ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಕುಂತಲನಾಟಕ ನವೀನಟೀಕೆ- . ೧೩೫ ಗೆಯು ದಳ'೦ ಸಿಂಹಾ : ನಾರೋಹಣವಂ ಗೆಯ್ಯುವುದಕ್ಕೆ ಬರುವುದಿಲ್ಲವಾಗಿರುವು ದಿ೦ದೀಗ ಏನಾದರೂ ಅವಶ್ಯಕವಾದ ರಾಜಕಾರ್ಯ ವಿದ್ದಲ್ಲಿ ಅದು ಪತ್ರಿಕೆ ಯಲ್ಲಿ ಬರೆಯಿಸಿಕೊಂಡು ಬರುವಂತೆ ಎನ್ನ ಆಜ್ಞೆಯಾಗಿರುವುದೆಂದು ಹೇಳುವುದು' ಎನಲಾ ವೇತ್ರವತಿಯು, “ಆಪ್ಪಣೆಯಾದಂತೆ ನಡೆದುಕೊಳ್ಳುವೆನು' ಎಂದು ವೇದ ಮೇಲೆ, ವಾತಾಯನನೆಂಬ ಕಂಚುಕಿಯಂ ಕರೆದು,.-ಇದೇ ಕಾರ್ಯವಂ ನೀನೂ ಮಾಡೆಂದು ಕಳುಹಿಸಲು; ವಿದೂಷಕನು- ಎಲೈ ಸ್ವಾಮಿಯೇ, ಈಗ ಒಂದು ನೊಣವೂ ಇಲ್ಲದಂತೆ ಎಲ್ಲರಂ ಕಳುಹಿಸಿ, ಶೀತಳಮಗಿ ತಾಪಪರಿಹಾರ ಮಾಗಿ ಮನಸ್ಸಿಗೆ ಸಂತೋಷವ ನ್ನು ಂಟು ಮಾಡುತ್ತಿರುವ ಈ ಪ್ರಮದವನ ಪ್ರದೇಶದಲ್ಲಿ ಸುಖವಾಗಿ ನಿನ್ನ ದೇಹವಂ ಸಂಷಗೊಳಿಸಬಹುದು ” ಎಂದು ನುಡಿಯಲು; ರಾಯನು ನಿಟ್ಟುಸಿರು ಬಿಡುತ್ತಾ ವಿದೂಷಕನಂ ಕುಜ' ತು - ಎಲೈ ಮಿತ್ರನೇ, ಲೋಕದಲ್ಲಿ ವಿಪತ್ತುಗಳು ರಂಧ್ರವನ್ನೇ ಕಾದುಕೊಂಡು ಇರುವುವೆಂದು ಜನರು ಹೇಳುವ ವಾಕ್ಯಗಳು ಯಥಾರ್ಥವಾಗಿ ತೆ ವುವು. ಹೇಗೆಂದರೆ: ಕಣ್ಣಮುನಿಯ ಪುತ್ರಿಯಾದ ಶಕುಂತಳೆಯ ಸ್ಮರಣೆಗೆ ಕಡೆಯಾಗಿರ್ದ ಎನ್ನ ಅಜ್ಞಾ ನವು ಈಗತಾನೇ ತೊಲಗಿರುವುದು. ಅಪ್ಪ • ಲ್ಲೇ ಸಮಸ್ತ ಜನವಂ ಬಾಧಿಸುತ್ತಿರುವ ಮನ್ಮಥನು ಎನ್ನ೦ ವ್ಯಥೆಯಂ ಪೊಂದಿಸುವುದಕ್ಕೋಸುಗ ತನ್ನ ಧನುಸ್ಸಿನಲ್ಲಿ ತನ ಕೆಂಪೇಗೆ 'ದ ಮಾವಿನ ಚಿಗುರಿನ ಸರಳನ್ನೇ ಸುತ್ತಿರುವನು. ಈ ದುಷ್ಟ ಮನ್ಮಥನ ಬಾಧೆಯಂ ಸೈರಿಸಲಾಹನು ” ಎಂದು ಹೇಳಲು; ವಿದೂಷಕನು- ಎಲೈ ರಾಯನೇ, ನೀನು ಸ್ವಸ್ಥನಾಗಿರು. ಈ ದುಷ್ಟನಾದ ಮನ್ಮಥನಂ ಈ ದಂಡದಿಂ ದಂಡಿಸುವೆನು' ಎಂದು ತಾನು ಹಿಡಿದಿರ್ದ ಊರು ಗೋಲನ್ನೆ ತುತ್ತಿರಲು; ರಾಯನು ವಿದೂಷಕನ ವಾಕ್ಯಕ್ಕೆ ನಸುನಗುತ.. ಎಲೈ ವಿದೂಷಕನೇ, ನಿನ್ನ ಬ್ರಹ್ಮತೇಜಂ ನೋಡಿದೆನು. ನೀನು ಮಾಡುವ ಸಾಹಸವಂತಿರಲಿ. ಈಗ ಎನ್ನ ಪ್ರಾಣಪ್ರಿಯಳಾದ ಶಕುಂತ ತೆಗೆ ಸ್ವಲ್ಪವಾಗಿಯಾದರೂ ಸದೃಶವಾಗಿರುವ ಒಳ್ಳೆಗಳಂ ನೋಡುತ್ತಾ ಯಾರ್ವಳದಲ್ಲಿ ಕುಳಿತುಕೊಳ್ಳುವೆ- ದಂ ಪೇಳು ಎನಲು; ವಿದೂಷಕನು- ಎಲೈ ಸ್ವಾಮಿ, ಈ ಪ್ರಮದವನಕ್ಕೆ ಪ್ರವೇಶವಂ ಗೆಯ್ಯು ವಾಗ್ಗೆ ಸಮೀಪಸೇವಕಳಾದ ಚತುರಿಕೆಗೆ, ಈ ವನದ ಮಾಧವೀಮಂಟಪದಲ್ಲಿ ಕೆಲವು ಕಲವಿರುವೆನು, ಅಲ್ಲಿಗೆ ನಾನು ಸ್ವಹಸ್ತದಿಂ ಬರೆದಿರುವ ಪೂಜ್ಯಳಾದ ವ "