ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೧೧ ಅವಳು ಉಂಗರವನ್ನಿಟ್ಟಿದ್ದ ಬೆರಳಂ ಮುಟ್ಟಿ ನೋಡಿ ಅದಂ ಕಾಣದೆ ಅತ್ಯಂತ ವ್ಯಾಕುಲಳಾಗಿ_(ಉಂಗರದಿಂದ ಬೆರಳು ಶೂನ್ಯವಾದುದು ! ಮುಂದೆ ಗತಿಯೇ ನು!” ಎಂದು ಗೌತಮಿಯಂ ನೋಡಲು; ಗೌತಮಿಯು ಹೇರಳವಾದ ದಿಗಲಿನಿಂದ ನೋಡಿ, ಉಂಗುರವಂ ಕಾಣದೆ, ( ಎಲೆ ಶಕುಂತಲೆಯೇ, ನೀನು ಶಾವತಾರವೆಂಬ ಸರೋವರದ ಸಮೀಪದಲ್ಲಿ ಶಚೀತೀರ್ಥಕ್ಕೆ ನಮಸ್ಕಾರವಂ ಮಾಡುವ ಕಾಲದಲ್ಲಿ ನಿನ್ನ ಬೆರಳಿನಿಂದ ಉಂಗರವು ಜಾರಿ ಬಿದ್ದಂತೆ ತೋರುವುದು ” ಎನ್ನಲು ; ರಾಯನು ಲೋಕದಲ್ಲಿ ಸ್ತ್ರೀಯರುಗಳು ತತ್ಕಾಲದಲ್ಲಿ ಕಲ್ಪನಾ ಬುದ್ದಿ ಯುಳ್ಳವರೆಂದು ಜನರುಗಳು ಹೇಳುವುದು ಈಗ ಯಥಾರ್ಥವಾದುದು!” ಎನ್ನ ಲು; ಶಕುಂತಲೆಯು ಭಿನ್ನ ಹೃದಯಳಾಗಿ, • ಕೆಟ್ಟ ದೈವವು ತನ್ನ ಮಹಾತ್ಮ ಯಂ ಎನ್ನಲ್ಲಿ ತೋ'*'ಸಿದುದು. ಆದರೂ ಎಲೈ ರಾಯನೇ, ನೀನಿತ್ತ ಉಂಗುರವು ಪೋದರೂ ನೀನು ನಮ್ಮ ತಪೋವನದಲ್ಲಿ ಏಕಾಂತವಾಗಿ ನಡೆಸಿದ ಚರ್ಯವಂ ಪೇಳುವೆನು, ಕೇಳು.” ಎನ್ನಲು; ರಾಯನು--'ನೋಡತಕ್ಕುದು ಒಂದಾಯಿತು, ಕೇಳತಕ್ಕುದೊಂದು ಹುಟ್ಟಿ ತೊ! ಕೇಳುವೆನು ಪೇಳು ಎಂದಾವಾಕ್ಯಕ್ಕೆ.. ಒಂದಾನೊಂದು ದಿವಸದಲ್ಲಿ ಮನೋ ಹರವಾದ ಇರುವಂತಿಗೆಂತೆಯ ಮಂಟಪದಲ್ಲಿ ನಾವಿಬ್ಬರು ಕುಳಿತಿರುವ ಕಾಲದಲ್ಲಿ ತಾವರೆಯೆಲೆಯ ದೊನ್ನೆ ಯಲ್ಲಿರುವ ಜಲವಂ ನೀನು ಹಸ್ತದಲ್ಲಿ ಹಿಡಿದು ಕೊಂಡಿರಲು ಆಕ್ಷಣದಲ್ಲಿ ಪ್ರತ್ರನಂತೆ ಅನುರಾಗದಿಂ ನಾನು ಸಲಹಿದ ದೀರ್ಘಾ ಪಾಂಗನೆಂಬ ಹುಲ್ಲೆಯ ಮಹ' ಯು ಒರಲು, ಹಸ್ತದಲ್ಲಿ ಹಿಡಿದಿರ್ದ ಜಲವಂ ದಯವುಳ್ಳವನಾಗಿ ಆ ಮೃಗದ ನಿಯು ಮೊದಲು ಪಾನವಂ ಗೆಯ್ಯಲೆಂದು, ಅದಂ ಜಲಪಾನವಂ ಗೆಯಿಸುವುದಕ್ಕೋಸುಗ ಸಿಡಿಯುವುದಕ್ಕೆ ಪೋಗಲು, ಆಮೃಗವು ನಿನ್ನಲ್ಲಿ ಪರಿಚ ಯವಿಲ್ಲದ್ದರಿ೦ ಜಲಸಾನೇಕ್ಷೆಯಿಲ್ಲದೆ ನಿನ್ನ ಹಸ್ತ ಸಮೀಪಕ್ಕೆ ಬಾರದಿರಲು, ಆಬಳಿಕ ನಾನು ಜಲದಿಂ ತುಂಬಿದ ಆ ತಾವರೆಯಲೆಯ ದೊನ್ನೆ ಯಂ ಪಿಡಿಯಲು, ಆ ಹುಲ್ಲೆಯ ಮಿಯು ನನ್ನಲ್ಲಿ ವಿಶ್ವಾಸವುಳ್ಳುದಾಗಿ ಎನ್ನ ಸಮೀಪವಂ ಸೇರಲು, ಆ ಬಳಿಕ ನಾನು ಈ ಅರಣ್ಯಸ್ಥಾನದಲ್ಲಿ ನಾವಿಬ್ಬರೇ ಇದ್ದಾಗ ಈ ಮೃಗದ ಮ' ಯು ಎನ್ನ ಬಳಿಗೆ ಬಂದುದಲ್ಲದೆ ನಿನ್ನ ಬಳಿಗೆ ಬರಲಿಲ್ಲ ಎನ್ನಲು; ನೀನು ಲೋಕದಲ್ಲಿ ಸಮಸ್ತ ಪ್ರಾಣಿಗಳು ಪರಿಚಯವಿದ್ದ ಸ್ಥಳಕ್ಕೆ ಪೋಗುವುದಲ್ಲದೆ ಇನ್ನೊಂದು ಸ್ಥಳಕ್ಕೆ ಪೋಗಲಾಟವು, ನೀವಿಬ್ಬರೂ ಅರಣ್ಯವಾಸಿಗಳಲ್ಲವೆ!-ಎಂದು