ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪. ಕರ್ಣಾಟಕ ಕಾವ್ಯಕಲಾನಿಧಿ ಚತುರ್ಥ ಕಲ್ಲೋಲಂ ಅನಂತರದಲ್ಲಿ ದುಷ್ಯಂತರಾಯನು ಶಕುಂತಲೆಯಂ ಕುಖ' ತು ಪೇಳುತಿರ್ದ ನದಂತನೆ:. « ಎಲೌ ಮಂಗಳಾಂಗಿಯೇ, ದುಷ್ಯಂತರಾಯನು ದುವ್ಯಾಪಾರದಿಂ ಜನರು ಮೋಸಗೊಳಿಸುವನಲ್ಲ ವೆಂಬ ಎನ್ನ ಚರಿತ್ರವೂ ಲೋಕಪ್ರಸಿದ್ಧವಾಗಿರು ವುದು. ಹೀಗಿರುವಲ್ಲಿ ನಿನ್ನ ಪತ್ನಿ ಯನ್ನಾಗಿ ಮಾಡಿಕೊಂಡ ಪರಿಯು ಎನ್ನಲ್ಲಿ ತೋ ಯುವುದಿಲ್ಲ” ಎಂದು ನುಡಿಯಲು; ಶಕುಂತಲೆಯು ಎಲೈ ರಾಯನೇ, ಅರಣ್ಯದಲ್ಲಿ ಸ್ಪಸ್ಟ ಮಾಗಿ ಸುಖದ ಇರ್ದ ನಾನು ವಿಶ್ವಾಸವುಳ್ಳವನೆಂದು ಮಾತಿನಲ್ಲಿ ಅಮೃತವಂ ಹೃದಯದಲ್ಲಿ ವಿಷವಂ ಧರಿಸಿರುವ ನಿನ್ನ ಹಸ್ತಕ್ಕೆ ಯಾವಾಗ ಸಿಕ್ಕಿದೆನೋ ಆಗಲೇ ಅನಾಥಳಾಗಿ ಮನ ಬಂದಂತೆ ತಿರುಗುವುದಕ್ಕೆ ಯೋಗ್ಯಳಾದೆನು ಎಂದು ಸೀರೆಯ ಸೆಕಗಂ ತನ್ನ ಮು ಖಕ್ಕೆ ಮುಚ್ಚಿ ಅತ್ಯಂತವಾಗಿ ರೋದನವಂ ಗೆಯ್ಯುತ್ತಿರಲು; . ಶಾರ್ಜ್ರವನು- ಎಲೆ ಶಕುಂತಳೆ, ತಂದೆಯಾದ ಕಣ್ವಮುನೀಶ್ವರನಿಗೆ ತಿಳಿಸದೆ ಚಾಪಲ್ಯದಿಂದ ರಹಸ್ಯವಾಗಿ ನೀನು ಮಾಡಿದ ಕಾರ್ಯದಿಂದುಂಟಾದ ಶೋಕಾಗ್ನಿಯೇ ನಿನ್ನಂ ಸುಡುತ್ತಿರುವುದು. ಲೋಕದಲ್ಲಿ ಯಾರಾಗಲಿ ಒಂದು ಕಾರ್ಯವಂ ಮಾಡಬೇಕಾಗಿದ್ದರೂ ಒಬ್ಬರಲ್ಲಿ ಸ್ನೇಹವಂ ವಿರಚಿಸಬೇಕಾಗಿದ್ದರೂ ಚೆನ್ನಾಗಿ ಪರೀಕ್ಷೆಯಂ ಗೆಯ್ದು ತನಗೆ ಆಪ್ತರಾಗಿ ನೀತಿಪರರಾದವರೊಡನೆ ಆಲೋ ಚನೆಯಂ ಗೆಯ್ಯು, ಆಬಳಿಕ ಆಕಾರ್ಯವಂ ನಡೆಸಬೇಕು. ಯಾಕೆಂದರೆ:- ಜನರ ಸ್ವಭಾವವಂ ಪರೀಕ್ಷಿಸದೆ ತನಗೆ ಹಿತವಾಗಿ ನೀತಿಯಂ ಬಲ್ಲವರೊಡನೆ ಆಲೋಚ ನೆಯಂ ಗೆಯ್ಯದೆ ಮಾಡಿದ ಮಿತ್ರತ್ವ ಮೊದಲಾದ ಕಾರ್ಯಗಳು ಕೊನೆಗೆ ತನಗೆ ವೈರಿಗಳಾಗಿ ಸಕಲದುಃಖವನ್ನುಂಟುಮಾಡುತ್ತಿರುವುವು ಎಂದು ನುಡಿಯಲು; ಆ ರಾಯನು ಆ ಋಷಿಯಾಡಿದ ವಾಕ್ಯವಂ ಕೇಳಿ, 1 ಎಲೈ ಸತ್ಯವಾಕ್ಯ ವುಳ್ಳ.ಶಾರ್ಙ್ಗ ರವನೇ, ಕೇಳು. ನೀನು ಎನ್ನ೦ ವಂಚನೆಯುಳ್ಳವನಂ ಮಾಡಿ ಕಾರ್ಯ ವಂ ಮರೆಯುವೆನೆಂದು ನುಡಿದ ವಾಕ್ಯವಂ ನಾನು ಒಪ್ಪಿಕೊಂಡೆನು. ಆದರೂ ಈ ಶಕುಂತಲೆಯಂ ವಂಚಿಸಿದುದಕ' ೦ದೆನಗೆ ಒರಕ್ಕ ಭಾಗ್ಯವೇನು ? ಎಂದು ನುಡಿಯಲು ;