ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಕರ್ಣಾಟಕ ಕಾವ್ಯಕಲಾನಿಧಿ ನೋಡುತ, ಮಗಳಾದ ಶಕುಂತಲೆಯ ವಿಯೋಗದಿಂ ವ್ಯಸನಾತುರನಾಗಿರುವ ಕಣ್ಣ ಮುನಿಯಂ ಕಂಡು, ಮನದಲ್ಲಿ ನಮಸ್ಕರಿಸಿ, ಅನಸೂಯೆ ಪ್ರಿಯಂವದೆಯರೀಶ್ವರು. ನಮ್ಮ ಶಕುಂತಲೆಯು ಪತಿಗ್ರಹವಂ ಕು” ತು ಪೊದಾರಭ್ಯವಾಗಿ ನಮಗೆ ಆಹಾ ರವೇ ರುಚಿ ಸಲಾಗೆಂದು ಅನ್ನೋನ್ಯವಾಗಿ ಸಲ್ಲಾಪವಂ ಗೆಯ್ಯುವುದಂ ಕೇಳಿ ಶಕುಂತಲೆಯು ದುಷ್ಯಂತರಾಯನ ಪುರಕ್ಕೆ ಪೋಗಿರುವಳೆಂದು ತನ್ನ ಮನದಲ್ಲಿ ನಿಶ್ಚಯಿಸಿ, ಅಲ್ಲಿಂದ ಹಿಂದಿರುಗಿ, ಪ್ರತಿಷ್ಟಾನಪುರಾಭಿಮುಖಳಾಗಿ ಬರುತ, ಎನ್ನ ಸ್ನೇಹಿತಳ ಪುತ್ರಿಯಾದ ಶಕುಂತಲೆಯು ಎಂತಿರುವಳೋ ಅವಳು ಯಾವಾಗ ನೋಡು ವೆನೋ ಎಂಬ ಕುತೂಹಲದಿಂ ಯುಕ್ತಳಾಗಿ, ಬರುತ್ತಿರಲು; ಮಧ್ಯಮಾರ್ಗದಲ್ಲಿ ತನ್ನ ಬಲಗಣ್ಣು ಬಲಭುಜವು ಸಹ ಹಾವುದು ತಿಳಿದು, ಭಿನ್ನ ಹೃದಯಳಾಗಿ, ಎನಗುಂಟಾಗುವ ಆವಶಕುನವಂ ಪರಿಭಾವಿಸಿದಲ್ಲಿ ಶಕುಂತಲೆಯು ದುಷ್ಯಂತರಾ ಯನ ಸಮೀಪದಲ್ಲಿ ಕ್ಷೇಮದಿಂದಿರಲಾಡಳೆಂದು ಸಂಶಯಕ್ರಾಂತಚಿತ್ತಳಾಗಿ ಬರಲು; ಮುಂಬಾಗದಲ್ಲಿ ಅಳಕಾನಗರೆದಂತೆ ಚಿತ್ರಲೇಖಾಂಚಿತವಾಗಿ ಸ್ವರ್ಗಲೋ ಕದಂತೆ ಸುರಶಾಲಾಶ್ರಿತವಾಗಿ: 'ಗಂಧರ್ವಸಂದೋಹ ಸುಂದರವಾಗಿ, ಪಾತಾಳ ದಂತೆ ಅನೇಕ ಚಾಶ್ರಯವೆಸಿ, ಆಕಾಶದಂತೆ ಸದ್ರಾಜಹಂಸಸೇವಿತ ಮಾಗಿ, ಸಮುದ್ರದಂತೆ ಅನೇಕ ವಾಹಿನೀಸಂಗತವಾಗಿ, ನವರತ್ನಾಶ್ರಯವೆನಿಸಿ, ಇನ್ನೂ ಅನಂತಾನಂತ ಸೌಧತೋರಣ ಮೊದಲಾಗಿ ಚಿತ್ರತರ ವಸ್ತುವಿನಿಂದ ರಮ ಣೀಯವಾಗಿರುವ ಪ್ರತಿಷ್ಠಾನಪಟ್ಟಣವಂ ಕಂಡು, ಸಂತೋಷವಂ ಪಡೆದು, ನಮಗೆ ಸ್ವಾಮಿಯಾದ ಇಂದ್ರನ ಸ್ವರ್ಗಕ್ಕಿಂತಲೂ ಈ ಪುರವು ನೂರ್ಮಡಿಯಾದ ಸೊಗ ಸುಳ್ಳದೆಂದು ಶಿರವಂ ತೂಗುತ್ತಾ ಬರುತ್ತಾ, ಮೇರುಶೃಂಗದಂತೆ ನವರತ್ನ ಖಚಿತ ವಾಗಿ ಆಕಾಶವಂ ವ್ಯಾಪಿಸಿರುವ ದುಷ್ಯಂತರಾಯನ ಉಪ್ಪರಿಗೆಯಂ ಕಂಡು ಸುಂದರವಾದ ಈಮಂದಿರವು ಮಹಾರಾಜನಾದ ದುಷ್ಯಂತನಾಗಿರಬಹುದೆಂದೂಹಿ ಸುತ್ತ, ತಿರಸ್ಕರಣೀ ವಿದ್ಯದಿಂದಾರಿಗೂ ಗೋಚರಳಾಗದೆ ಬರುತ್ತಿರಲು; ಅಷ್ಟ ತಲ್ಲೇ ಶಕುಂಲೆಯ ಪುರೋಹಿತನ ಬೆಂಬಿಡಿದು ಬರುತ್ತಾ, ತಾನು ಪುಟ್ಟಿದ ಕಣ್ವಮುನೀಶ್ವರನು ಅತ್ಯಂತ ಪ್ರೇಮದಿಂ ತನ್ನ ಸಂರಕ್ಷಣೆಯಂ ಗೆಯ್ಯ ಪರಿಯಂ, ರಾಯನು ತಪೋವನಕ್ಕೆ ಬಂದು ಸಲುಗೆಯಾಗಿ ನಂಬಿಗೆಯ ವಾಕ್ಯವಂ ತನಗೆ ಹೇಳಿ ಗಾಂಧರ್ವ ವಿವಾಹವಂ ಗೆಯ್ಯು ಈಗ ಎನ್ನ ಪತ್ನಿ ಯಲ್ಲವೆಂದು ತಿರ ಸ್ಕಾರವಂ ವಿರಚಿಸಿದ ಸಂಗತಿಯಂ ಗಟ್ಟಿಯಾಗಿ ಹೇಳುತ್ತ, ಧ್ವನಿಗೆ ರೋದ ನವಂ ಮಾಡುತ್ತಾ ಬರುತ್ತಿರಲು;