ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೧೫ ಆಮುನಿಯು ಎಲ್ಲ ರಾಯನೇ, ಈ ಶಕುಂತಲೆಯಂ ಕೆಡಿಸುವುದೇ ಭಾಗ್ಯವು ಎನಲು; ರಾಯನು ಅಯ್ಯಾ ಋಷಿಯೇ, ಪುರುವಂಶದಲ್ಲಿ ಹುಟ್ಟಿದವರು ವಂಚ ನೆಯಿಂದ ಜನಗಳಂ ಕೆಡಿಸುವರೆಂಬ ತಾತ್ಪರ್ಯದಿಂ ನುಡಿದ ನಿನ್ನ ವಾಕ್ಯವು ಜನರ ವಿಶ್ವಾಸಕ್ಕೆ ಯೋಗ್ಯವಾಗಲಾದು. ಹಿಂದಕ್ಕೆ ನಮ್ಮಲ್ಲಿ ಇಂಥ ಕಾರ್ಯಗಳು ನಡೆದಿರುವುದು ತಿಳಿದು ಇರುವೆಯಾ? ” ಎನ್ನಲು, ಶಾರ್ಜ್ರವನು- ಎಲೈ ಅರಸೇ, ಕೇಳು. ನಾನು ಈ ವಿವಾದವಂ ಮಾ ಡುವುದk೦ ಎನಗೆ ಪ್ರಯೋಜನವಿಲ್ಲ. ನಮ್ಮ ಗುರುವಾದ ಕಣ್ವಮುನೀಶ್ವರನು ಏನು ಅಪ್ಪಣೆಯನ್ನಿತ್ತು ಕಳುಹಿರ್ದನೋ, ಆವಾಕ್ಯವಂ ನಿನ್ನೊಡನೆ ಪೇಳಿರುವೆವು. ಈಗ ನಾವು ನಮ್ಮ ತಪೋವನವಂ ಕುಟಿ' ತು ಪೋಗುವೆವು. ನಿನ್ನ ಪತ್ನಿಯಾದ ಈ ಶಕುಂತಲೆಯಂ ಅನುರಾಗದಿಂ ಸಂರಕ್ಷಣೆಯಂ ಮಾಡಿದರೂ ಮಾಡು, ಮನ ಬಾರದೆ ಬಿಟ್ಟರೂ ಬಿಡು. ಲೋಕದಲ್ಲಿ ಪುರುಷರುಗಳಿಗೆ ಅವರವರ ಹೆಂಡತಿಯಲ್ಲಿ ಅವರವರ ಕರ್ತೃತ್ವವು ನಾನಾ ಪ್ರಕಾರವಾಗಿ ಇರುವುದು. ಅದು ವಿಶೇಷವಾಗಿ ಪೇಳಿ ಪ್ರಯೋಜನವಿಲ್ಲ.” ಎಂದು ನುಡಿದು, ಗೌತಮಿಯಂ ಕು' ತು- ಎಲ್‌ ಪೂಜ್ಯಳೇ, ಇನ್ನು ತಪೋವನಕ್ಕೆ ನಡೆ ಎಂದು ನುಡಿಯಲು; ಆವಾಕ್ಯಕ್ಕೆ ಎಲ್ಲರು ಎದ್ದು ಪ್ರಯಾಣೋನ್ಮುಖರಾಗಿ ಪೊಸಿಮಡಲು; ಶಕುಂತಲೆಯು ಅಧಿಕದುಃಖದಿಂ ಯುಕ್ತಳಾಗಿ ಪೋಗುತ್ತಿರುವರಂ ಕುತು «« ಎಲೆ ಪೂಜ್ಯರುಗಳಿರಾ, ನಾನು ಈ ಧೂರ್ತನಾದ ದುಷ್ಯಂತರಾಯಸಂ ವಂಚಿತ ೪ಾಗಿ ಇರುವೆನು. ನೀವು ಎನ್ನ ಬಿಟ್ಟು ಪೋಗುವುದು ಯುಕ್ತವಲ್ಲ ಎಂದು ದುಃಖದಿಂ ರಕ್ತದಂತೆ ಇರುವ ನೇತ್ರಗಳಿ೦ ಧಾರಾಳವಾಗಿ ಸುರಿಯುತ್ತಿರುವ ಕಣ್ಣ ರುಳ್ಳವಳಾಗಿ, ಅವರ ಸಂಗಡಲೇ ಪೋಗುತ್ತಿರಲು; ಗೌತಮಿಯು ಸಂಗಡ ಬರುವ ಶಕುಂತಲೆಯಂ ತೋಡಿ'ಸಿ- ಎಲೈ ವತ್ವ ನಾದ ಶಾರ್ಙ್ಗರವನೇ, ನಮ್ಮಿಶಕುಂತಲೆಯು ಕರುಣದಿಂದೊಡಗೂಡಿದ ರೋದನ ವುಳ್ಳವಳಾಗಿ, ನಮ್ಮ ಸಂಗಡಲೇ ಬರುತ್ತಿರುವಳು. ನನ್ನಲ್ಲಿ ಇರಬೇಡವೆಂದು ತಿರ ಸ್ಕಾರವಂ ಮಾಡಿದ ತನ್ನ ಪತಿಯ ಸಮೀಪದಲ್ಲಿ ಇದ್ದು ತಾನೇ ಪ್ರಯೋಜನವೇನು?” ಎಂದು ಹೇಳಲು;