ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕರ್ಣಾಟಕ ಕಾವ್ಯಕಲಾನಿಧಿಆ ಶಾರ್ಬ್ಲರವನು ಹಿಂದಿರುಗಿ ಸಂಗಡ ಬರುವ ಶಕುಂತಲೆಯಂ ಕಂಡು, ಅತ್ಯಂತ ಕೋಪೋದ್ದೀಪಿತನಾಗಿ, ರಾಯನು ತಿರಸ್ಕಾರವಂ ಗೆಯ್ದನೆಂಬ ದೋಷದಲ್ಲಿ ದೃಷ್ಟಿ ಯನ್ನಿಟ್ಟು ಪತಿಯೆಂಬ ಜ್ಞಾನವಿಲ್ಲದೆ ಇರುವ ಶಕುಂತಲೆಯೇ ಕೇಳು. ನಮ್ಮ ಸಂಗಡ ಬರುವುದಕ್ಕೆ ನಿನಗೆ ಸ್ವಾತಂತ್ರವಂಟಾದುದೆ! ?” ಎಂದು ಕ್ರೋಧದಿಂ ಕಣ್ಣುಗಳು ಕೆಂಡದಂತೆ ಮಾಡಿ ಗರ್ಜಿಸಿ ನುಡಿದು, « ಲೋಕದಲ್ಲಿ ಯಾವ ಸ್ತ್ರೀ ಯಾಗಲಿ ಬಾಲ್ಯದಲ್ಲಿ ತಂದೆಯಿಂ, ಯೌವನಕಾಲದಲ್ಲಿ ಸತಿಯಿಂ, ಮುಪ್ಪಿನಲ್ಲಿ ಮಗ ನಿಂ ಸಲಹುವುದಕ್ಕೆ ಯೋಗ್ಯಳಲ್ಲದೆ ತನ್ನ ದೇಹವಿರುವವರೆಗೂ ಸ್ವತಂತ್ರಳಾಗಲಾ ಳೆಂತಲೂ, ಮತ್ತು ಯಾವ ಪುರುಷನ ಮನೆಯಲ್ಲಿ ಸ್ತ್ರೀಯು ಪುರುಷನಂತೆ ಸಮಸ್ತ ಕಾರ್ಯಗಳಲ್ಲಿ ಸ್ವತಂತ್ರಳಾಗುವಳೋ ಅವನ ಗೃಹವು ನಾಶವಂ ಪೊಂದುವುದೆಂ ಈ ನೀತಿಜ್ಞರಾದವರು ಹೇಳುತ್ತಿರುವರಾದ್ದ ಅಂದ ನಮ್ಮ ಸಂಗಡ ಬಾರದೆ, ನಿನ್ನ ಪತಿಯಲ್ಲಿಯೇ ಇರುವುದು ” ಎಂದು ನುಡಿಯಲು; ಶಕುಂತಲೆಯು ಶಾರ್ಜ್ರವನ ನಿಷ್ಟುರವಾಕ್ಯವಂಕೇಳಿ ವ್ಯಾಘ್ರ ಹೂಂಕಾ ರವಂ ಕೇಳಿದ ಮkಹುಲ್ಲೆಯಂತೆ ಅತ್ಯಂತ ಭಯಾತುರಳಾಗಿ, ಕಂಬನಿಯಂ ಬಿಡುತ್ತ, ಕಾಂತಿಹೀನಳಾಗಿ ಹೇರಳವಾಗಿ ನಡುಗುತ್ತ ನಿಲ್ಲು; ಶಾಬ್ ೯ರವನು ಮರಳಿ ಶಕುಂತಲೆಯಂ ಕುಳಿತು-1 ಎಲೆ ಬಾಲೇ, ಮುಖ್ಯವಾದ ವಾಕ್ಯವಂ ಪೇಳುವೆನು ಕೇಳು. ಭೂಪತಿಯಾದ ದುಷ್ಯಂತರಾ ಯನು ಯಾವಪ್ರಕಾರವಾಗಿ ಹೇಳುತ್ತಿರುವನೋ ಆರೀತಿಯಿಂದಿರುವುದು ನಿನಗೆ ಯುವು. ಮತ್ತು ಪತಿಯ ವಾಕ್ಯಾನುಸಾರವಾಗಿ ನೀನು ಮನಬಂದಂತೆ ಸಂಚ ರಿಸುತ್ತ ಇರ್ದರೂ ನಿನ್ನ ಸಂರಕ್ಷಿಸಿದ ಕಣ್ವಮುನಿಯಿಂ ನಿನಗೆ ಭಯವುಂಟಾಗಲಾ ಅದು. ಮತ್ತು ಮಹಾ ಪತಿವ್ರತೆಯಾದ ನಿನ್ನ ಚರಿತ್ರವಂ ನೀನೆ ಬಲ್ಲೆಯಾದ್ದ '೦ ಪತಿಯಾದ ಈ ರಾಯನ ಗೃಹದಲ್ಲಿ ಗೌಡಿಯ ಚಾಕರಿಯಾದರೂ ನಿನಗೆ ಯೋಗ್ಯ ವಾಗಿರುವುದು. ನೀನು ಎನ್ನೊ ಡನೆ ಬರಲಾಗದು ? ನಿಲ್ಲು ! ನಾವು ಪೋಗುವೆವು' ಎಂದು ನುಡಿಯಲು ; ರಾಯನು. ಎಲೈ ಮುನಿಶಿಷ್ಯನೇ, ಯಾತಕ್ಕೋಸುಗ ಈ ಸ್ತ್ರೀಯಂ ಇಲ್ಲಿಯೇ ಬಿಟ್ಟು ಪೋಗುತ್ತಿರುವೆ ? ಆದರೂ ಪೇಳುವೆನು ಕೇಳು! ಚಂದ್ರನು ಕನ್ನೆ ದಿಲೆಗಳಂ ವಿಕಾಸವಂ ಮಾಡುವನಲ್ಲದೆ ಕಮಲಗಳನ್ನು ಅರಳಿಸಲಾನು ; ಸೂಕ್ಯನು ಕಮಲಗಳಿಗೆ ಕಳೆಯನ್ನು ಕಟುಮಾಡುವನಲ್ಲದೆ ಕನ್ನೈದಿಲೆಗಳಂ ಅರಳಿಸ ಲಾಹನು. ಆದ್ದ' ೦ದ ಜಿತೇಂದ್ರಿಯರಾದ ನಮ್ಮಂಥ ಪುರುಷರು ಸ್ವಸ್ತ್ರೀಯರಲ್ಲಿ