ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ -ಕಣಾ : ಟಕ ಕಾವ್ಯಕಲಾನಿಧಿ ಯಾದ್ದ 'ಂದಿವಳು ಪ್ರಸವಿಸುವವರೆಗೂ ಎನ್ನ ಮನೆಯಲ್ಲಿರಲಿ; ಏಕೆಂದರೆ-ಪೂರ್ವ ದಲ್ಲಿ ನೀನು ತಪೋವನಕ್ಕೆ ಪೋಗಿದ್ದಾಗ ಚಕ್ರವರ್ತಿಯಾಗುವ ಪುತ್ರನಂ ಪಡೆಯುವ ಎಂದು ಮೊದಲೇ ಋಷಿಗಳಿಂ ಕೇಳಲ್ಪಟ್ಟಿರುವೆಯಾದ ಈ ಶಕುಂತಲೆಯ ಗರ್ಭದಲ್ಲಿ ಪುಟ್ಟುವ ಕಣ್ವ ಋಷಿಯ ಮೊಮ್ಮಗನು ಆ ಋಷಿಗಳು ಹೇಳಿದಂತೆ ಆಜಾನುಬಾಹುವಾಗಿ, ವಿಶಾಲವಕ್ಷಸ್ಸಲನಾಗಿ, ಉನ್ನತನಾಸಿಕನಾಗಿ, ರಕ್ತನೇ ತಾನಾಗಿ ಇನ್ನು ಅನೇಕಮಾದ ಚಕ್ರವರ್ತಿ ಲಕ್ಷಣಗಳಿಂದೊಡಗೂಡಿದವನಾ ದರೆ, ನೀನು ಸಂತುಷ್ಟ ಹೃದಯನಾಗಿ ಈ ಶಕುಂತಲೆಯಂ ನಿನ್ನ ಅಂತಃಪುರಪ್ರವೇ ಶವಂ ಗೆಯುವುದು, ಅಲ್ಲದೆ ಇವಳ ಗರ್ಭದಿಂ ಪುಟ್ಟಿದ ಪುತ್ರನಲ್ಲಿ ರಾಜಲಕ್ಷಣಂ ಗಳಿಲ್ಲವಾದಲ್ಲಿ ಇವಳಂ ತಂದೆಯಾದ ಕಣ್ಯಲ್ವುಷಿಯ ಸಮಾಸಕ್ಕೆ ಕಳುಹಿಸುವುದು ಯುಕ್ತವಾಗಿ ಇರುವುದು ರಾಜನ್ನು- ರಾದ ನಿಮ್ಮ ಚಿತ್ರಕ್ಕೆ ಹೇಗೆ ಯುಕ್ತವಾಗಿ ತೋರು ವುದೋ ಆ ಪರವಾಗಿ ಕಾರೈವಂ ನಡೆಸಬಹುದು ” ಎಂದು ಅಪ್ಪಣೆಯನ್ನೇ ಯ್ಯಲು; ಪುರೋಹಿತನು- ಎಲೆ ಬಾಲೆಯಾದ ಶಕುಂತಲೆಯೇ ಎನ್ನ ಸಂಗಡ ಒರುವು ದೆಂದು ನುಡಿಯಲು; ಆ ಶಕುಂತಲೆಯು ಪುರೋಹಿತನು ಪೇಳಿದ ವಾಕ್ಯವಂ ಕೇಳಿ, ಎನ್ನ ವಸ್ಥೆಯು ಈ ಪ್ರಕಾರವಾದುದು, ಮುಂದೆ ಗತಿಯಂ ಕಾಣೆನೆಂದು ಅನ್ನ ಮನದಲ್ಲಿ ಅತ್ಯಂತ ದುಃಖಾತುರಳಾಗಿ, ಭೂಮಿಯಂ ಕುಳಿತು : ಭೂದೇವಿಯೇ, ನೀನು ಬಾಯಿ ತೆರೆ ದೆಯಾದರ ನಿನ್ನಲ್ಲಿ ಪ್ರವೇಶವಂಗೆನು” ಎಂದು ನುಡಿಯುತ್ತ, ಕಾಡಿಚ್ಚಿನ ಸೆಕೆತಟ್ಟಿದ ಎಳೆಯ ಬಳ್ಳಿಯಂತೆ ದುಃಖಾಗ್ನಿಯಿಂ ಕಂದಿ ಕಾಂತಿಹೀನವಾದ ಕಾಯ ದಿಂ ಕೂಡಿ, ಸೂರ ಬಿಂಬವಂ ಧರಿಸಿದ ಈಶ್ವ ದಿಕ್ಕಿನಂತೆ ಗರ್ಭದಿಂ ಬಿಳೇದ ದೇಹ ಕಾಂತಿಯುಳ್ಳವಳಾಗಿ, ಹೇರಳವಾದ ರೋದನವಂ ಗೆಯ್ಯುತ್ತ, ಆ ಫರೋಹಿತನು ಋುಷಿಗಳೊಡನೆ ಸಹ ಪೊಟ್ಟು ಬರುತ್ತಿರಲು; ರಾಯನು ದುರಾಸಮುನಿಯ ಶಾಪದಿಂ ಪೂತ್ವದಲ್ಲಿ ಮಾಡಿದ ಕಾರ ಜ್ಞಾ ನವಿಲ್ಲದಿದ್ದರೂ ಕಳವಳಪಡುತ, ಶಕುಂತಲೆಯು ಪೋದುದಂ ಚಿಂತಿಸುತ್ತಿರಲು; ಇತ್ತಲು ಶಕುಂತಲೆಯು ಸ್ವರವೆತ್ತಿ ರೋದನವಂ ಗೆಯ್ಯುತ, ಪುರೋಹಿತ ನೊಡನೆ ಬರುತ್ತಿರಲು;