ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

റi -ಶಾಕುಂತಲನಾಟಕ ನವೀನಟೀಕೆ ಚತುರ್ಥ-ಕಲ್ಲೋಲದ ದ್ವಿತೀಯತರಂಗಂ. ಅನಂತರದಲ್ಲಿ ರಾಯನು ಏನೋ ಒಂದು ಮನೋವ್ಯಥೆಯಂ ಪೊಂದಿ ಶಯನ ಗೃಹದಲ್ಲಿರುತ್ತಿರಲು ; ಇತ್ತಲು ಶಕ್ರಾವತಾರತೀರ್ಥವೆಂಬ ಸರೋವರದ ಸಮೀಪದಲ್ಲಿ ವಾಸವ ಗೆಯ್ಯುತಿರ್ದ ಒಬ್ಬಾನೊಬ್ಬ ಬೆಸ್ತರವನು ಒಂದುದಿನ ಮತೃಗಳಂ ಪಿಡಿಯುವು ದಕ್ಕೆ ಆ ಸರಸ್ಸಿನಲ್ಲಿ ಬಲೆಯ ಬೀಸಿ ಅನೇಕ ಮ ಗಳು ಹಿಡಿಯಲದಲ್ಲಿ ಒಂದು ಮೀನು ಹೊಂಬಣ್ಣವಾಗಿ ಹೊಳೆಯುತ್ತಿರಲು, ಅದಂ ಭಕ್ಷಿಸಲೋಸುಗ ತುಂಡುಗೆಯ್ಯಲಾ ವಿನಹೊಟ್ಟೆಯಲ್ಲಿ ಶಕುಂತಲೆಯ ಹಸ್ತದಿಂ ಜಾತ್' ಬಿದ್ದ ಅಮೂಲ್ಯವಾದ ರತ್ನ ಗಳಿಂ ಕೆತ್ತಿರುವ ಮುದ್ರೆಯುಂಗುರವಂ ಕಂಡು ಅಧಿಕ ಸಂತೋ ಷಯುಕ್ತನಾಗಿ,- “ ಈ ಉಂಗುರಂ ಕ್ರಯವಂ ಮಾಡಿ ಅಧಿಕ ದ್ರವ್ಯ ಮಂ ಪಡೆದು ಮಡದಿಮಕ್ಕಳಂ ಸಲಹುವೆನು ” ಎಂದು ತನ್ನ ಮನದಲ್ಲಿ ಆಲೋಚ ನೆಯಂ ಗೆಯು ಆ ಉಂಗುರವಂ ತೆಗೆದು ಕೊಂಡು ಪ್ರತಿಷ್ಟಾನಪಟ್ಟಣಕ್ಕೆ ಬಂದು, ಒಬ್ಯಾನೊಬ್ಬ ವರ್ತಕನಿಗೆ ತೋ೪೨ ಸಲು; ಆ ವರ್ತಕನು ರತ್ನ ದಿಂ ಕೆತ್ತಿರುವ ದುಷ್ಯಂತರಾಯನ ನಾಮಾಕ್ಷರವಂ ನೋಡಿಕೊಂಡು, -ಈ ಉಂಗುರವು ಮಹಾರಾಜನಾದ ದುಷ್ಯಂತರಾಯನದಿರು ವುದು. ಇವನು ಇದಂ ಎಲ್ಲಿಂದಲೋ ಕದ್ದು ಕೊಂಡು ಬಂದಿರುವನು ಎಂದು ಕಾಣು ವನು, ಈ ಉಂಗುರಕ್ಕೆ ಅನೇಕ ದ್ರವ್ಯವಂ ಕೊಟ್ಟರೂ ಕ್ರಯಸಾಲದೆ ಇರುವುದು. ಈ ಮುದ್ರಿಕೆಯಂ ಎನ್ನಲ್ಲಿರಿಸಿಕೊಂಡು ಇವನು ಹೇಳುವಂತೆ ನಾನು ಕ್ರಯವಂ ಕೊಟ್ಟರೆ ಮಹಾಪರಾಧಿಯಾಗಿ ರಾಜದಂಡನೆಗೆ ಯೋಗ್ಯನಾಗುವೆನು ಎಂದಾ ಲೋಚಿಸಿ, ಆ ಬೆಸ್ತರವನಂ ಕುಹ' ತು- ಎಲೈ ಪುರುಷನೇ, ಈ ಉಂಗುರದ ಕ್ರಯ ಕ್ಕೆ ಕೆಲವು ದ್ರವ್ಯವು ಸಾಲದೆ ಇರುವುದು. ಅದಂ ತೆಗೆದುಕೊಂಡು ನಾನು ಜಾಗ್ರ ತೆಯಿಂ ಬರುವವರೆಗೂ ನೀನು ಇಲ್ಲೇ ಇರುವುದು ” ಎಂದು ನುಡಿದು, ತ್ವರೆಯಿಂ ಗ್ರಾಮಪಾಲಕನ ಸಮೀಪಕ್ಕೆ ಬಂದು, “ಎಲೈ ಸ್ವಾಮಿಯೇ, ಯಾವನೋ ಒಬ್ಬ ಪುರುಷನು ರತ್ನಖಚಿತವಾಗಿ ದುಷ್ಯಂತಮಹಾರಾಯನ ನಾಮಾಕ್ಷರದಿಂ ಯುಕ್ತ ಮಾಗಿರುವ ಒಂದು ಮುದ್ರೆಯುಂಗರವಂ ತೆಗೆದುಕೊಂಡು ಬಂದು, ಇದಕ್ಕೆ ಯೋ ಗ್ಯವಾದ ಕ್ರಯದ್ರವ್ಯವಂ ಕೊಡುವುದೆಂದು ಕೇಳುವನು. ಆ ಉಂಗುರವನ್ನೊ ಡಿ ಭಯಾ ತುರನಾಗಿ ತವ ಸವಿಾಪಕ್ಕೆ ಬಂದಿರುವೆನು ” ಎಂದು ನುರಿ ಯಲು ;