ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೧೩ ದುಷ್ಯಂತರಾಯನು ಶಕುಂತಲೆಯಾಡಿದ ಕರ್ಣಕಠೋರವಾದ ವಾಕ್ಯವಂ ಹೇಳಿ, “ ಈ ಶಕುಂತಲೆಯು ಪೂರ್ವದಲ್ಲಿ ಮಾಡಿದ ಕಾರ್ಯವಂಮರೆತು ಈಗ ಎನ್ನಂ ಸಂಶಯಬುದ್ಧಿಯುಳ್ಳವನನ್ನಾಗಿ ತಿಳಿದು ನಿಂದಿಸುವ ಈ ನಿಷ್ಟುರವಾಕ್ಯವು ಯಥಾರ್ಥವಾಗಿ ತೋ೫ುವುದು. ಮತ್ತು ಏಕಾಂತವಾಗಿ ಮಾಡಿದ ಕಾರ್ಯ ವಂ ಮಾತೆ ತು ಇದ್ದಲಿಂ ಕ್ರೂರವಾದ ಮನೋವ್ಯಾಪಾರವುಳ್ಳ ಎನ್ನಲ್ಲಿ ರಕ್ತನೇ ಯಾದ ಈ ಶಕುಂತಲೆಯು ಹುಬ್ಬುಗಳಂ ಗಂಟಿಕ್ಕಿರುವ ರೀತಿಯು ಮನ್ಮಥನ ಮುರಿದ ಬಿಲ್ಲಿನಂತೆ ತೋರುವುದು ” ಎಂದು ತನ್ನ ಮನದಲ್ಲಿ ಆಲೋಚನೆಯಂ ಗೆಯ್ಯುತಿರ್ದನು. ಎಂಬಲ್ಲಿಗೆ ಗದ್ಯ -ಚಂಡಕರಮಂಡಲೇಚ್ಛಂದತೆಜಃ ಕಾಂಡಕಾಂಡಷ೦ದಖಂಡಿತಾಖಂಡಶೌರ್ಯ ಪರಿಮಂಡಿತ ಭಂಡನೋದ್ದಂಡಾರಿಮಂಡಲ ಕಂಡೂಲದೋರ್ದಂಡಪಾಂಡಿತ್ಯ ಪಾಂಡುರುಚಖಂಡಡಿಂ ಡಿಪುಂಡರೀಕ ಪರಿಪಾಂಡುರಯಶಃಪಿಚಂಡಿಲ ಬ್ರಂಹ್ಮಾಂಡಭಾಂಡೋದ್ಭಟ ಕಾಲಕೂಟಪ್ರತಿಭಟ ಕಟಕಟನಿ ಶಾಟಕೂಟಪಾಟನಲಂಪಟ ನಿಖಿಲಪುಟಘಟಿತ ವಿಕಟ ಕೃಪೀಟಿಯೋನಿ ಕುಟಿಲಮೋಹಾಂ ಧಕಾರIಟಾವಿಘಟನ ಪಟು ನಟನಹಾನಟ ಮಕುಟತಟ ಪಠ್ಯಟಟಿನೀತಳಾಂತರಿಂಗದಭಂಗೋ ತುಂಗತರಂಗ ಸಂಗಭಂಗ ಸಂಭವೆಬ್ಸೈಂಭಮಣ ಗಂಭೀರವಾಗುಂಭಸಂಭಾವಿತ ಗರನಗರ ವರನಿಲಯ ಚಂದ್ರಚೂಡಚರಣಾರವಿಂದ ಸೇವಾನಂದ ನಿರಂತರ ನಿಷೇವಣ ಸ್ವಯಂವೃತಕವಿತಾ ವಧ್ರರತ್ನ ರಾಜಾಧಿರಾಜ ಮಹಾರಾಜ ಶ್ರೀ ಚಾಮರಾಜಪುತ್ರಾಯಸಗೋತ್ರ ಪವಿತ್ರಚರಿತ್ರ ಶಂಖ ಚಕ್ರ ಮಕರ ಮತ್ತ್ವ ಶರಭ ಸಾಳ್ವ ಗುಡಭೇರುಂಡ ಧರಣೀವರಾಹ ಹನುಮದ್ಧ ರುಡ ಕಂಠೀ ರವಾದ್ಯನೇಕ ಬಿರುದಾಂಕಿತ ನರಪತಿಬಿರುದ ಶ್ರೀಚಾಮುಂಡಿಕಾವರಪ್ರಸಾದಲಬ್ದ ಮಹಿಶೂರಮಹಾ ಸಂಸ್ಥಾನದೇದೀಪ್ಯಮಾನಕುಲಕ್ರಮಾಗತದಿವ್ಯರತ್ನಸಿಂಹಾಸನಾರೂಢಶ್ರೀಕೃಷ್ಣರಾಜಕಂಠೀರವರು ಸರಸಜನಾನಂದಕರವಾಗಿ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂ ವಿರಚಿಸಿದ ಕೃಷ್ಣರಾಜವಾಣೀವಿಲಾಸರತ್ನಾಕರವೆಂಬ ಶಾಕುಂತಳನಾಟಕದ ನವೀನ ಟೀಕೆಯಲ್ಲಿ ದುಷ್ಯಂತ ಶಕುಂತಲೆಯರಿಗೆ ಸಲ್ಲು ಸರಾದುದೆಂಬ ತೃತೀಯಕಲ್ಲೋಲದಲ್ಲಿ ಚತು ರ್ಥ ತರಂಗಂ ತೃತೀಯಕಿಲಂ ಸಮಾಪ್ಯಂ - - 1S