ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ ೧ ೨೭ ಅಷ್ಟ ಅಲ್ಲೇ ಆ ಬೆಸ್ತರವನಿಗೆ ಕೊಡತಕ್ಕ ದ್ರವ್ಯ ವಂ ತೆಗೆದುಕೊಂಡು ಬರುವ ಗ್ರಾಮಾಧಿಪತಿ ಯ ಕಂಡು, ಆ ಜಾನುಕನು- ಎಲೈ ಬೆಸ್ತರವನೇ . ಅದೋ ರಾಜಗೃಹದಿಂ ರಾಯನ ಅಪ್ಪಣೆಯಂ ತೆಗೆದು ಕೊಂಡು ನಾವಿರುವ ಸ್ಥಳಕ್ಕೆ ಅಭಿಮುಖನಾಗಿ ಗ್ರಾಮಾಧಿಪತಿಯು ಬರುತ್ತಿರುವನು. ಬಂದಮೇಲೆ ನೀನು ಗೃದ್ದ ಬಲಿಯಗುವೆ ” ಎಂದು ಭಯವನ್ನುಂಟುಮಾಡುತ್ತಿರಲು; ಅಷ್ಟ ಅಲ್ಲೇ ಗಾವಾಧಿಪತಿಯು ಜಾಗ್ರತೆಯಿಂ ಬಂದು, ಎಲೈ ಭಟರು ಗಳಿರಾ, ಈ ಬೆಸ್ತರವನು ತನಗೆ ಉಂಗುರವಂ ದೊರಕಿದ ಸಂಗತಿಯಂ ಯಥಾರ್ಥ ಮಾಗಿ ಹೇಳಿರುವನಾದ್ದ ಕ೦ ಬಲೆಯಿಂ ಜೀವಿಸುತ್ತಿರುವನಂ ಬಿಟ್ಟು ಕಳುಹಿಸಿ ” ಎಂದು ಆಜ್ಞೆಯನ್ನೀಯಲು; ಆ ಜಾನುಕನು- ಎಲೈ ಸ್ವಾಮಿಯೇ, ನಿನ್ನಾ ಜ್ಞೆಯು ಎಂತಾಗುವುದೋ, ಆಪ್ರಕಾರಕ್ಕೆ ನಡೆದುಕೊಳ್ಳುವೆನು ” ಎಂದು ನುಡಿಯಲು, ಆ ಸೂಚಕನು, (ಎಲೈ ಸ್ವಾಮಿಯೇ, ಬೆದವನು ಯಮ ಪುರಪ್ರವೇ ಶವಂ ಗೆಯು ಹಿಂದಿರಿಗಿ ಬಂದವನಂತಾದನು ” ಎಂದು ನುಡಿದು, ಅವನ ಭುಜ ಗಳಂ ಕಟ್ಟಿರ್ದ ಹಗ್ಗಗಳಂ ಬಿಚ್ಚಲು; ಆ ಬೆಸ್ತರವನು ಆಗ್ರಾಮಾಧಿಪತಿಗೆ ನಮಸ್ಕಾರವಂ ಗೆಯ್ಯು, " ಎಲೈ ಸ್ವಾಮಿಯೇ, ನಿನ್ನ ಪ್ರಾಣವು ನಿನ್ನ ಕೆಯ್ಯಲ್ಲಿರುವುದು. ಇನ್ನು ಸಂರಕ್ಷಿಸಬೇಕು ? ಎಂದು ನುಡಿಯಲು ; ' ಆ ಗ್ರಾಮಪಾಲಕನು 6 ಎಲೈ ಬೆಸ್ತರವನೇ, ಮಹಾರಾಯನಾದ ದುಷ್ಯಂತರಾಯನು ನೀನು ತಂದ ರತ್ನ ಮುದ್ರಿಕೆಯ ಕ್ರಯಕ್ಕೆ ಸರಿಯಾದ ಈ ದ್ರವ್ಯ ವಂ ನಿನಗೆ ಉಡುಗೊರೆಯಾಗಿ ಅಪ್ಪಣೆಯನ್ನಿ ತಿರುವನು. ಇದಂ ತೆಗೆ ದುಕೋ ” ಎಂದು ಅವನಿಗೆ ತಾನು ತಂದಿರ್ದ ದ್ರವ್ಯ ವಂ ಕೊಡಲು ; ಆ ಬೆಸ್ತರವನು ಅತ್ಯಂತ ಸಂತುಷ್ಟನಾಗಿ,ಆ ದ್ರವ್ಯವು ತೆಗೆದುಕೊಂಡು, ಆ ಗ್ರಾಮಾಧಿಪತಿಯ ಚರಣಂಗಳಿಗೆ ನಮಸ್ಕಾರವಂಗೆಮ್ಮು, (( ಎಲೈ ಸ್ವಾಮಿಯೇ, ನಿನ್ನ ಕಟಾಕ್ಷದಿಂ ನಾನು ಸಂರಕ್ಷಿತನಾದೆನು ” ಎಂದು ನುಡಿಯುತ್ತಿರಲು; ಆ ಸೂಚಕನು, ಈ ಬೆಸ್ತರವನು ಮಹಾರಾಯನಾದ ದುಷ್ಯಂತರಾಯನ ಅನುಗ್ರಹಕ್ಕೆ ಪಾತ್ರನಾಗಿ, ಶೂಲಕ್ಕೆ ಹಾಕಿರ್ದ ಪುರುಷನಂ ತೆಗೆದು ಆನೆಯ ಕುಂಭ ಸ್ಥಲದಲ್ಲಿ ಕುಳ್ಳಿರಿಸಿದಂತಾದನು ಎಂದು ನುಡಿಯಲು ; ಆವಾಕ್ಯಕ್ಕೆ ಜಾನುಕು- ಎಲೈ ಸೂಚಕನೇ, ಕೇಳು. ಈಗ ತೆಗೆದು