ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--ಶಾಕುಂತಲನಾಟಕ ನವೀನಟೀಕೆ-- ೧೩೬ ರಾಯನು ಒಂದು ಗಳಿಗೆ ಏನೋ ಒಂದು ಪದಾರ್ಥವಂ ಧ್ಯಾನಿಸಿ ಎದೂತ ಕನಂ ಕು೫ ತು- ಎಲೈ ಮಿತ್ರನೇ, ಎನ್ನ ಸಂರಕ್ಷಿಸು ” ಎಂದು ಅತ್ಯಂತ ಸಂತಾಪಯುಕ್ತನಾಗಲು ; ವಿದೂಷಕನು- ಎಲೈ ಸ್ವಾಮಿಯೇ, ಇದೇನು ! ಈಪ್ರಕಾರವಾಗಿ ಕಾತರ ಪಡುವುದು ನಿನಗೆ ಮುಕ್ತವಲ್ಲ. ಸತ್ಪುರುಷರಾದವರು ಯಾವಾಗಲೂ ಶೋಕದಿಂ ಯುಕ್ತವಾದ ಮನವುಳ್ಳವರಾಗಲಾರು ಎಷ್ಟು ಗಾಳಿ ಬೀಸಿದರೂ ಬೆಟ್ಟಗಳು ಚಲಿಸುವುದೆ ? ಕೇಳು. ಎಷ್ಟು ದುಃಖವಿದ್ದಾಗ್ಯೂ ಧೈರವನ್ನವಲಂಬಿ ಸಬೇಕು' ಎಂದು ಸಮಧಾನೋಕ್ತಿಗಳು ಹೇಳುತ್ತಿರಲು ; ಕಾಯನು - ನಿಷ್ಕಾರಣವಾಗಿ ಎನ್ನ ಪತ್ನಿ ಯಲ್ಲ ಎಂದು ನುಡಿದಿದ್ದ೦ ಸಂತಾಪಯುಕ್ತಳಾಗ ಶಕುಂತಲೆಯಂ ಸ್ಮರಿಸಿಕೊಂಡು ಅನಾಥನಂತ ದುಃಖಪಾತ್ರ ನಾಗುವೆನು. ಆದರೆ ಅವಳು ಮಾಡಿದ ಚೇಷ್ಟೆಯಂ ಪೇಳುವೆನು, ಕೇಳು. ನಾನು ನಿಷ್ಟುರವಾಕ್ಯಗಳಿ ಶಕುಂತಲೆಯಂ ತಿರಸ್ಕಾರವಂ ಗೆಯ್ಯಲು, ಆ ಶಕುಂತಲೆಯು ಅತ್ಯಂತ ದುಃಖಾಕ್ರಾಂತಿಯಾಗಿ ತಪೋವನವಂ ಕwತು ಪೋಗುತಿರ್ದ ಶಾರ್ಙ್ಗರವ ಮೊದಲಾದ ತನ್ನ ಸ್ವಜನವನ್ನು ಅನುಸರಿಸಿ ಪೋಗಲಿಚ್ಛಿಸಲಾ ಕಣ್ಯ ಶಿಷ್ಯನಾಗಿ, ಗುರುವಿಗೆ ಸಮಾನನಾಗಿರುವ ಶಾರ್ಟ್ಸ್ರವನು ಅವಳಂ ಕು* ತು- ಎಲ್‌ ಶಕುಂತಳೆಯೇ, ಎನ್ನೊ ಡನೆ ಬರುವುದಕ್ಕೆ ನಿನಗೆ ಅಧಿಕಾರವೆಲ್ಲಿಯದು ? ನಿಲ್ಲು” ಎಂದು ಗರ್ಜಿಸಿ ನುಡಿಯಲಾಗ ದೀನಳಾಗಿ ಪೋಗದೆ ನಿಂತು, ಮಾಡಿದ ಕಾರ್ಯವಂ ಮಏತತುದಿ೦ ಕರನಾದ ಎನಲ್ಲಿ ಹೇರಳ ದುಃಖದಿಂದುಂಟಾದ ಕಂಬನಿಗಳಿಂ ಕಲುಷವಾದ ತನ್ನ ದೃಷ್ಟಿಯನ್ನಿರಿಸಿದಳೆಂಬುವುದಾವುದುಂಟೋ ಆಸbಯು ಎನ್ನಂ ವಿಷದಿಂ ಯುಕ್ತವಾದ ಸರಳಿನಂತೆ ಸುಡುತ್ತಿರುವುದು ' ಎಂದು ನುಡಿಯಲು ; ಸಾನುಮತಿಯು : ಈ ದುಷ್ಯಂತರಾಯನು ಶಕುಂತಲೆಯು ತಾನಾಗಿ ಬಂದ ಕಾಲದಲ್ಲಿ ತಿರಸ್ಕಾರವಂ ಗೆಯ್ಯು ಈಗ ತನಗೆ ಬೇಕಾದಾಗ ಈರೀತಿಯಿಂದ ಸಂತಾಪವಂ ಪೊಂದುತ್ತಿರುವನು. ಆದರೂ ಈ ರಾಯನು ಯಾವವಿಧದಲ್ಲಾದರೂ ನಮ್ಮ ಶಕುಂತಲೆಯಂ ಸ್ಮರಿಸುವನಲ್ಲ ಎಂದು ಎನಗೆ ಸಂತೋಷ ಪುಟ್ಟುತ್ತಿರುವುದು' ಎಂದು ನುಡಿದು ಕೊಳ್ಳುತ್ತಿರಲು, ವಿದೂಷಕನು- ಎಲೈ ಸ್ವಾಮಿಯೇ, ಶಕುಂತಲಾದೇವಿಯಂ ಯವನೋ ಒಬ್ಬ ಗಗನದಲ್ಲಿ ಸಂಚರಿಸುವೆನು ತೆಗೆದುಕೊಂಡು ಪೋಗಿರಬಹುದೆಂದು ಊಹಿಸು ತಿರುವೆನು ಎನ್ನಲು ; 18 5