ಆಶೆಯು ವ್ಯರ್ಥವಾದುದು! ” ಎನ್ನಲು; * ಶಾಬ್ ೯ರವನು ಕೋಪದಿಂ ಯುಕ್ತನಾಗಿ ಎಲೈ ರಾಯನೇ, ಪೇಳು ವೆನು ಕೇಳು ಲೋಕದಲ್ಲಿ ಒಬ್ಬಾನೊ ಪುರುಷನು ಸ್ವಕೀಯ ದ್ರವ್ಯಮಂ ಕದ್ದ ಕಳ್ಳನಂ ದಂಡಿಸದೆ ನೀನೇ ಈ ದ್ರವ್ಯಕ್ಕೆ ಯೋಗ್ಯನೆಂದಾಕಳ್ಳನನ್ನೇ ದಾನಪಾತ್ರ ನನ್ನಾಗಿ ಮಾಡುವಂತೆ ನೀನು ನನ್ನ ಖುಷಿ ಪುತ್ರಿಯಂ ಆಖುಷಿಗೆ ತಿಳಿಸದೆ ವಿವಾ ಹ ಮೊದಲಾದ ಕಾರ್ಯಗಳಂ ನಡೆಸಿದಾಗ ಶಾಪವನ್ನಿಯದೆ ಸಮ್ಮತನಾಗಿ ಇವಳಂ ನಿನ್ನ ಬಳಿಗೆ ಕಳುಹಿಸಿರುವ ನಮ್ಮ ಕಣ್ವಮುನೀಶ್ವರನಂ ಅಪವಾನವಂ ಗೆಯುವುದು ಯುಕ್ತವಲ್ಲ. ಎಂದು ನುಡಿಯಲು ; ಶಾರದ್ವತನು- ಎಲೈ ಶಾರ್ಙ್ಗರವನೇ, ಇನ್ನು ಅಧಿಕವಾದ ವಾಕ್ಯಮಂ ಮೇಳದೆ ಸುಮ್ಮನಿರು ” ಎಂದು ನುಡಿದು, ಶಕುಂತಲೆಯಂ ಕುಹ' ತು-All ಎಞ