ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೩೧ ಳ್ಳುದಾಗಿ ಅರವಿಂದಾಶೋಕ ಮೊದಲಾದ ಐದು ಬಾಣಕ್ಕಿಂತಲೂ ಅಧಿಕವಾಗು!” ಎಂದು ನುಡಿದು, ಆ ಮಾವಿನ ಚಿಗುರಂ ಕೊಯ್ಯು ಭೂಮಿಗೆ ಇಡುತ್ತಿರಲು; ಅಷ್ಟ ಇಲ್ಲೇ, “ಬೇಡ ಬೇಡ ವೆಂದು ವಸ್ಯವಂ ಬೀಸುತ್ತಾ, ಅತಿ ಜಾಗ್ರತೆಯಿಂ ದ ವಾತಾಯನನೆಂಬ ಒಬ್ಬ ಕಂಚುಕಿಯು ಒಂದು, ಆ ಮಧುಕರಿಕೆಯಂ ಕು¥ತು, * ಎಲೆ ಜ್ಞಾನಶೂನ್ಯಳಾದ ಸ್ತ್ರೀಯೆ, ಮಹಾರಾಜನಾದ ದುಷ್ಯಂತರಾಯನು ವಸಂತೋತ್ಸವವು ಆಗದೆಂದು ನಿಷೇಧವಂ ಗೆಯ್ದಿರುವಲ್ಲಿ ಸೀಮಾವು ಮೊದಲಾದ ಜ.1 ರುಗಳಂ ಕೊ ಯ್ಯುವುದಕ್ಕೆ ನೀನಾರು? ” ಎಂದು ಕೋಪದಿಂ ಘರ್ಜಿಸಿ ನುಡಿ ಯಲು; ಆ ವನಪಾಲಕಿಯರಿರ್ವರೂ ಭಯಭ್ರಾಂತರಾಗಿ, ಆ ಕಂಚುಕಿಯಂ ಕು * ತು - ಎಲೈ ವಾತಾಯನನೇ, ನನ್ನ ಮೇಲೆ ಕೋಪವಂ ಗೆಯ್ಯದಿರು; ದು ಪ್ಯಂತಮಹಾರಾಯನು ವಸಂತೋತ್ಸವವಂ ನಿಲ್ಲಿಸಿದ ಸಂಗತಿಯಂ ನಾವು ತಿಳಿದವರ ಲ್ಲ' ಎನಲಾ ಕಂಚುಕಿಯು- ಎಲೆ ಸ್ತ್ರೀಯರುಗಳಿರಾ ! ಹಾಗಾದರೆ ಈ ಸಂಗ ತಿಯು ತಿಳಿಯದೆ, ಏನು ? ಈ ವನವನ್ನು ಆಶ್ರಯಿಸಿರುವ ಲತಾವೃಕ್ಷಗಳು ಮೊದಲಾಗಿ ರಾಯನ ಆಜ್ಞೆಯಂ ಮೀಲಾದೆ ಇರುವುವು. ಹೇಗೆಂದರೆ:- ಈ ಮಾವಿನ ಮರಗಳಲ್ಲಿ ಮೊಗ್ಗುಗಳುಂಟಾಗಿ ಬಹುಕಾಲವಾದರೂ ರಾಜಾಜ್ಞೆಗೆ ಭಯಗೊಂಡು ತಮ್ಮ ಪರಾಗಗಳೊಡಗೂಡದೆ ಇನ್ನು ಹಾಗೆಯೇ ಇರುವುದೆಂತ, ಗೋರಂಟೆ ಮರಗಳಲ್ಲಿ ಉಂಟಾಗಿರುವ ಮೊಗರುಗಾಯಿಗಳು ಪಕ್ಕ ಫಲವಾಗದೆ ಪಟ್ಟಿದಂತೆಯೇ ಇರುವುವೆಂತಲೂ, ಶಿಶಿರಋತವು ಪೋಗಿ ವಸಂತಕಾಲವು ಪ್ರಾಪ್ತಮಾ ದರೂ ಗಂಡುಗೊಗಿಲೆಗಳ ಧ್ವನಿಯು ಕಂಠದಲ್ಲಿ ಲೀನವಾಗಿರುವುದೆಂತಲೂ, ಮನ್ನ ಥನೂ ಕೂಡ ಬತ್ತಳಿಕೆಯಿಂದ ಅರ್ಧಬಾಣವಂ ಸಳೆದು ರಾಯನ ಆಜ್ಞೆಗೆ ಭಯ ಪಟ್ಟು ಅಲ್ಲೇ ಆ ಬಾಣವಂ ನಡೆಸುವನೆಂತಲೂ ಊಹಿಸುತ್ತಿರುವೆನು ಎಂದು ನ.ಡಿಯಲಾ ವಾಕ್ಯವಂ ಕೇಳಿ, ಮಳೆಯಾಗಿರ್ದ ಸಾನುಮತಿಯೆಂಬ ಅಪ್ಪರ ಸ್ತ್ರೀಯು: ಕಂಚುಕಿಯಾಡಿದ ವಾಕ್ಯವೂ ಯಥಾರ್ಥವೇ ಸರಿ. ರಾಜರ್ಷಿ ಯಾದ ದುಷ್ಯಂತರಾಯನು ಮಹಾಪ್ರಭಾವಶಾಲಿಯಾಗಿರುವನು” ಎಂದು ನುಡಿ ಯುತ್ತಿರಲು; ಮಧುಕರಿಯು ಆ ಕಂಚುಕಿಯಂ ಕು” ತು- ಎಲೈ ವಾತಾಯನನೇ ದೊರೆಯ ಭಾವಮೈದುನನಾದ ಮಿತ್ರಾವಸುವು ಕೆಲವು ದಿನದಿಂ ನಮ್ಮಿಬ್ಬರನ್ನು ಈ ಪ್ರಮದವನವನ್ನು ಸಲಹಿಕೊಂಡಿರುವುದೆಂದು ಕಳುಹಿಸಿ ಇರುವುದಿ೦ ರಾಯನ ಪಾದಸನ್ನಿಧಿಯಂ ಬಿಟ್ಟು ಇಲ್ಲಿ ಸಂಚರಿಸುತ್ತಾ ಸಮಸ್ತ ಮಾದ ಈ ವನದ