ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕರ್ಣಾಟಕ ಕಾವ್ಯಕಲಾನಿಧಿ ರಿದ ತುಟಿಯುಳ್ಳವನಾಗಿ, ಶಕುಂತಲೆಯ ಚಿಂತೆಯಿಂದುಂಟಾದ ಜಾಗರಣೆಯಿಂದ ಅತ್ಯಂತ ಬಳಲಿಕೆಯಿಂ ಯುಕ್ತವಾದ ನೇತ್ರವುಳ್ಳವನಾಗಿರ್ದರೂ ಸಾಣೆಹಿಡಿದ ಮಹಾರತ್ನದಂತೆ ಅತ್ಯಂತ ಕ್ಷೀಣನಾಗಿದ್ದರೂ ತನ್ನ ದೇಹದ ಒಂದಾನೊಂದು ಕಾಂತಿಯಿಂ ಮನೋಹರನಾಗಿ ಕಾಣುವನು ” ಎಂದು ಹೇಳುತ್ತಿರಲು; ಇತ್ತಲು, ಸಾನುಮತಿಯು ದುಷ್ಯಂತರಾಯನಂ ನೋಡಿ-ನಮ್ಮ ಶಕುಂತ ಲೆಯು ಈ ರಾಯನ ತಿರಸ್ಕಾರದಿಂದ ಅವಮಾನಿತಳಾಗಿದ್ದರೂ ಇವನಿಗೋಸುಗ ಅವಳು ಅತ್ಯಂತ ತಾಪದಿಂ ಸಂಕಟಪಡುವಳೆಂದು ತನ್ನ ಮನದೊಳ್ ತಿಳಿದುಕೊಳ್ಳು ತಿರಲು; ರಾಯನು ಚಿಂತೆಯಿಂದ ಉಪವನಾಭಿಮುಖವಾಗಿ ನಸುದಿರುಗಿ, ತನ್ನ ಮನ ವಂ ಕು” ತು-ಕೆಟ್ಟ ಮನವೇ, ಮೊದಲು ಹುಲ್ಲೆಯಂತೆ ಚಂಚಲವಾದ ನೇತ್ರ ವುಳ್ಳ ಪ್ರಾಣ ಪ್ರಿಯಳಾದ ಶಕುಂತಲೆಯು ನಾನಾ ಪ್ರಕಾರವಾದ ಗುತ್ತಿನ ಮಾ ತುಗಳಂ ಪೇಳಿ ಎಚ್ಚರವಂ ಗೆಯ್ಯರೂ ಮಲಗಿರ್ದು ಈಗ ಆ ಕೋಮಲಾಂಗಿಯ ತಿರಸ್ಕಾರದಿಂದುಂಟಾದ ದುಃಖವನ್ನನುಭವಿಸುವುದಕ್ಕೆ ಜಾಗರೂಕನಾಗಿರುವೆ !” ಎಂದು ನಿಂದಿಸುತ್ತಿರಲು; ಸಾನುಮತಿಯು ಇ೦ತು ರಾಯನು ಶಕುಂತಲೆಯಂ ಸ್ಮರಿಸುತ್ರ ಸಂತಾ ಪವಂ ಪೊಂದುತ್ತಿರುವುದು ಅವಳ ಪುಣ್ಯವೇ ಸರಿ ” ಎಂದು ನುಡಿದುಕೊಳ್ಳು ತಿರಲು; ವಿದೂಷಕನು, ರಾಯನು ಶಕುಂತಲೆಯ ವಿರಹವೆಂಬ ವ್ಯಾಧಿಯಂ ದಾಂ ಟಿದ್ದನು. ಮರಳಿ ಆ ವ್ಯಾಧಿಗೆ ತಗುಲಿಕೊಂಡನು. ಇದಕ್ಕೆ ಏನು ಚಿಕಿತ್ಸೆಯಂ ಮಾಡಬೇಕು? ಎಂದು ತನ್ನ ಮನದೊಳು ಆಲೋಚಿಸುತ್ತಿರಲು; ಅಷ್ಟ¥ಲ್ಲಿ ಕಂಡುಕಿಯು ರಾಯನ ಮುಂಭಾಗದೋಳೆ' ಬಂದು ನಿಂದು, “ಎಲೈ ಮಹಾರಾಜನೇ ನೀನು ಜಯವಂತನಾಗು! ಈಗ ಪ್ರಮದವನದ ರಮ್ಯ ವಾದ ಪ್ರದೇಶಗಳ ನಿರೀಕ್ಷಣೆಯಂ ಗೆಯ್ಯು ಕ್ರೀಡಾಶೈಲ ಮಾಧವೀಮಂಟಪ ಮುಂತಾದ ತಾಪಹರಮಾದ ಸ್ಥಾನಗಳಲ್ಲಿ ವಾಸವಂ ಗೆಯ್ಯಬಹುದು ಎಂದು ಬಿನ್ನಯಿಸಲು ; ರಾಯನು ತನ್ನ ಸಂಗಡ ಬಂದು ಕರದಲ್ಲಿ ಬೆತ್ತವಂ ಪಿಡಿದು ನಿಂದಿರುವ ಸ್ತ್ರೀಯಂ ಕುಳತು- ಎಲೆ ವೇತ್ರವತಿಯೇ, ಸೀನು ಜಾಗ್ರತೆಯಿ೦ ಆರ್ಯ ಪಿಶುನ ನೆಂಬ ಮಂತ್ರಿಯ ಸಮೀಪಕ್ಕೆ ಪೋಗಿ, ಈಗ ನಾವು ರಾತ್ರಿಯಲ್ಲಿ ಜಾಗರಣವಂ