ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಕರ್ಣಾಟಕ ಕಾವ್ಯಕಲಾನಿಧಿ * : ರಾಯನು ಎಲೈ ಮಿತ್ರನೇ, ಪತಿಯೇ ದೇವರಾಗಿರುವ ಆ ಶಕುಂತ ತಿಂ ಯಾವ ಪುರುಷನೂ ಮುಟ್ಟುವುದಕ್ಕೆ ಯೋಗ್ಯನಾಗಲಾನು. ಆದರೂ ನಿನಗೆ ದೇವಿಯಾದ ಆ ಶಕುಂತಲೆಯ ಉತ್ಪತ್ತಿಗೆ ಕಾರಣಳಾದ ಮೇನಕೆಯ 'ಸವಿ ಯರಲ್ಲಿ ಯಾವ ಒಬ್ಬಳು ತೆಗೆದುಕೊಂಡು ಪೋಗಿರುವಳೆಂಬ ಶಂಕೆಯು ಎನ್ನ ಪಿನಕುಂಟಾಗುವುದು ” ಎನಲು ; ಆವಾಕ್ಯಕ್ಕೆ ಸಾನುಮತಿಯು... ಎನ್ನ ಮಿತ್ರಳಾದ ಸಾರಸಿಕೆಯು ಶಕ ತೀರ್ಥಸಮೀಪದಲ್ಲಿರ್ದ ರಾಯನಿಗೆ ತಿಳಿಯದಂತೆ ಆ ಶಕುಂತಲೆಯಂ ವಿಮಾನದ ಇಟ್ಟು ತೆಗೆದುಕೊಂಡು ಪೋಗಿರುವಳು. ಆದರೂ ಈ ದುಷ್ಯಂತರಾಯನು ವಿರಹ ದಿಂ ಜ್ಞಾನಶೂನ್ಯನಾಗಿ ಹೇಳುವ ವಾಕ್ಯವು ಯಥಾರ್ಥವಾಗಿ ತೋರುವುದು? ಎನ್ನು ತ್ತಿರಲು ; ವಿದೂಷಕನು....(( ಎಲೈ ಸ್ವಾಮಿಯೇ, ನೀನು ಅಪ್ಪಣೆಯನ್ನಿತ್ತಂತೆ ಆ ಮೇನಕೆಯ ಸವಿಯ ತೆಗೆದುಕೊಂಡು ಪೋಗಿರುವುದು ನಿಜವಾದಲ್ಲಿ ಆ ಶಕುಂತ ಲೆಯ ಸಮಾಗಮವು ನಿನಗೆ ಜಾಗ್ರತೆಯಿಂದುಂಟಾಗುವುದು ಎನಲು ; ರಾಯನು ಅತಿಸಂತುಷ್ಟನಾಗಿ 10 ಎಲೈ ವಿದೂಷಕನೆ, ಅವಳ ಸಂಘಟ ನೆಯು ಹೇಗೆ ಉಂಟಾಗುವುದು ??” ಎನಲು; ವಿದೂಷಕನು ಎಲೈ ಸ್ವಾಮಿಯೇ, ತಂದೆತಾಯಿಗಳು ಪತಿಯನ್ನ ಗಲಿ ಅತಿಶಯವಾದ ದುಃಖವಂ ಪೊಂದುತ್ತಿರುವ ಮಗಳಾದ ಶಕುಂತಲೆಯಂ ನೋಡಿ ಕೊಂಡು ಇರಲಾದೆ ನಿನ್ನೊಡನೆ ಕೂಡಿಸುವ ಉಪಾಯವಂ ಮಾಡುವರಾದ Kಂದ ಚಾಗ್ರತೆಯಿಂ ಸಮಾಗಮವು ದೊರಕುವುದೆಂದು ನುಡಿದೆನು ” ಎನ್ನಲು ; ರಾಯಸು ನಿಡಿದಾಗಿ ನಿಟ್ಟುಸಿರು ಬಿಟ್ಟು, “ ಎಲೈ ಮಿತ್ರನಾದ ಮಾಂಡ ವ್ಯನೇ, ನಾನು ಶಕುಂತಲೆಯಂ ನೋಡಿದೆನೆಂಬುವುದು ಸ್ವಪ್ನದಲ್ಲಿ ಕಂಡು ಈಗ 'ಸ್ಮರಿಸಿಕೊಳ್ಳುವ ಒಗೆಯೋ, ಅಲ್ಲ ದಿರೆ ಯಾವನಾದರೂ ಇಂದ್ರಜಾಲವಂ ಗೆಯು ಮನೋಹರಳಾದ ಒಬ್ಬ ಸ್ತ್ರೀಯಂ ತೊ ಸಿ ಮತಿಗೈದಿರುವನೋ, ಅಂತು ಮಲ್ಲ ದಿರೆ ಒಬ್ಬಾಳೊಬ್ಬ ಸ್ತ್ರೀಯಂ ಕನ್ನಡಿಯಲ್ಲಿ ಪ್ರತಿಬಿಂಬಿಸಿ ಇರುವಳನ್ನಾಗಿ ಕಂಡು ಭ್ರಾಂತಿಯಂ ಪೋಂದಿರುವೆನೋ, ಹಾಗಲ್ಲದಿರೆ ಪೂರ್ವಜನ್ಮದ ಪ್ರಣ್ಯವ್ಯ ಧರಿಸಮಾ ಪ್ರಯಾದ ಪರಿಯೋ ಮತ್ತು ಆ ಮನೋಹರಾಂಗಿಯಾದವಳ ರವಾನಗಳಂ ನೋಡುವುದಕ್ಕಿಲ್ಲದಂತೆ ಅತಿಕ್ರಮಿಸಿ ಪೋದುವು. ಈ ನಾನಾ ಪ್ರಕಾರ ಅಭಿ ಲಾಷೆಗಳೆಂಬ ನದಿಗಳು ತೀರಗಳಿಲ್ಲದೆ ದಿಕ್ಕು ದಿಕ್ಕುಗಳು ಸಾರುತ್ತಿರುತ್ತದೆ