ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ -ಕರ್ನಾಟಕ ಕಾವ್ಯ ಕಲಾನಿಧಿ ~ ನಗುತ ಹಾಸ್ಯವಂ ಗೆಯ್ಲಿ ರುವೆ.” ಎಂದು ಗುಳುತಿನ ವಾಕ್ಯವಂ ಪೇಳಲು; . ರಾಯನು- ಎಲ್ಲ ಸ್ತ್ರೀಯೇ, ತಮ್ಮ ಕಾರ್ಯವಂ ಗೆಲುವುದಕ್ಕೋಸುಗೆ ಈ ಪ್ರಕಾರವಾಗಿ ಅನೃತವಾಕ್ಯವಂ ಪೇಳುತ್ತಿರುವ ಸ್ತ್ರೀಯರ ರುಚಿಕರವಾದ ವಾಕ್ಯಕ್ಕೆ ಕಾವುಕರಾದ ಪುರುಷರು ಮರುಳುಗೊಳ್ಳುತ್ತಿರುವರಲ್ಲದೆ ನಾನು ನಿನ್ನ ವಂಚನೆಯ ವಾಕ್ಯಕ್ಕೆ ಒಳಗಾಗತಕ್ಕವನಲ್ಲ ಎಂದು ಹೇಳಲು; ಗೌತಮಿಯು ಎಲೈ ಮಹಾರಾಜನಾದ ದುಷ್ಯಂತರಾಯನೇ, ಅನೃತ ವಾಕ್ಯವಂ ಪೇಳುವಳೆಂದು ತಿಳಿಯದಿರು, ಅರಣ್ಯದಲ್ಲಿ ವೃದ್ಧಿಯಂ ಪೊಂದಿರುವ ಳಾದ್ದಂ ಯಥಾರ್ಥವಾಗಿ ಹೇಳುವಳಲ್ಲದೆ ವಂಚನೆಯ ವಚನವಂ ಪೇಳುವು ದಕ್ಕೆ ಯೋಗ್ಯಳಾಗಲಾಳು.” ಎಂದು ನುಡಿಯಲು ; ರಾಯನು:- ಎಲೌ ತಾಪಸವೃದ್ದೆಯೇ, ಕೇಳು, ಲೋಕದಲ್ಲಿ ಸ್ತ್ರೀಯರು ಗಳಿಗೆ ವಂಚನೆಯು, ಅನೃತವು, ಮೋಸವಂ ಗೈಯ್ಯುವುದು-ಇವು ಮೊದಲಾದ ಚಮತ್ಕಾರವು ಯಾರು ಕಲಿಸದೆ ಇದ್ದರೂ ಅವರು ಪಟ್ಟುತ್ತಲೇ ಸಂಗಡ ಬರು ವುವು. ಮತ್ತು ವಂಚನೆ ಮೊದಲಾದ ಕಾರ್ಯ೦ಗಳು ಹೆಣ್ಣು ಪ್ರಾಣಿಗಳಾದ ಸಕಿ ಮೃಗಗಳಲ್ಲಿಯೂ ವ್ಯಕ್ತವಾಗಿ ತೋಯುತ್ತಿರುವಲ್ಲಿ ಸ್ತ್ರೀಯರುಗಳಿಗೆ ಮತ್ತೊಬ್ಬರು, ಉಪದೇಶವಂ ಗೆಯು ಕಲಿಸಬೇಕೆಂಬ ಪ್ರಕೃತವಿಲ್ಲದೆ ಇರುವುದು. ಹೇಗೆಂದರೆ:- ಹೆಣ್ಣು ಕೋಗಿಲೆಗಳು ಗಗನಕ್ಕೆ ಹಾಳುವುದಕ್ಕೆ ಮೊದಲೆ ತಮ್ಮ ಮೊಟ್ಟೆಗಳು ಒಡೆ ದು ಮಗಳಂ ಮಾಡುವುದಕ್ಕೆ ತಮಗೆ ತಿಳಿಯದೆ ಇದ್ದರೂ ವಂಚನೆಯಿಂದಾ ಕಾಗೆಗಳ ಗೂಡುಗಳಲ್ಲಿ ಆ ಮೊಟ್ಟೆಗಳನ್ನಿಟ್ಟು ತಮ್ಮ ಮಗಳ ಸಲಹುವಂತೆ ಮಾಡುತ್ತಿರುವುವು. ಹೀಗಿರುವಲ್ಲಿ ಸ್ತ್ರೀಯರಾದವರು ಮಾಡುವ ವಂಚನೆಯಂ ಕೇಳತಕ್ಕದ್ದೇನು ! ” ಎಂದು ನುಡಿಯಲು; ಶಕುಂತಲೆಯು ಅತ್ಯಂತ ಕೋಪದಿಂ ಕಣ್ಣುಗಳಂ ರಕ್ತದಂತೆ ಕೆಂಪುಗೆಯ್ದು, ಹುಬ್ಬುಗಳ ಗಂಟಿಕ್ಕಿಕೊಂಡು, ರಾಯನಂ ಕು ತು- ಎಲೈ ನೀಚನಾದ ದೊರೆಯೇ, ಕೇಳು, ಲೋಕದಲ್ಲಿ ಕಟಿಲಬುದ್ದಿಯುಳ್ಳ ಪುರುಷನು ತನ್ನಂತೆ ಸಮ ಸ್ವಜನರ ಕುಟಿಲರೆಂದು ತಿಳಿಯುವಂತೆ, ನಿನ್ನ ಹೃದಯದ ಅನುಮಾನದಂತೆ ಎನ್ನ ವಚನವಂ ತಿಳಿಯದಿರು. ತೃಣದಿಂ ಮುಚ್ಚಿರುವ ಬಾವಿಯಂತೆ ಧರ್ಮದಿಂ ರಾಜ್ಯವಂ ಸಲಹುವೆನೆಂದು ನಟಿಸುತ್ತ ಅಂತರಂಗದಲ್ಲಿ ಮಹಾ ಪಾಪಬುದ್ದಿಯಂ ಧರಿಸಿರುವ ನಿನ್ನ ಸಾಮ್ಯವಂ ಯಾವ ಪುರುಷನೂ ಪೊಂದಲಾನು ಎಂದು ನುಡಿಯಲು;