ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ -ಕರ್ಣಾ ಟಕ ಕಾವ್ಯಕಲಾನಿಧಿ~... ಅಚ್ಛರಸೀರ್ಥವೆಂಬ ಸರಸ್ಸಿನ ಸಮಾಜದಲ್ಲಿ ಒಂದಾನೊಂದು ತೇಜೋಮಯ ಮಾದ ವಿಮಾನದಲ್ಲಿ ಒಬ್ಬ ಸ್ತ್ರೀಯು ಬಂದು ಗಗನಕ್ಕೆ ಶಕುಂತಲೆಯನ್ನೆತ್ತಿ ಕೊಂಡು ಪೋಗಿ ಅಂತರ್ಧಾನವಾದಳು. ಮುಂದೆ ಏನು ಅಪ್ಪಣೆಯನ್ನಿಯು ಏರಿ ?” ಎಂದು ನುಡಿಯಲು ; * ರಾಯನು- ಅಯ್ಯ, ಪೂಜ್ಯರಾದ ಪುರೋಹಿತರೇ, ಮೊದಲೇ ನಾನು ಆ ಶಕುಂತಲೆಯಂ ಎನ್ನ ಪತ್ನಿ ಯಲ್ಲ ಎಂದು ತಿರಸ್ಕಾರವಂ ಗೆಯ್ದಿರುವೆನು. ಈಗ ಅವಳು ಪೋದಳೆಂದು ವ್ಯರ್ಥವಾಗಿ ಮನೋವ್ಯಥೆಯಂ ವೊಂದದೆ ಸ್ವಸ್ಥ ಚಿತ್ತರಾಗಿ ನಿಮ್ಮ ಗೃಹವಂ ಪ್ರವೇಶವಂ ಗೆಯ್ಯಬೇಕು ” ಎಂದು ಅಪ್ಪಣೆಯನ್ನಿ ಲಿಯಲು; ಆ ಪ್ರರೋಹಿತನು ರಾಯನ ಅಪ್ಪಣೆಯಂ ಪಡೆದು ತನ್ನ ಗೃಹಕ್ಕೆ ಪೋಗಲು; * ಇತ್ತ ರಾಯನು ತನ್ನ ಸಮೀಪದಲ್ಲಿರುವ ದ್ವಾರಪಾಲಕನಂ ಕುತು, & ಎಲೈ ಕಂಚುಕಿಯೇ, ಏನು ಕಾರಣದಿಂದಲೋ ಎನ್ನ ಹೃದಯವು ಕಳವಳವಂ ಪೊಂದುತ್ತಿರುವುದು. ಶಯನಗೃಹದ ಮಾರ್ಗವನ್ನನುಸರಿಸಿ ನಡೆ ” ಎಂದು ಅಪ್ಪಣೆಯನ್ನಿತ್ತು, ಕುಳಿತಿರ್ದ ರತ್ನ ಪೀಠದಿಂದೆದ್ದು, ಆ ಕಂಚುಕಿಯು ತೋಡಿಸುವ ಮಾರ್ಗವಂ ಕುಕೀ ತು ಬ೦ದು, ಹಂಸತೂಲವಿರಾಜಮಾನವಾದ ಮಂಚದಲ್ಲಿ ಕುಳಿ ತು, “ ಮುನಿಪುತ್ರಿಯಾದ ಶಕುಂತಲೆಯಂ ಅಧಿಕವಾಗಿ ತಿರಸ್ಕಾರವಂ ಗೆಯ್ಯ ಎನ್ನ ಹೃದಯವು ಬಲವಾಗಿ ವ್ಯಸನಮಂ ಪೊಂದುತ, ಎನ್ನ ಸಮಾಧಾನವಂ ಗೆಯುವಂತೆ ತೋ' ಹೇಳುವದಕ್ಕಾಗದೆ ಇರುವ ಏನೋ ಒಂದು ವಿಶ್ವಾಸವನ್ನ ವಳಲ್ಲಿ ಪಟ್ಟಿ ಸುತ್ತಿರುವುದು ” ಎಂದು ತನ್ನೊಳು ತಾನು ಆಲೋಚನೆಯಂ ಗೆಯ್ಯು ತ, ಶಯನಗೃಹದಲ್ಲಿರ್ದನು. ఎంబల్లిగే ಕೃಷ್ಣ ರಾಜಕ೦ಠಿರವರು ರಚಿಸಿದ ಕೃಷ್ಣ ರಾಜವಾದೀ ವಿಲಾಸ ರತಾಕರ ವೆಂಬ ಶಕುಂತಲನವೀನಟೀಕಿನಲ್ಲಿ ದುಷ್ಯಂತರಾಯನಿಂದ ತಿರಸ್ಕಾರವಂ ಪಡೆದ ಶಕುಂತಲೆಯಂ ಸಾರಸಿಕೆಯೆಂಬ ಅಪ್ಪರಸ್ತ್ರೀಯು ಮೇನಕೆಯ ಸಮಾಸಕ್ಕೆ ತೆಗೆದುಕೊಂಡು ಪೋದಳೆಂಬ ಚತುರ್ಥ ಕಲ್ಲೋಲದಲ್ಲಿ ಪ್ರಥಮ ತರಂಗಂ ಸಂಪೂರ್ಣ೦. 9 M

-~-